ಹಣ ಕಾಸು

10 ರೂಪಾಯಿ ನಾಣ್ಯವನ್ನು ಹೊಂದಿರುವವರಿಗೆ ಇಲ್ಲಿದೆ ಗುಡ್ ನ್ಯೂಸ್..!ತಿಳಿಯಲು ಈ ಲೇಖನ ಓದಿ..

By admin

December 26, 2017

ಕೆಲವು ಬ್ಯಾಂಕ್ ಗಳಲ್ಲಿ ನ್ಯಾಣ್ಯಗಳನ್ನು ಸ್ವೀಕರಿಸಲು ಹಿಂದೇಟು ಹಾಕಿದ ಕಾರಣ, ನಾಣ್ಯಗಳನ್ನು ಹೆಚ್ಚಿನ ಜನ ಸ್ವೀಕರಿಸುತ್ತಿಲ್ಲ ಎಂಬ ದೂರು ಕೇಳಿ ಬಂದಿದ್ದವು.

10 ರೂಪಾಯಿ ನಾಣ್ಯವನ್ನು ರದ್ದು ಮಾಡಿರದಿದ್ದರೂ, ಅನೇಕ ಕಡೆಗಳಲ್ಲಿ ವರ್ತಕರು, ಜನ ಸಾಮಾನ್ಯರು ಇವುಗಳನ್ನು ಸ್ವೀಕರಿಸಲು ಹಿಂದೇಟು ಹಾಕ್ತಾರೆ.ಇವೇ ಮೊದಲಾದ ಕಾರಣಗಳಿಂದಾಗಿ ಬ್ಯಾಂಕ್ ಗಳಲ್ಲಿ ನಾಣ್ಯ ಮೇಳ ನಡೆಸುವಂತೆ ಭಾರತೀಯ ರಿಸರ್ವ್ ಬ್ಯಾಂಕ್(ಆರ್.ಬಿ.ಐ.) ವಾಣಿಜ್ಯ ಬ್ಯಾಂಕ್ ಗಳಿಗೆ ಸೂಚನೆ ನೀಡಿದೆ.

ಬ್ಯಾಂಕ್ ಶಾಖೆಗಳಲ್ಲಿ ನಾಣ್ಯಗಳ ಮೇಳ ನಡೆಸುವಂತೆ ಆರ್.ಬಿ.ಐ. ಸೂಚನೆ ನೀಡಿದೆ. 2016 ರ ನವೆಂಬರ್ ನಲ್ಲಿ 500 ರೂ. ಮತ್ತು 1000 ರೂ. ಮುಖಬೆಲೆಯ ನೋಟುಗಳನ್ನು ರದ್ದು ಮಾಡಿದ ನಂತರದಲ್ಲಿ ನಾಣ್ಯಗಳನ್ನು ಹೆಚ್ಚಿನ ಪ್ರಮಾಣದಲ್ಲಿ ವಿತರಿಸಲಾಗಿತ್ತು.

ನಂತರದಲ್ಲಿ ಸ್ಥಳಾವಕಾಶದ ಕೊರತೆಯಿಂದ ಸಣ್ಣ ನಗರಗಳು, ಪಟ್ಟಣಗಳ ಬ್ಯಾಂಕ್ ಗಳಲ್ಲಿ ನಾಣ್ಯಗಳನ್ನು ಸ್ವೀಕರಿಸುತ್ತಿರಲಿಲ್ಲ. ಇದರಿಂದಾಗಿ ಸಣ್ಣ ವ್ಯಾಪಾರಿಗಳು, ವರ್ತಕರು, ಜನಸಾಮಾನ್ಯರು ನಾಣ್ಯಗಳನ್ನು ಸ್ವೀಕರಿಸಲು ಹಿಂದೇಟು ಹಾಕಿದ್ದರು.

ಇದರಿಂದಾಗಿ ಹೆಚ್ಚಿನವರು ನಾಣ್ಯಗಳನ್ನು ತಮ್ಮಲ್ಲಿಯೇ ಸಂಗ್ರಹಿಸಿಟ್ಟುಕೊಂಡಿದ್ದರು. ಈ ಬಗ್ಗೆ ವ್ಯಾಪಕ ದೂರುಗಳು ಕೇಳಿ ಬಂದ ಹಿನ್ನಲೆಯಲ್ಲಿ ಬ್ಯಾಂಕ್ ಗಳಲ್ಲಿ ನಾಣ್ಯಗಳನ್ನು ಸ್ವೀಕರಿಸಲು ನಾಣ್ಯ ಮೇಳಗಳನ್ನು ನಡೆಸುವಂತೆ ಆರ್.ಬಿ.ಐ. ಸೂಚನೆ ನೀಡಿದೆ.

 

* 10 ರೂ. ನೋಟಿನ ಸರಾಸರಿ ಆಯುಷ್ಯ 9-10 ತಿಂಗಳು * ಪ್ರತಿ 10 ರೂ. ನೋಟು ಮುದ್ರಣದ ವೆಚ್ಚ 96 ಪೈಸೆ

* ಪ್ರತಿ 10 ರೂ. ನಾಣ್ಯ ಟಂಕಿಸಲು ವೆಚ್ಚ 6.10 ರೂ.