ಬೈಕಿನಲ್ಲಿ ಹೆಲ್ಮೆಟ್ ಹಾಕದೆ ಹೋಗುತ್ತಿದ್ದರೆ ಟ್ರಾಫಿಕ್ ಪೊಲೀಸರು ದಂಡ ಹಾಕಿದರೆ ಸರಿ, ಕಾರಿನಲ್ಲಿ ಸೀಟ್ ಬೆಲ್ಟ್ ಹಾಕದಿದ್ದರೆ ದಂಡ ಬೀಳುತ್ತೆ…..ಅದು ಸಹ ಸರಿ. ಆದರೆ ತನ್ನದೇ ಹೊಲದಲ್ಲಿ ನಿಲ್ಲಿಸಿದ್ದ ಎತ್ತಿನ ಬಂಡಿಗೆ ದಂಡ ಹಾಕುವುದೆಂದರೆ…? ಅದೂ ಒಂದು ಸಾವಿರ ರೂಪಾಯಿ…!
ಇಂಥದ್ದೊಂದು ಘಟನೆ ಉತ್ತರ ಪ್ರದೇಶದ ಡೆಡ್ರಾಡೂನ್ ವ್ಯಾಪ್ತಿಯ ಶಹಾಪುರ ಹೊರವಲಯದಲ್ಲಿರುವ ಚಾರ್ಬಾ ಗ್ರಾಮದ ಹಸನ್ ಎಂಬಾತನಿಗೆ ಒಂದು ಸಾವಿರ ರೂಪಾಯಿ ದಂಡ ಹಾಕಲಾಗಿದೆ.
ಸಬ್ ಇನ್ಸ್ ಪೆಕ್ಟರ್ ಪಂಕಜ್ ಕುಮಾರ್ ಮತ್ತವರ ತಂಡ ನೂತನ ಸಾರಿಗೆ ನಿಯಮದ ಅಡಿ ದಂಡ ಹಾಕಿದ್ದು, ಬಳಿಕ ರೈತ ಬಲವಾಗಿ ಪ್ರಶ್ನಿಸಿದಾಗ ದಂಡವನ್ನು ವಾಪಸ್ ಪಡೆಯಲಾಗಿದೆ.
ಕೊನೆಗೆ ಸ್ಪಷ್ಟೀಕರಣ ನೀಡಿರುವ ಪೊಲೀಸರು, ಆ ಪ್ರದೇಶದಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ತಾವು ತೆರಳಿದ್ದು, ಅಲ್ಲಿ ಈ ಎತ್ತಿನ ಬಂಡಿಯನ್ನು ಯಾರ ಸುಪರ್ದಿ ಇಲ್ಲದೆ ಬಿಡಲಾಗಿತ್ತು. ಈ ಹಿನ್ನೆಲೆಯಲ್ಲಿ ಅದರ ಮಾಲೀಕನನ್ನು ಹುಡುಕಿ ದಂಡ ಹಾಕಿದ್ದೇವೆ ಎಂದು ಹೇಳಿದ್ದಾರೆ.