ಜ್ಯೋತಿಷ್ಯ

ಹೊಸ ವರ್ಷ ಆ ಮಹಾದೇವನ ಕೃಪೆ ನಿಮ್ಮ ಮೇಲೆ ಆಗಬೇಕೆಂದ್ರೆ ತಪ್ಪದೇ ಹೀಗೆ ಮಾಡಿ…

By admin

December 31, 2018

ಹೊಸ ವರ್ಷದ ಆಗಮನಕ್ಕೆ ಒಂದೇ ದಿನ ಬಾಕಿಯಿದೆ. ಹೊಸ ವರ್ಷ ಈ ವರ್ಷಕ್ಕಿಂತ ಹೆಚ್ಚು ಖುಷಿ, ಯಶಸ್ಸು ತರಲಿ ಎಂದು ಪ್ರತಿಯೊಬ್ಬರೂ ಬಯಸ್ತಾರೆ. ಹೊಸ ವರ್ಷ ಸುಖ, ಸಂತೋಷ, ಸಮೃದ್ಧಿಯಿಂದ ಕೂಡಿರಬೇಕೆಂದ್ರೆ ಕೆಲವೊಂದು ಉಪಾಯಗಳನ್ನು ಅನುಸರಿಸಬೇಕಾಗುತ್ತದೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಹೊಸ ವರ್ಷ ಸುಖ, ಸಂತೋಷದಿಂದ ಕೂಡಿರಬೇಕು ಎಂದಾದ್ರೆ ಹೊಸ ವರ್ಷದ ಮೊದಲ ದಿನ ಅಂದ್ರೆ ಜನವರಿ ಒಂದರಂದು ತಾಮ್ರದ ಲೋಟದಲ್ಲಿ ನೀರನ್ನು ಹಾಕಿ, ಅದಕ್ಕೆ ಕೇಸರಿ ಹಾಕಿ ಶಿವಲಿಂಗಕ್ಕೆ ಅರ್ಪಿಸಿ. ಜಲ ಅರ್ಪಿಸುವ ವೇಳೆ ಓಂ ಮಹದೇವಾಯ ನಮಃ ಮಂತ್ರವನ್ನು ಜಪಿಸಿ.

ಹೊಸ ವರ್ಷ ಆರ್ಥಿಕ ವೃದ್ಧಿ ಬಯಸುತ್ತಿದ್ದರೆ ಬೆಳ್ಳಿ ಲೋಟದಲ್ಲಿ ಹಾಲು, ಸಕ್ಕರೆ, ಮೊಸರು, ತುಪ್ಪ, ಜೇನು ತುಪ್ಪವನ್ನು ಸೇರಿಸಿ. ಈ ಪಂಚಾಮೃತವನ್ನು ಶಿವಲಿಂಗಕ್ಕೆ ಅರ್ಪಿಸಿ. ಈ ವೇಳೆ ಓಂ ರುದ್ರಾಯ ನಮಃ ಮಂತ್ರವನ್ನು 108 ಬಾರಿ ಪಠಿಸಿ.

ಮನೆಯಲ್ಲಿ ಎಂದೂ ಆಹಾರಕ್ಕೆ ಕೊರತೆಯಾಗಬಾರದು ಎಂದಾದ್ರೆ ಹೊಸ ವರ್ಷದ ಮೊದಲ ದಿನ ಬಡ ವ್ಯಕ್ತಿಗೆ ಐದು ಕೆ.ಜಿ ಗೋಧಿಯನ್ನು ಅರ್ಪಿಸಿ.

ಹೊಸ ವರ್ಷದಲ್ಲಿ ಶಿವನ ಕೃಪೆಗೆ ಪಾತ್ರರಾಗಬೇಕು ಎಂದಾದ್ರೆ ಶಿವನ ವಾಹನ ನಂದಿಗೆ ಹಸಿರು ಹುಲ್ಲನ್ನು ಅರ್ಪಿಸಿ.

ಹೊಸ ವರ್ಷ ವೈವಾಹಿಕ ಜೀವನ ಸುಖವಾಗಿರಬೇಕೆಂದ್ರೆ ಶಿವಲಿಂಗಕ್ಕೆ ಸುಗಂಧ ದ್ರವ್ಯ ಅರ್ಪಿಸಿ. ಪಾರ್ವತಿಯ ಐದು ಹೆಸರುಗಳನ್ನು ಉಚ್ಚರಿಸಿ.