ಗ್ಯಾಜೆಟ್

ಹೊಸ ಜಿಯೋ ಫೋನ್’ನಲ್ಲಿ ಎಷ್ಟು ಸಿಮ್ ಹಾಕಬಹುದು?ಈ ಫೋನ್’ನಲ್ಲಿ ಬೇರೆ ಕಂಪನಿ ಸಿಮ್ ಹಾಕ್ಬಹುದಾ???

By admin

July 27, 2017

ಕೆಲವು ದಿನಗಳ ಹಿಂದಷ್ಟೇ ಮುಖೇಶ್ ಅಂಬಾನಿ ನೇತೃತ್ವದ ಜಿಯೋ ಕಂಪನಿ ಕಡಿಮೆ ಬೆಲೆ ಜಿಯೋ ಫ್ಯೂಚರ್ ಫೋನ್ ಬಿಡುಗಡೆ ಮಾಡಿದ್ದರು.

ಕೇವಲ 1500ರೂ ಡೆಪಾಸಿಟ್ ಮಾಡಿದ್ರೆ ಈ ಫೋನ್ ಸಿಗುತ್ತದೆ. ಆದರೆ ಒಂದು ಖುಷಿ ವಿಚಾರ ಏನಂದ್ರೆ ಮೂರು ವರ್ಷದ ಬಳಿಕ ಈ ಫೋನ್ ನೀಡಿದ ಹಣವನ್ನು ಮರುಪಾವತಿ ಮಾಡಲಾಗುವುದು ಎಂದು ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ತಿಳಿಸಿದ್ದಾರೆ.

ಅಂದ ಹಾಗೆ ಇದೆಲ್ಲಾ ನಿಮಗೆ ತಿಳಿದಿರುವ ವಿಷಯವೇ.ಅಸಲಿ ವಿಷಯ ಏನಪ್ಪ ಅಂದ್ರೆ ಜಿಯೋ ಕಂಪನಿ ಫ್ರೀ ಫೋನ್ ಕೊಡುವುದಾಗಿ ಹೇಳಿದ ದಿನವೇ, ಎಲ್ಲರಲ್ಲೂ ಮೂಡಿದ ಪ್ರಶ್ನೆ ಏನಂದರೆ ಈ ಫೋನ್’ನಲ್ಲಿ ಎಷ್ಟು ಸಿಮ್ ಹಾಕಬಹುದೆಂದು? ಅಂದರೆ ಸಿಂಗಲ್ ಸಿಮ್ ಅಥವಾ ಡ್ಯುಯಲ್ ಸಿಮ್ ಫೋನ್ ಎನ್ನುವ ಪ್ರಶ್ನೆಗೆ ಸರಿಯಾದ ಉತ್ತರ ಸಿಕ್ಕಿರಲಿಲ್ಲ.

ಈ ಫೋನ್’ನಲ್ಲಿ ಎಷ್ಟು ಸಿಮ್ ಹಾಕಬಹುದು ಗೊತ್ತಾ?

ಈಗ ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ.ಫೋನ್ ಬಿಡುಗಡೆಯಾದ ಸಂದರ್ಭದಲ್ಲಿ ಹಾರ್ಡ್ ವೇರ್ ಗುಣವೈಶಿಷ್ಟ್ಯಗಳು ಪ್ರಕಟಗೊಂಡಿದ್ದರೂ ಎಷ್ಟು ಸಿಮ್ ಹಾಕಬಹುದು ಎನ್ನುವ ಮಾಹಿತಿ ಪ್ರಕಟವಾಗಿರಲಿಲ್ಲ.

ಕೆಲ ಮಾಧ್ಯಮಗಳಲ್ಲಿ ಡ್ಯುಯಲ್ ಸಿಮ್ ಹಾಕಬಹುದು ಎನ್ನುವ ವರದಿ ಪ್ರಕಟವಾಗಿತ್ತು. ಆದರೆ ಈಗ ಕಂಪನಿಯ ವಕ್ತಾರರೊಬ್ಬರು ಈ ಫೋನಿನಲ್ಲಿ ಸಿಂಗಲ್ ಸಿಮ್ ಮಾತ್ರ ಹಾಕಬಹುದು ಎಂದು ಹೇಳಿದ್ದಾರೆ. 4ಜಿ ಎಲ್ಟಿರಇ ಸಿಮ್ ಮಾತ್ರ ಈ ಫೋನಿಗೆ ಹಾಕಲು ಸಾಧ್ಯವಿದೆ. ಆಗಸ್ಟ್ 24ರಿಂದ ಆನ್ ಲೈನ್ ಮತ್ತು ಆಫ್ಲೈಈನ್ ನಲ್ಲಿ ಈ ಫೋನಿಗೆ ಬುಕ್ ಮಾಡಬಹುದು ಎಂದು ಅವರು ತಿಳಿಸಿದ್ದಾರೆ.

ಈ ಜಿಯೋ ಫ್ಯೂಚರ್ ಫೋನ್’ನಲ್ಲಿ ಬೇರೆ ಕಂಪನಿ ಸಿಮ್ ಹಾಕಬಹುದಾ? ಎಲ್ಟಿನಇ ಟೆಕ್ನಾಲಜಿಗೆ ಸಪೋರ್ಟ್ ಮಾಡುವ ಕಾರಣ ದೇಶದಲ್ಲಿರುವ ಏರ್ಟೆಲ್ , ವೋಡಾಫೋನ್, ಐಡಿಯಾ, ಬಿಎಸ್ಎನ್ಎಲ್, ಕಂಪೆನಿಯ ಸಿಮ್ ಜಿಯೋ ಫೋನಿನಲ್ಲಿ ಹಾಕಲು ಸಾಧ್ಯವಿಲ್ಲ.

ಏನೆಲ್ಲಾ ಫ್ಯೂಚರ್’ಗಳಿವೆ ಗೊತ್ತಾ? ಆಲ್ಫಾ ನ್ಯುಮರಿಕ್ ಕೀಪ್ಯಾಡ್, 2.4 ಇಂಚಿನ ಕ್ಯೂವಿಜಿಎ ಡಿಸ್ಪ್ಲೇ 240*320 ಪಿಕ್ಸೆಲ್, ಎಫ್ ಎಂ ರೇಡಿಯೋ, ಟಾರ್ಚ್ ಲೈಟ್, ಹೆಡ್ ಫೋನ್ ಜ್ಯಾಕ್, ಎಸ್ಡಿ ಕಾರ್ಡ್ ಸ್ಲಾಟ್, ಫೋನ್ ಕಾಂಟಾಕ್ಟ್, ಕಾಲ್ ಹಿಸ್ಟರಿ ಇರಲಿದೆ.

ಈ ಫೋನ್ ಖರೀದಿಸಿದ ಗ್ರಾಹಕರಿಗೆ ಬಂಪರ್ ಆಫರ್!

ಈ ಫೀಚರ್ ಫೋನ್ ಖರೀದಿಸಿದ ಗ್ರಾಹಕರಿಗೆ ತಿಂಗಳಿಗೆ 153 ರೂ. ರಿಚಾರ್ಚ್ ಆಫರ್ ಅನ್ನು ಜಿಯೋ ಬಿಡುಗಡೆ ಮಾಡಿದೆ.

ಈ ಆಫರ್ ನಲ್ಲಿ ಗ್ರಾಹಕರಿಗೆ ಆನ್ ಲಿಮಿಟೆಡ್ ಡೇಟಾ ಪ್ಯಾಕ್ ಸಿಗಲಿದೆ. ಅಷ್ಟೇ ಅಲ್ಲದೇ ಎಂದಿನಂತೆ ಹೊರ ಹೋಗುವ ಕರೆಗಳು ಮತ್ತು ಮೆಸೇಜ್ ಗಳು ಉಚಿತವಾಗಿ ಸಿಗಲಿದೆ.

ಮೂಲ: