ವಾಹನ ಕಲಿಕಾ ಪರವಾನಗಿ (ಎಲ್ಎಲ್ಆರ್) ಹೊಂದಿದ್ದು, ಅಂತಹ ಸಂದರ್ಭದಲ್ಲಿ ಅಪಘಾತವಾದರೆ ವಿಮಾ ಕಂಪನಿಗಳು ಪರಿಹಾರ ನೀಡಬೇಕು ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಹತ್ತು ವರ್ಷಗಳ ಹಿಂದಿನ ಪ್ರಕರಣವೊಂದರ ತೀರ್ಪು ಈಗ ಹೊರಬಿದ್ದಿದ್ದು, ಎಲ್ಎಲ್ಆರ್ ಇದ್ದ ವೇಳೆ ಅಂತವರು ವಾಹನ ಚಾಲನೆ ಮಾಡುವಾಗ ಡಿಎಲ್ ಹೊಂದಿದ ಪರಿಣಿತರು ಇರಬೇಕೆಂಬ ನಿಯಮವಿದೆ.
ಆದರೆ ಇದು ದ್ವಿಚಕ್ರವಾಹನಕ್ಕೋ ಅಥವಾ ನಾಲ್ಕು ಚಕ್ರ ವಾಹನಕ್ಕೋ ಎಂಬುದರ ಕುರಿತು ಸ್ಪಷ್ಟತೆ ಇಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಈ ನಿಯಮ ನಾಲ್ಕು ಚಕ್ರ ವಾಹನಗಳಿಗೆ ಅನ್ವಯಿಸಬೇಕು ಎಂದು ನ್ಯಾಯಪೀಠ ಹೇಳಿದ್ದು, ಎಲ್ಎಲ್ಆರ್ ಅಧಿಕೃತ ದಾಖಲೆ ಎಂದು ಪರಿಗಣಿಸಿ ವಾಹನ ಅಪಘಾತಕ್ಕೀಡಾದ ಸಂದರ್ಭದಲ್ಲಿ ಕಂಪನಿ ಪರಿಹಾರ ನೀಡಬೇಕು ಎಂದು ಸೂಚಿಸಿದೆ.