ಸುದ್ದಿ

ಹೆರಿಗೆ ಅಂದ್ರೆ ಸಾಕು ಹೆಚ್ಚು ಹೆಚ್ಚು ದುಡ್ಡು ಪೀಕಿಸೊ ಆಸ್ಪತ್ರೆ ಹಾಗು ಡಾಕ್ಟರ್ ಗಳು ಈ ಬುಡಕಟ್ಟು ಮಹಿಳೆ ಮುಂದೆ ತಲೆ ಬಾಗಲೇಬೇಕು, ಯಾಕಂತೀರಾ ಮುಂದೆ ಓದಿ…..!

By admin

June 03, 2019

ಒಂದು ಸಣ್ಣ ಕಾಯಿಲೆಗೆ ಹೆಚ್ಚು ಹೆಚ್ಚು ದುಡ್ಡು ಪೀಕಿಸುವ ಈಗಿನ ಆಸ್ಪತ್ರೆಗಳ ಮಂದಿಯನ್ನು ನೋಡಿದರೆ ಈಕೆ ಬಹಳ ಸಿಂಪಲ್ ಅನಿಸದೇ ಇರೋದಿಲ್ಲ , ಶಾಲೆಯ ಮೆಟ್ಟಿಲನ್ನೇ ಹತ್ತಿಲ್ಲ ಆದರೂ ಈಕೆ ಆ ಊರಿನ ಹಳ್ಳಿಗರ ಪಾಲಿಗೆ ಡಾಕ್ಟರ್ ಯಾವ ಎಂಬಿಬಿಎಸ್ ಓದಿಲ್ಲ ಯಾವ ಸರ್ಜನ್ ಕೂಡ ಅಲ್ಲ ಅಷ್ಟೇ ಅಲ್ಲದೆ ಯಾವುದೇ ಫಾರಿನ್ಗೆ ಹೋಗಿ ಅಲ್ಲಿ ಓದಿಕೊಂಡು ಬಂದಿಲ್ಲ.ಬಿಳಿಗಿರಿ ರಂಗನ ಬೆಟ್ಟದಲ್ಲಿ ವಾಸಿಸುವ ಸೋಲಿಗ ಎಂಬ ಬುಡಕಟ್ಟು ಜನಾಂಗಕ್ಕೆ ಸೇರಿದ ಈ ಮಹಿಳೆಯ ಹೆಸರು ಜಡೇ ಮಾದಮ್ಮ ಎಂದು , ಚಾಮರಾಜನಗರದ ಸುತ್ತಮುತ್ತಲ ಹಳ್ಳಿಗಳ ಪಾಲಿಗೆ ಈಕೆ ದೇವತೆಯೇ ಸರಿ ಈಕೆ ಹೆಚ್ಚು ದುಡ್ಡನ್ನು ಕೇಳುವುದಿಲ್ಲ ಹಾಗೆಯೇ ಈಕೆ ಜೀವನ ನಡೆಸುವುದು ಒಂದು ಸಾಧಾರಣ ಜೋಪಡಿಯಲ್ಲಿ .

ಇತ್ತೀಚಿನ ದಿನಗಳಲ್ಲಿ ನಾರ್ಮಲ್ ಡೆಲಿವರಿ ಕಿಂತ ಸಿ ಸೆಕ್ಷನ್ ಡೆಲಿವರಿ ಗಳು ಬಹಳ ಹೆಚ್ಚಾಗಿ ಹೋಗಿವೆ ಆಸ್ಪತ್ರೆಗಳು ದುಡ್ಡಿನ ಹಿಂದೆ ಬಿದ್ದು ನಾರ್ಮಲ್ ಡೆಲಿವರಿಯನ್ನು ಸಹ ಸರ್ಜರಿ ಮಾಡುವಂತೆ ಮಾಡಿ ಲಕ್ಷಾಂತರ ರೂಪಾಯಿ ಹಣ ಪೀಕಿಸುತ್ತಾರೆ ಆದರೆ ಈಕೆ ಯಾವುದೇ ಮದ್ದನ್ನು ನೀಡುವುದಿಲ್ಲ ಯಾವುದೇ ಚುಚ್ಚುಮದ್ದಿನ ಮೊರೆ ಹೋಗುವುದಿಲ್ಲ ಈ ಪ್ರಸವ ತಜ್ಞೆ ಇಲ್ಲಿನವರೆಗೆ ಎರಡು ಸಾವಿರದ ಒಂಬೈನೂರಕ್ಕೂ ಹೆಚ್ಚು ಹೆರಿಗೆಗಳನ್ನು ಮಾಡಿಸಿದ್ದಾರೆ .

ಇದುವರೆಗೆ ಈಕೆ ಮಾಡಿದ ಹೆರಿಗೆಗಳು ಯಾವುದು ಸೋಲನ್ನು ಕಂಡಿಲ್ಲ , ಇದಕ್ಕೂ ಹಿಂದೆ ಆಕೆಯ ತಾಯಿ ಮತ್ತು ಅಜ್ಜಿ ಈ ರೀತಿಯ ಹೆರಿಗೆಗಳನ್ನು ಮಾಡಿಸುತ್ತಿದ್ದರಂತೆ ಇದಕ್ಕೂ ಮುಂಚೆ ಅವರ ಅಜ್ಜಿ ಅವರ ಹೆಸರು ಸಹ ಮಾದಮ್ಮ ಎಂದು ಆಕೆ ಈ ಹೆರಿಗೆ ತಂತ್ರವನ್ನು ಕಂಡು ಹಿಡಿದರಂತೆ ಸುತ್ತಮುತ್ತಲಿನ ಹಳ್ಳಿಗಳ ಹೆಣ್ಣುಮಕ್ಕಳಿಗೆ ಆಕೆಯೇ ಮುಂದೆ ನಿಂತು ಹೆರಿಗೆ ಮಾಡಿಸಿದರಂತೆ ನಂತರ ಅವರ ಮಗಳು ಅಂದರೆ ಮಾದಮ್ಮ ಅವರ ತಾಯಿಗೂ ಕೂಡ  ಈ ಕಲೆ ಒದಗಿ ಬಂತು ಮಾದಮ್ಮ ಹತ್ತು ವರ್ಷದ ಚಿಕ್ಕ ಹುಡುಗಿಯಾಗಿದ್ದಾಗ ಈ ಕಲೆಯಲ್ಲಿ ಆಸಕ್ತಿ ತೋರಿಸಿ ತಾಯಿಯ ಜೊತೆಗೆ ಹೆರಿಗೆ ಮಾಡಿಸಲು ಹೋದರಂತೆ ಆಗ ತಾಯಿ ಮಗುವನ್ನು ತಿರುಗಿಸಲು ಹೇಳಿದರಂತೆ ನಂತರ ತಾಯಿಗೆ ಆಶ್ಚರ್ಯಕರ ರೀತಿಯಲ್ಲಿ ಈ ಕೆಲಸವನ್ನು ಮಾಡಿಕೊಟ್ಟರಂತೆ ಹೀಗೆ ಕಳೆದ ಹದಿನೈದು ವರ್ಷಗಳಿಂದ ಪ್ರಸವ ತಜ್ಞೆಯಾಗಿ ಖ್ಯಾತಿ ಹೊಂದಿದ್ದಾರೆ .

ಹೆರಿಗೆಯಾಗುವ ಸಮಯದಲ್ಲಿ ಹೆಣ್ಣು ಮಕ್ಕಳನ್ನು ಒಂದು ಪದ್ಧತಿಯ ರೀತಿಯಲ್ಲಿ ಕೂಡಿಸಿ ಅವರಿಗೆ ಕೆಲವು ಮಂತ್ರಗಳನ್ನು ಹೇಳುತ್ತಾರಂತೆ , ಈ ಕ್ರಿಯೆಯಲ್ಲಿ ಹರಳೆಣ್ಣೆಯನ್ನು ಈಕೆ ಕೈಗಳಿಗೆ ಹಚ್ಚಿಕೊಂಡು ಮಗುವನ್ನು ತಿರುಗಿಸುತ್ತಾರೆ ಆಗ  ಹರಳೆಣ್ಣೆ ಏನಾದರೂ ಗಟ್ಟಿಯಾಗಿ ಅಂಟಿದರೆ  ಹೆರಿಗೆ ಸ್ವಲ್ಪ ಕಷ್ಟವಾಗಬಹುದು ಎಂದು ಅದೇ ಹರಳೆಣ್ಣೆ ತೆಳುವಾಗಿದ್ದರೆ ಹೆರಿಗೆ ಸುಲಭವಾಗುತ್ತದೆ ಎಂದು.

ಕೆಲವಾರು ವರ್ಷಗಳ ಹಿಂದೆ ಈಕೆ ಹೆರಿಗೆ ಮಾಡಿಸುವಾಗ ಗೋಣಿಚೀಲಗಳನ್ನು ಬಳಸುತ್ತಿದ್ದರಂತೆ ಆದರೆ ಇತ್ತೀಚಿನ ಕೆಲವು ವರ್ಷಗಳಿಂದ ಆರೋಗ್ಯ ಇಲಾಖೆಯಿಂದ ಈಕೆಗೆ ಸಹಾಯ ದೊರೆಯುತ್ತಿದೆಯಂತೆ ಇದರಿಂದ ಈಕೆಗೆ ಆಧುನಿಕ  ನೈರ್ಮಲ್ಯಕ್ಕೆ ಸಂಬಂಧಿಸಿದ  ಉಪಕರಣಗಳು ದೊರೆಯುತ್ತಿದೆಯಂತೆ ಹಾಗೆಯೇ ಪ್ರತಿ ಹೆರಿಗೆಗೆ ಇವರಿಗೆ ನೂರು ರೂಪಾಯಿಗಳನ್ನು ಕೊಡುತ್ತಾರಂತೆ ಆ ನೂರು ರೂಪಾಯಿಯಲ್ಲಿ ಈಕೆ ಹಾಗೂ ಇಬ್ಬರು ಮಕ್ಕಳ ಜೀವನ ನಡೆದು ಹೋಗುತ್ತಿದೆಯಂತೆ .