ಹೆಬ್ಬಾವು ಸುತ್ತಿ, ಉಸಿರುಗಟ್ಟಿ ಮಹಿಳೆಯೊಬ್ಬರು ಸಾವಿಗೀಡಾಗಿದ್ದು, ಅವರ ಮನೆಯಲ್ಲಿ 140 ಹಾವುಗಳು ಪತ್ತೆಯಾಗಿ ಅಚ್ಚರಿ ಮೂಡಿಸಿದೆ. ಅಮೆರಿಕದ ಇಂಡಿಯಾನಾ ಎಂಬಲ್ಲಿ 36 ವರ್ಷ ವಯಸ್ಸಿನ ಲಾರಾ ಹರ್ಸ್ಟ್ ಎಂಬ ಮಹಿಳೆಯ ದೇಹವನ್ನುಹೆಬ್ಬಾವು ಸುತ್ತಿಕೊಂಡಿತ್ತು. ಅವರು ಅದರಿಂದ ತಪ್ಪಿಸಿಕೊಳ್ಳಲುಎಷ್ಟು ಪ್ರಯತ್ನ ನಡೆಸಿದರೂ ಸಾಧ್ಯವಾಗಿರಲಿಲ್ಲ.ಹಾಗೇ ಉಸಿರುಗಟ್ಟಿ ಅವರು ಅಸುನೀಗಿದ್ದರು.
ಈ ಸಂದರ್ಭದಲ್ಲಿ ಮಹಿಳೆಯಿದ್ದ ಮನೆಯಲ್ಲಿ 140 ಹಾವಿದ್ದಿದ್ದು ಬೆಳಕಿಗೆ ಬಂದಿದೆ. ಈ ಹಾವುಗಳನ್ನು ಡಾನ್ ಮುನ್ಸನ್ ಎಂಬುವವರು ಸಾಕಿದ್ದರು. ಅವರ ಬಳಿ ಲಾರಾ ಅವರು ಇಪ್ಪತ್ತಕ್ಕೂ ಹೆಚ್ಚು ಹಾವುಗಳನ್ನು ಸಾಕಲು ಕೊಟ್ಟಿದ್ದರು.
ಈ ಹಾವುಗಳನ್ನು ನೋಡಿಕೊಂಡು ಹೋಗುವುದಕ್ಕೆಂದು ಬಂದಿದ್ದ ಲಾರಾ ಅವರನ್ನು ಹೆಬ್ಬಾವೊಂದು ಇದ್ದಕ್ಕಿದ್ದಂತೆ ಸುತ್ತಿಕೊಂಡಿತ್ತು. ಮೊದಲಿಗೆ ಆಟ ಎಂದುಕೊಂಡರೆ ಅದು ಎಷ್ಟೇ ಪ್ರಯತ್ನಿಸಿದರೂ ಅವರ ದೇಹವನ್ನು ಬಿಡದೆ, ಗಟ್ಟಿಯಾಗಿ ಸುತ್ತಿಕೊಂಡ ಪರಿಣಾಮ ಅವರು ಮರಣವನ್ನಪ್ಪಿದರು.
ಹಾವುಗಳಲ್ಲಿ ಹೆಬ್ಬಾವುಗಳು ಮಾತ್ರವೇ ವಿಷಕಾರಿಯಲ್ಲ. ಆದರೆ ಅವು ಮನುಷ್ಯರನ್ನೂ ನುಂಗ ಬಲ್ಲವು ಮತ್ತು ತಮ್ಮ ದೇಹದಿಂದಸುತ್ತಿಕೊಂಡು ಉಸಿರುಗಟ್ಟಿಸಿ ಕೊಲ್ಲ ಬಲ್ಲವು.