ಹೆದ್ದಾರಿ ಪ್ರಯಾಣ ಮತ್ತಷ್ಟು ದುಬಾರಿ – ದೇಶದೆಲ್ಲೆಡೆ ಟೋಲ್ ದರ ಹೆಚ್ಚಿಸಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ…
ಏಪ್ರಿಲ್ 1 ರಿಂದ, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (NHAI) ಹಲವು ಪ್ರಮುಖ ಹೆದ್ದಾರಿಗಳಲ್ಲಿ ಟೋಲ್ ಶುಲ್ಕವನ್ನು ಹೆಚ್ಚಿಸಿದೆ. ಈ ದರ ಏರಿಕೆಯು ಕಾರು, ಬಸ್, ಮತ್ತು ಲಘು ವಾಣಿಜ್ಯ ವಾಹನಗಳ ಮೇಲೆ ಪರಿಣಾಮ ಬೀರಲಿದ್ದು, ಪ್ರಯಾಣಿಕರ ಜೇಬಿಗೆ ಹೊರೆಯಾಗಲಿದೆ.
ಉಡುಪಿ/ಕೊಪ್ಪಳ/ ನವದೆಹಲಿ: ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಏಪ್ರಿಲ್ 1 ರಿಂದ ಅಂದರೆ ಇಂದಿನಿಂದ ಜಾರಿಗೆ ಬರುವಂತೆ ಪ್ರಮುಖ ಕಾರಿಡಾರ್‌ಗಳಲ್ಲಿ ಟೋಲ್ ಶುಲ್ಕವನ್ನು ಹೆಚ್ಚಿಸಿದೆ. ಈ ಪರಿಷ್ಕೃತ ಪದರಗಳು ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ (ಕರ್ನಾಟಕದೊಳಗೆ ಹೊಸಕೋಟೆ-ಕೆಜಿಎಫ್ ಮಾರ್ಗ), ದಾಬಸ್‌ಪೇಟೆ ಮತ್ತು ಹೊಸಕೋಟೆ ನಡುವಿನ ಸ್ಯಾಟಲೈಟ್ ಟೌನ್ ರಿಂಗ್ ರಸ್ತೆ (ಎಸ್‌ಟಿಆರ್‌ಆರ್), ಬೆಂಗಳೂರು-ಮೈಸೂರು ಪ್ರವೇಶ ನಿಯಂತ್ರಿತ ಹೆದ್ದಾರಿ, ಕನಕಪುರ ರಸ್ತೆ, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಕೆಐಎ) ಹೋಗುವ ಬಳ್ಳಾರಿ ರಸ್ತೆ ಮತ್ತು ಇತರ ರಾಷ್ಟ್ರೀಯ ಹೆದ್ದಾರಿಗಳಿಗೆ ಅನ್ವಯಿಸುತ್ತವೆ.
ಬೆಂಗಳೂರು : ನೂತನ ಆರ್ಥಿಕ ವರ್ಷ ಆರಂಭದಲ್ಲೇ ರಾಜ್ಯದ ವಾಹನ ಮಾಲೀಕರಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಟೋಲ್ ಶುಲ್ಕ ಹೆಚ್ಚಳದ ಹೊರೆ ಹಾಕುತ್ತಿದೆ. ರಾಜ್ಯದ ಪ್ರಮುಖ ಟೋಲ್‌ಗಳಲ್ಲಿನ ಟೋಲ್ ಶುಲ್ಕದಲ್ಲಿ ಶೇ.3ರಿಂದ 5ರಷ್ಟು ಹೆಚ್ಚಳ ಮಾಡಲಾಗುತ್ತಿದ್ದು, ಈ ಕುರಿತು ಎನ್‌ಎಚ್‌ಎಐ ಇನ್ನೆರಡು ದಿನಗಳಲ್ಲಿ ಅಧಿಕೃತ ಆದೇಶ ಹೊರಡಿಸಲಿದೆ.
ಟೋಲ್ ದರ ಏರಿಕೆ ಬಿಸಿ: ಏಪ್ರಿಲ್ 1 ರಿಂದ ಫಾಸ್ಟ್‌ಟ್ಯಾಗ್ ವಾರ್ಷಿಕ ಪಾಸ್ ದುಬಾರಿ!
NHAI ‘ಫಾಸ್ಟ್‌ಟ್ಯಾಗ್ ವಾರ್ಷಿಕ ಪಾಸ್’ ದರವನ್ನು ಪರಿಷ್ಕರಿಸಿದೆ. ಏಪ್ರಿಲ್ 1 ರಿಂದ, ವಾಣಿಜ್ಯೇತರ ವಾಹನ ಬಳಕೆದಾರರು 3,000 ರೂ. ಬದಲಿಗೆ 3,075 ರೂ. ಪಾವತಿಸಬೇಕಾಗುತ್ತದೆ. ಈ ಪಾಸ್ ಒಂದು ವರ್ಷ ಅಥವಾ 200 ಟ್ರಿಪ್‌ಗಳವರೆಗೆ ರಾಷ್ಟ್ರೀಯ ಹೆದ್ದಾರಿ ಟೋಲ್‌ಗಳಲ್ಲಿ ಮಾನ್ಯವಾಗಿರುತ್ತದೆ.
ಸಾರ್ವಜನಿಕರಿಗೆ ಹೆಚ್ಚಿನ ಟೋಲ್ ದರದಿಂದ ವಿನಾಯಿತಿ ನೀಡಲು ಮತ್ತು ಪ್ರಯಾಣವನ್ನು ಸುಗಮಗೊಳಿಸಲು ಕಳೆದ ವರ್ಷ ಆಗಸ್ಟ್ 15 ರಂದು ಪರಿಚಯಿಸಲಾದ ‘ಫಾಸ್ಟ್‌ಟ್ಯಾಗ್ ವಾರ್ಷಿಕ ಪಾಸ್’ (FASTag Annual Pass) ದರವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಪರಿಷ್ಕರಿಸಿದೆ. ಮಾರ್ಚ್ 12 ರಂದು ಹೊರಡಿಸಲಾದ ಆದೇಶದ ಪ್ರಕಾರ, ಮುಂಬರುವ 2026-27ನೇ ಹಣಕಾಸು ವರ್ಷಕ್ಕೆ ಅನ್ವಯವಾಗುವಂತೆ ವಾರ್ಷಿಕ ಪಾಸ್ ದರವನ್ನು ಹೆಚ್ಚಿಸಲಾಗಿದೆ. ಏಪ್ರಿಲ್ 1 ರಿಂದ ಜಾರಿಗೆ ಬರುವಂತೆ, ವಾಣಿಜ್ಯೇತರ ವಾಹನ ಬಳಕೆದಾರರು ಈಗಿನ 3,000 ರೂ. ಬದಲಿಗೆ 3,075 ರೂ. ಪಾವತಿಸಬೇಕಾಗುತ್ತದೆ. ರಾಷ್ಟ್ರೀಯ ಹೆದ್ದಾರಿ ಶುಲ್ಕ (ದರ ನಿರ್ಧಾರ ಮತ್ತು ಸಂಗ್ರಹ) (ತಿದ್ದುಪಡಿ) ನಿಯಮಗಳು, 2025ರ ಪ್ರಕಾರ, ಪ್ರತಿ ವರ್ಷ ವಾರ್ಷಿಕ ಪಾಸ್ ಮೊತ್ತವನ್ನು ಪರಿಷ್ಕರಿಸುವುದು ಕಡ್ಡಾಯವಾಗಿದೆ.