*ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ*
ಇವನು ಯಾರಪ್ಪ ಇಂತ ಭೂಪ ಹೆಣ್ಣು ಸಿಗದೇ ರೋಬೋಟ್ ಮದುವೆ ಆಗಿದಾನೆ ಅಂತೀರಾ. ಹೆಣ್ಣು ಹೆಣ್ಣು ಸಿಗದೇ ತುಂಬ ಜಿಗುಪ್ಸೆಗೊಂಡ ಚೀನಾದ ಇಂಜಿನಿಯರು ಅವನೇ ತಯಾರಿಸಿದ್ದ ರೋಬೋಟನ್ನ ಮದುವೆಯಾಗಿದ್ದಾನೆ.
ಝೆಂಗ್ ಜಿಯಾಜಿಯಾ ರೋಬೋಟ್ ನ್ನು ಮದುವೆಯಾಗಿರುವ ಇಂಜಿನಿಯರ್, ಮದುವೆಯಾಗಲು ಹೆಣ್ಣು ಸಿಗದೇ ಬೇಸತ್ತು ತಾವೇ ಸೃಷ್ಟಿಸಿದ್ದ ಕೃತಕ ಬುದ್ಧಿಮತ್ತೆಯ ಯಿಂಗ್ ಯಿಂಗ್ ಎಂಬ ರೋಬೋಟ್ ನ್ನು ಸರಳ ಸಮಾರಂಭವೊಂದರಲ್ಲಿ ಮದುವೆಯಾಗಿದ್ದಾರೆ.
ಕೃತಕ ಬುದ್ಧಿಮತ್ತೆ ಚಾಲಿತ ಯಿಂಗ್-ಯಿಂಗ್, ಚೀನಾದ ಅಕ್ಷರಗಳು ಹಾಗೂ ಚಿತ್ರಗಳನ್ನು ಗುರುತಿಸುವ ಸಾಮರ್ಥ್ಯ ಹೊಂದಿದ್ದು, ಸರಳವಾಗಿ ಮಾತನಾಡುವ ಸಾಮರ್ಥ್ಯವನ್ನೂ ಹೊಂದಿದೆಯಂತೆ. ಮದುವೆಯಲ್ಲಿ ಕಾರ್ಯಕ್ರಮದಲ್ಲಿ ರೋಬೋಟ್ ನ್ನು ಚೀನಾದ ಸಾಂಪ್ರದಾಯಿಕ ವಧುವಿನಂತೆಯೇ ಸಿಂಗರಿಸಲಾಗಿತ್ತು. ಈಗ ರೋಬೋಟ್ ನ್ನು ಪತ್ನಿಯನ್ನಾಗಿ ಅಪ್ ಗ್ರೇಡ್ ಮಾಡಲು ಝೆಂಗ್ ಯೋಜನೆ ರೂಪಿಸಿದ್ದು, ನಡೆಯುವ ಹಾಗೂ ಮನೆಯಲ್ಲಿ ಮನುಷ್ಯರಂತೆಯೇ ಇರುವಂತೆ ರೋಬೋಟ್ ನ್ನು ಬದಲಾವಣೆ ಮಾಡಲಿದ್ದಾರಂತೆ.
ಚೀನಾದಲ್ಲಿ ಇತ್ತೀಚಿಗೆ ಮದುವೆಯಾಗದೆ ಇರುವ ಯುವಕರು ಹೆಚ್ಚಾಗಿದ್ದು. ಇಲ್ಲಿ ಹೆಣ್ಣುಗಳು ಸಿಗುವುದು ತುಂಬಾ ಕಷ್ಟವಾಗಿದೆ ಅನ್ನೋದು ಬೆಳಕಿಗೆ ಬಂದಿದೆ. ಸುಮಾರು ಜನ 35 ಯಿಂದ40 ವರ್ಷದ ವ್ಯಕ್ತಿಗಳು ಮದುವೆಯಾಗದೆ ಬಹುಸಂಖ್ಯೆಯಲ್ಲಿ ಇರುವುದು ಕಂಡುಬಂದಿದೆ.