ದೇವರು-ಧರ್ಮ

ಹೆಣ್ಣುಮಕ್ಕಳಿಗೆ ಮಾತ್ರ ಪ್ರವೇಶವಿರುವ,ಹೆಣ್ಣುಮಕ್ಕಳ ಶಬರಿಮಲೆ..!ಗಿನ್ನಿಸ್ ರೆಕಾರ್ಡ್’ನಲ್ಲಿ ದಾಖಲೆ…ಈ ದೇವಾಲಯದ ವಿಶೇಷತೆ ಏನು ಗೊತ್ತಾ..?

By admin

February 03, 2018

ನಮ್ಮ ಭಾರತೀಯ ಹಿಂದೂ ದೇವಾಲಯಗಳು ತನ್ನದೆಯಾದ ವಿಶೇಷತೆಯನ್ನು ಹೊಂದಿದೆ. ಹಾಗು ಈ ದೇವಾಲಯ ಹಲವಾರು ಮಹತ್ವವನ್ನು ಹೊಂದಿದೆ, ಅಲ್ಲದೆ ಬೇರೆ ಬೇರೆ ರೀತಿಯಲ್ಲಿ ಪ್ರಸಿದ್ದಿ ಪಡೆದಿದೆ.

ಇರುವದೆಲ್ಲಿ…

ಅಟ್ಟುಕಲ್ ಭಗವತಿ ದೇವಾಲಯ ಎಂಬುದು ಕೇರಳದ ತಿರುವನಂತಪುರದ ಬಳಿಯಿರುವ ಒಂದು ಯಾತ್ರಾಸ್ಥಳ ಹಾಗು ದೇವಾಲಯ ಕೂಡ ಆಗಿದೆ. ಇದು ಹೆಣ್ಣು ಮಕ್ಕಳ ಶಬರಿಮಲೆ ಎಂದೇ ಹೆಸರಾಗಿದೆ.ದೇಶದ ನಾನಾ ರಾಜ್ಯಗಳಿಂದ, ಜಿಲ್ಲೆಗಳಿಂದ, ಗ್ರಾಮೀಣ ಭಾಗಗಳಿಂದ , ಭಕ್ತರು  ಮಂದಿರಕ್ಕೆ ಆಗಮಿಸಿ ದೇವಿಯ ದರ್ಶನ ಪಡೆಯುತ್ತಾರೆ.

ಗಿನ್ನಿಸ್ ರೆಕಾರ್ಡ್

ಈ ದೇವಿ ದೇವಸ್ಥಾನ ಗಿನ್ನಿಸ್ ರೆಕಾರ್ಡ್ ನಲ್ಲಿ ದಾಖಲಾಗಿದೆ. ಕಾರಣ ಪ್ರಪಂಚದಲ್ಲೇ ಅತ್ಯದಿಕ ಸಂಖ್ಯೆಯಲ್ಲಿ ಹೆಣ್ಣು ಮಕ್ಕಳು ಒಟ್ಟು ಸೇರಿ ಒಲೆ ಹಾಕಿ ಅದರ ಮೇಲೆ ಮಣ್ಣಿನ ಪಾತ್ರೆ ಇಟ್ಟು ಪೊಂಗಲ್ (ಅಕ್ಕಿ,ಸಕ್ಕರೆ,ತೆಂಗಿನ ತುರಿ,ಒಣದ್ರಾಕ್ಷಿ,ಹಾಲು ಹಾಕಿ ತಯಾರಿಸುವ ಪಾಯಸ) ತಯಾರಿಸುತ್ತಾರೆ.

ಒಲೆ ಹಾಕಿ ಪೊಂಗಲ್ ತಯಾರಿಕೆ…

ಅದು ಕುದಿದು ಉಕ್ಕೇರಿ ಬೆಂಕಿಯ ಮೇಲೆ ಬೀಳಬೇಕು ಎನ್ನುವ ಪದ್ಧತಿ ಸಂಪ್ರದಾಯ ಸಾವಿರಾರು ವರ್ಷಗಳಿಂದ ನಡೆದು ಕೊಂಡು ಬಂದಿದೆ. ಅಷ್ಟೇ ಅಲ್ಲದೆ ಆ ಆಚರಣೆಯಲ್ಲಿ ವರ್ಷ ವರ್ಷ ಹೆಣ್ಣು ಮಕ್ಕಳ ಸಂಖ್ಯೆ ಜಾಸ್ತಿಯಾಗುತ್ತಲೇ ಇದೆ. ಅದು ಎಲ್ಲಿಯವರೆಗೆ ಅಂದರೆ ಸುಮಾರು 10 ಕಿಲೋ ಮೀಟರ್ ವಿಸ್ತೀರ್ಣದಲ್ಲಿ ಹೆಣ್ಣು ಮಕ್ಕಳು ಒಲೆ ಹಾಕಿ ಪೊಂಗಲ್ ತಯಾರಿಸುತ್ತಾರೆ.

ಇತ್ತಿಚೆಗೆ ಜನರ ಸಂಖ್ಯೆ ಹೆಚ್ಚಾಗಿ ಕಂಡು ಬಂದ ಕಾರಣ ಅದರ ಉದ್ದ ರೈಲ್ವೆ ನಿಲ್ದಾಣ ಬಸ್ ನಿಲ್ದಾಣದ ಕಡೆಯವರೆಗೂ ಮುಟ್ಟಿದೆ. ಬಸ್ಸಿನಿಂದ ಇಳಿದು ಅಲ್ಲೇ ಪೊಂಗಲ್ ಮಾಡಿ ತಮ್ಮ ದೈವಿ ಭಕ್ತಿ ತೋರಿಸಿಕೊಳ್ಳುತ್ತಾರೆ. ಈ ಪೊಂಗಲ್ ಹಬ್ಬವು ವರ್ಷಂಪ್ರತಿ ಭರಣಿ ಸಲುವ ಕಾರ್ತಿಕ ನಕ್ಷತ್ರದ ಮಕರ ಮಾಸ ಅಥವಾ ಕುಂಭ ಮಾಸದಲ್ಲಿ ಬರುತ್ತದೆ, 10 ದಿವಸ ಜಾತ್ರೆ ನಡೆಯುತ್ತದೆ. ಈ ಉತ್ಸವದಲ್ಲಿ ವಿದೇಶಿಯರು ಸಹ ಅತ್ಯದಿಕ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ.

ಇಲ್ಲಿ ವಿದೇಶಿಯರು ಸೇರಿದಂತೆ, ದೇಶದ ಪ್ರಮುಖ ಚಿತ್ರನಟಿಯರು, ರಾಜಕಾರಣಿಗಳು ಹಾಗು ಅಧಿಕಾರಿಗಳು ಕಂಪೆನಿಗಳ ಮುಖ್ಯಸ್ಥರು ಅಟ್ಟುಕಲ್ ದೇವಿಯ ದರ್ಶನ ಪಡೆಯುತ್ತಾರೆ.