ನಮ್ಮ ಸಮಾಜದಲ್ಲಿ ಈಗ್ಲೂ ಮಂಗಳಮುಖಿಯರಿಗೆ ಸರಿಯಾದ ಗೌರವ ಸಿಗ್ತಿಲ್ಲ. ಆದ್ರೆ ಮಂಗಳಮುಖಿ ಮನೆಗೆ ಬಂದ್ರೆ ಬರಿಗೈನಲ್ಲಿ ಕಳುಹಿಸುವುದಿಲ್ಲ. ಮಂಗಳಮುಖಿ ಆಶೀರ್ವಾದ ಮಾಡಿದ್ರೆ ಎಲ್ಲವೂ ಒಳ್ಳೆಯದಾಗುತ್ತದೆ ಎಂಬ ನಂಬಿಕೆಯಿದೆ.
ಮನೆಗೆ ಬಂದ ಮಂಗಳಮುಖಿಯನ್ನು ತೃಪ್ತಿಪಡಿಸಿ ಆಶೀರ್ವಾದ ಪಡೆಯಬೇಕೆಂಬ ನಂಬಿಕೆ ಇದೆ. ಮಕ್ಕಳಿಗೂ ಮಂಗಳಮುಖಿಯರ ಆಶೀರ್ವಾದ ಸಿಗಬೇಕಂತೆ.
ನವಜಾತ ಶಿಶು ಜನಿಸಿದ ನಂತ್ರ ಬರುವ ಮೊದಲ ಬುಧವಾರ ಮಗುವನ್ನು ಮಂಗಳಮುಖಿ ಮಡಿಲಿಗೆ ಹಾಕಬೇಕಂತೆ. ಮಂಗಳಮುಖಿ, ಮಗುವಿಗೆ ಆಶೀರ್ವಾದ ನೀಡಿದ್ರೆ ಮಗು ಬಹಳ ಭಾಗ್ಯಶಾಲಿಯಾಗುತ್ತದೆಯಂತೆ.
ಮಗು ಹುಟ್ಟಿದ ನಂತ್ರ ಅನ್ನ ಪ್ರಾಶನದವರೆಗೆ ಪ್ರತಿ ಬುಧವಾರ ಮಂಗಳಮುಖಿಯಿಂದ ಆಶೀರ್ವಾದ ನೀಡುವುದು ಅತ್ಯುತ್ತಮ. ಮಗುವಿನ ಆರೋಗ್ಯ ಹಾಗೂ ಪ್ರಗತಿಗೆ ಈ ಉಪಾಯ ಒಳ್ಳೆಯದು. ಮಗುವಿನ ಉಜ್ವಲ ಭವಿಷ್ಯಕ್ಕೆ ಇದು ನೆರವಾಗಲಿದೆ.
ಮಗುವಿಗೆ ಕೆಟ್ಟ ದೃಷ್ಟಿ ತಾಗಿದ್ದು, ಮಗು ಆರೋಗ್ಯದಲ್ಲಿ ಏರುಪೇರಾಗಿದ್ದರೆ, ವೈದ್ಯರ ಚಿಕಿತ್ಸೆ ಪರಿಣಾಮ ಬೀರದೆ ಹೋದಲ್ಲಿ ವೈದ್ಯರ ಚಿಕಿತ್ಸೆ ಜೊತೆ ನಾಲ್ಕು ದಿನ ಮಗುವನ್ನು ಮಂಗಳಮುಖಿ ಮಡಿಲಿಗೆ ಹಾಕಿ. ಮಂಗಳಮುಖಿ ಮಡಿಲಿನಲ್ಲಿ ಮಗು ಆಟವಾಡಲಿ.
ಮಗು ಅಪಾಯಕಾರಿ ರೋಗದಿಂದ ಬಳಲುತ್ತಿದ್ದು, ಚಿಕಿತ್ಸೆ ಫಲ ನೀಡದೆ ಹೋದಲ್ಲಿ ಕೆಲ ದಿನ ಮಂಗಳಮುಖಿಗೆ ಮಗು ಸೇವೆ ಮಾಡುವಂತೆ ಹೇಳಿ. ನಿಧಾನವಾಗಿ ಮಗು ಆರೋಗ್ಯದಲ್ಲಿ ಸುಧಾರಣೆ ಕಂಡು ಬರುತ್ತದೆ.
ಮಲ, ಮೂತ್ರ ಸರಿಯಾಗಿ ಆಗದೆ ಮಗು ಹೊಟ್ಟೆ ಸಮಸ್ಯೆಯಿಂದ ಬಳಲುತ್ತಿದ್ದರೆ ಮಂಗಳಮುಖಿಯನ್ನು ಮನೆಗೆ ಕರೆದು ಹೊಟ್ಟೆ ಮೇಲೆ ನಿಧಾನಕ್ಕೆ ಕೈ ಆಡಿಸುವಂತೆ ಹೇಳಿ.