ದೇವರು-ಧರ್ಮ

ಹಿಂದೂ ಧರ್ಮದಲ್ಲಿ ಪೂಜಿಸುವ ಕಾಮಧೇನು ಗೋವಿನ ಉತ್ಪತ್ತಿಯಾಗಿರುವುದೇ ಒಂದು ರೋಚಕ.!ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ…

By admin

April 03, 2018

ಭಾರತದಲ್ಲಿ ಹಿಂದೂ ಧರ್ಮದ ಪ್ರಕಾರ ಗೋವುಗಳಿಗೆ ತುಂಬಾ ಪೂಜ್ಯನೀಯ ಮಹತ್ವವಿದೆ. ಗೋವನ್ನು ಗೋಮಾತೆಯ ರೂಪದಲ್ಲಿ ಪೂಜಿಸಲಾಗುತ್ತದೆ. ಹಿಂದೂಗಳ ಪ್ರಕಾರ ಗೋವು ದೇವತೆಗಳು ವಾಸ ಮಾಡುವ ಸ್ಥಾನವಾಗಿದೆ. ಗೋವನ್ನು ಕಾಮಧೆನುವೆಂದು ಸಹ ಪೂಜಿಸಲಾಗುತ್ತದೆ.

ಹಾಗಾದ್ರೆ ಪುರಾಣದ ಪ್ರಕಾರ ಗೋವನ ಉತ್ಪತ್ತಿ ಹೇಗಾಯ್ತು ಗೊತ್ತಾ ? ತಿಳಿಯಲು ಮುಂದೆ ಓದಿ…

ಗೋವಿನ ಉತ್ಪತ್ತಿಯ ಬಗ್ಗೆ ಇರುವಕಥೆಯನ್ನು ‘ಶತಪಥ ಬ್ರಾಹ್ಮಣ’ ಗ್ರಂಥದಲ್ಲಿ ನೀಡಲಾಗಿದೆ. ದಕ್ಷ ಪ್ರಜಾಪತಿಯು ಪ್ರಾಣಿಗಳ ಸೃಷ್ಟಿಯನ್ನುಮಾಡಿದ ನಂತರ ತುಸು ಅಮೃತವನ್ನು ಸೇವಿಸಿದನು. ಆ ಅಮೃತದಿಂದ ಅವನು ಸಂತುಷ್ಟನಾದನು.

ಸುರಭಿ

ಆಗ ಅವನ ಮೂಗಿನೊಳಗಿಂದ ಹೂರಗೆ ಬಿದ್ದ ಶ್ವಾಸದಿಂದ ಎಲ್ಲೆಡೆ ಸುಗಂಧ ಹರಡಿತು. ಆ ಶ್ವಾಸದೊಳಗಿಂದ ಒಂದು ಗೋವು ಜನ್ಮತಾಳಿತು. ಸುಗಂಧದೊಳಗಿಂದ ಜನ್ಮ ತಾಳಿದ್ದರಿಂದ ದಕ್ಷ ಪ್ರಜಾಪತಿಯು ಅದಕ್ಕೆ ‘ಸುರಭಿ’ ಎಂದು ಹೆಸರಿಟ್ಟನು. ಸುರಭಿಯಿಂದ ಅನೇಕ ಗೋವುಗಳು ಜನ್ಮತಾಳಿದವು. ಆದ್ದರಿಂದ ಸುರಭಿ ಇದು ಸಂಪೂರ್ಣ ಗೋವಂಶದ ಮಾತೆ, ಜನನಿ ಎಂದು ಪರಿಗಣಿಸಲ್ಪಡುತ್ತದೆ.

ಗೋಲೋಕ

ಸುರಭಿಯು ಒಮ್ಮೆ ತಪಸ್ಸನ್ನು ಆರಂಭಿಸಿತು. ಬ್ರಹ್ಮದೇವನು ಆ ತಪಸ್ಸಿಗೆ ಮೆಚ್ಚಿ ಪ್ರಸನ್ನನಾದನು ಮತ್ತು ಸುರಭಿಗೆ ಅಮರತ್ವವನ್ನುನೀಡಿದನು. ಅಲ್ಲದೇ, ತ್ರಿಲೋಕಗಳ ಮೇಲಿರುವ ಒಂದು ಸ್ವರ್ಗವನ್ನೂ ಅದಕ್ಕೆ ಒಪ್ಪಿಸಿದನು.  ಆ ಲೋಕವು ಗೋಲೋಕವೆಂದು ಕರೆಯಲ್ಪಡುತ್ತದೆ. ಸುರಭಿಯು ಈ ಗೋಲೋಕದಲ್ಲಿ ನಿತ್ಯ ನಿವಾಸ ಮಾಡುತ್ತದೆ ಹಾಗೂ ಅದರ ಮಗಳು, ‘ಸುಕನ್ಯಾ’ ಭೂಲೋಕದಲ್ಲಿ ಪೃಥ್ವಿಯ ಮೇಲೆ ಇರುತ್ತದೆ.

ಈ ಗೋಲೋಕದ ಅಧಿಪತಿ ‘ಗೋವಿಂದ’ ಅಂದರೆ ಶ್ರೀಕೃಷ್ಣ’ನಾಗಿದ್ದಾನೆ. ಸುರಭಿಯು ಒಮ್ಮೆ ಇಂದ್ರ ದೇವನ ಬಾಗಿಲಲ್ಲಿ ಭಗವಾನ ಶ್ರೀಕೃಷ್ಣನ ಭೇಟಿಮಾಡಲು ಹೋಯಿತು ಹಾಗೂ ಪಷು ರಾಜ್ಯದ ಕುರಿತು ಶ್ರೀಕೃಷ್ಣನ ಸದಿಚ್ಛೆಯ ಮೇರೆಗೆ ಅದು ಅವನಿಗೆ ತಮ್ಮ ಗೋಲೋಕದ ಇಂದ್ರನನ್ನಾಗಿ ಆರಿಸಿತು. ಭಗವಾನ್ ಶ್ರೀಕೃಷ್ಣನ ಗೋಪ್ರೇಮವು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ!