ಸತ್ತ ವ್ಯಕ್ತಿ ಜೀವಂತವಾಗಿ ಬರುವುದಿಲ್ಲ ಎನ್ನುವ ಮಾತಿದೆ. ಆದ್ರೆ ರಾಜಸ್ಥಾನದ ಭಾರತ್ಪುರದಲ್ಲಿ ಚಮತ್ಕಾರಿ ಘಟನೆ ನಡೆದಿದೆ. ಹಾವು ಕಚ್ಚಿ ಸ್ಮಶಾನ ಸೇರಿದ್ದವಳು ಮನೆಗೆ ವಾಪಸ್ ಆಗಿದ್ದಾಳೆ. ಆಕೆಗೆ ಚಿಕಿತ್ಸೆ ಮುಂದುವರೆದಿದೆ.
21 ವರ್ಷದ ಶ್ವೇತಾಗೆ ಹಾವು ಕಚ್ಚಿತ್ತು. ವೈದ್ಯರು ಶ್ವೇತಾ ಸಾವನ್ನಪ್ಪಿದ್ದಾಳೆ ಎಂದಿದ್ದರು. ದುಃಖದಲ್ಲಿದ್ದ ಕುಟುಂಬಸ್ಥರು ಶ್ವೇತಾ ಅಂತಿಮ ಸಂಸ್ಕಾರಕ್ಕೆ ತಯಾರಿ ನಡೆಸಿದ್ದರು.
ಸ್ಮಶಾನಕ್ಕೆ ಶ್ವೇತಾ ಶವವನ್ನು ತೆಗೆದುಕೊಂಡು ಹೋಗ್ತಿದ್ದಂತೆ ಮನೆಯಲ್ಲಿ ಆಶ್ಚರ್ಯಕಾರಿ ಘಟನೆ ನಡೆದಿತ್ತು. ಶ್ವೇತಾ ಮನೆಯಲ್ಲಿ ನಾಗ-ನಾಗಿಣಿ ನೃತ್ಯ ಮಾಡಿದ್ದಾರೆ. ಈ ವಿಷ್ಯವನ್ನು ಸ್ಮಶಾನಕ್ಕೆ ಹೋದ ಜನರಿಗೆ ಮನೆಯಲ್ಲಿದ್ದ ಮಹಿಳೆಯರು ಫೋನ್ ಮಾಡಿ ತಿಳಿಸಿದ್ದಾರೆ.
ಇಷ್ಟರ ಮಧ್ಯೆ ಶ್ವೇತಾ ಉಸಿರಾಡುತ್ತಿರುವುದು ಮನೆಯವರಿಗೆ ಗೊತ್ತಾಗಿದೆ. ತಕ್ಷಣ ಮನೆಗೆ ಕರೆತಂದು ಚಿಕಿತ್ಸೆ ನಡೆಸಿದ್ದಾರೆ. ತಜ್ಞರು ಶ್ವೇತಾಗೆ ಚಿಕಿತ್ಸೆ ನೀಡ್ತಿದ್ದಾರೆ. ಈ ವಿಷ್ಯ ಇಡೀ ಊರಿಗೆ ಆವರಿಸಿದೆ.