ಹಾವುಗಳನ್ನು ಕಂಡ್ರೆ ಎಂತಹವರಿಗೂ ಎದೆ ಜಲ್ ಅನ್ನುವ ಅನುಭವ ಆಗ್ತದೆ. ಆಗಂತ ಹಾವಿಗೆ ಭಯ ಇಲ್ದೆ ಇರಲ್ಲ. ಆದ್ರೆ ಹಾವನ್ನು ಸಾಯಿಸಬೇಕಾದ್ರೆ ಅರ್ಧ ಪ್ರಾಣ ಹೋಗಿ ಅರ್ಧ ಪ್ರಾಣ ಉಳಿಯುವಂತೆ ಸಾಯಿಸಬೇಡಿ ಅಂತ ಹೇಳುವುದು ವಾಡಿಕೆ. ಯಾಕಂದ್ರೆ ಅಂತಹವರನ್ನು ಏಟು ತಿಂದ ಹಾವುಗಳು ಸುಮ್ಮನ್ನೇ ಬಿಡೋದಿಲ್ಲ ಅಂತ ಹೇಳ್ತಾರೆ.
ಅದಕ್ಕೆ ಒಂದು ಹಾಡನ್ನೇ ಬರೆದಿದ್ದಾರೆ. ಹಾವಿನ ದ್ವೇಷ ಹನ್ನೆರಡು ವರುಷ ಎಂದು. ಹಾಗಾದ್ರೆ ಹಾವು ದ್ವೇಷ ಸಾದಿಸುತ್ತದಯೇ. ಅದರಲ್ಲೂ ನಿಜಾನ ಸತ್ಯನಾ? ಮುಂದೆ ಓದಿ….
ಹಾವನ್ನು ಸಾಯಿಸುವ ಸಮಯದಲ್ಲಿ,ಹಾವು ಗಾಯಗೊಂಡು ತಪ್ಪಿಸಿಕೊಂಡು ಹೋದರೆ ಅದು ಹಗೆ ಸಾಧಿಸುತ್ತದೆಯೇ? ಹೊಡೆಯುವ ಸಮಯದಲ್ಲಿ ಆ ಹಾವು ಹೊಡೆದವನ ಚಹರೆಯನ್ನು ಜ್ಞಾಪಕವಿಟ್ಟುಕೊಂಡು ನಂತರ ಪ್ರತೀಕಾರ ತೀರಿಸಿಕೊಳ್ಳುತ್ತದೆಯೇ? ಎಂದು ಹಿರಿಯರನ್ನು ಕೇಳಿದರೆ,ಹೌದೆನ್ನುತ್ತಾರೆ. ಕೆಲವು ವಿಷಯವನ್ನು ಕೂಲಂಕುಷವಾಗಿ ಪರಿಶೀಲಿಸಿದಾಗ ನಮಗೆ ಅಚ್ಚರಿಯ ಸಂಗತಿಗಳು ತಿಳಿಯುತ್ತವೆ.
ಹಾವಿಗೆ ಅಷ್ಟೊಂದು ಜ್ಞಾಪಕ ಶಕ್ತಿ ಇದಿಯೇ!
ಸತ್ಯ ಸಂಗತಿಯೆಂದರೆ, ಹಾವಿಗೆ ಜ್ಞಾಪಕ ಶಕ್ತಿಯೇ ಇರುವುದಿಲ್ಲವಂತೆ…ಹಾಗಿರುವಾಗ ಗಾಯಗೊಂಡ ಹಾವು ,ಹೊಡೆದವರನ್ನು ಜ್ಞಾಪಕವಿಟ್ಟುಕೊಂಡು ಹಗೆ ಸಾಧಿಸುವ ಸಂಭವವೇ ಇಲ್ಲವಂತೆ. ಇವೆಲ್ಲವೂ ಕೇವಲ ನಮ್ಮ ಹಿರಿಯರ ಕಲ್ಪಿತ ನಂಬಿಕೆಯಂತೆ ! ಆದರೆ, ಇದಕ್ಕೂ ಒಂದು ಕಾರಣವಿದೆಯೆಂದು ಬಹಳಷ್ಟು ಜನ ಹೇಳುತ್ತಾರೆ.
ಇದರ ಹಿಂದೆ ಇದೆ ಒಂದು ಸ್ಟೋರಿ…
ಒಂದು ಕಾಲದಲ್ಲಿ ಜನರ ಪ್ರಧಾನ ವೃತ್ತಿ ಬೇಸಾಯವಾಗಿತ್ತು. ತಾವು ಬೆಳೆದ ಬೆಳೆಗಳನ್ನು ಇಲಿಗಳು ನಾಶಮಾಡುತ್ತಿದ್ದವಂತೆ. ಹಾವುಗಳನ್ನು ಕಂಡ ಕಂಡಲ್ಲಿ ಸಾಯಿಸುತ್ತಿದ್ದರೆ ಹಾವುಗಳ ಸಂಖ್ಯೆ ಕಡಿಮೆಯಾಗಿ… ಇಲಿಗಳ ಸಂಖ್ಯೆ ಹೆಚ್ಚಾಗತೊಡಗಿ ಬೆಳೆ ಹಾನಿಯೂ ಹೆಚ್ಚಾಗತೊಡಗುತ್ತದೆಂದು, ಮುಂದಾಲೋಚನೆಯಿಂದ ಹಾವನ್ನು ಸಾಯಿಸಬೇಡಿ.
ಒಂದು ವೇಳೆ ಅದು ಸಾಯದೆ ತಪ್ಪಿಸಿಕೊಂಡು ಹೋದರೆ, ಗಾಯಗೊಂಡ ಹಾವು ಹಗೆ ಸಾಧಿಸುತ್ತದೆ ಎಂದು ಭಯಹುಟ್ಟಿಸಿದರಂತೆ. ನಮ್ಮ ಪೂರ್ವಜರು ಹಾವನ್ನು ದೇವರೆಂದು ಪೂಜಿಸುವುದು, ಪ್ರಕೃತಿಯ ಮೇಲೆ ಪ್ರೀತಿಯುಳ್ಳವರಾಗಿದ್ದುದೇ ಅಸಲು ಕಾರಣವಂತೆ.!