ಆರೋಗ್ಯ

ಹಾಗಲಕಾಯಿಯ ಆರೋಗ್ಯಕರ ಪ್ರಯೋಜನಗಳು

By Chethan Mardalu

September 25, 2020

 ಇಂಗ್ಲಿಷ್ ನಲ್ಲಿ  ಬಿಟರ್ ಗೌರ್ಡ್ ಎಂದು ಕರೆಯಲಾಗುವ ಇದು,ಸೌತೆಕಾಯಿಯಂತಹ ಕ್ಯುಕರ್ಬಿಟೇಸಿಯೆ ಜಾತಿಗೆ ಸೇರಿದ ಉಷ್ಣವಲಯ ಹಾಗು ಉಪೋಷ್ಣವಲಯದ ಬಳ್ಳಿಯಾಗಿದೆ. ಇದು ತಿನ್ನಲು ಯೋಗ್ಯವಾದ ಹಣ್ಣನ್ನು ಹೊಂದಿರುವ ಕಾರಣಕ್ಕೆ ಏಷಿಯಾ , ಆಫ್ರಿಕಾ ಹಾಗು ಕ್ಯಾರೆಬಿಯನ್ ಅಂದರೆ ವೆಸ್ಟ್ ಇಂಡೀಸ್ ದ್ವೀಪ ಪ್ರದೇಶಗಳಲ್ಲಿ ವ್ಯಾಪಕವಾಗಿ ಬೆಳೆಯಲಾಗುತ್ತದೆ. ಇದರ ಹಣ್ಣು ಇತರ ಎಲ್ಲ ಹಣ್ಣು ಗಳಿಗಿಂತ ಅತ್ಯಧಿಕ ಕಹಿಯಾಗಿರುತ್ತದೆ. ಇದರಲ್ಲಿಯೂ ಮೂಲಭೂತವಾಗಿ ಹಣ್ಣಿನ ಆಕಾರ ಹಾಗು ಕಹಿಯಲ್ಲಿ ವ್ಯತ್ಯಾಸ ಹೊಂದಿರುವ ಹಲವು ಪ್ರಭೇದಗಳಿವೆ.

ಹಾಗಲಕಾಯಿಯ ಉಪಯೋಗಗಳು

ಕೊಲೆಸ್ಟ್ರಾಲ್ ಕಡಿಮೆಮಾಡುತ್ತದೆಹಾಗಲಕಾಯಿಯಲ್ಲಿ ಪೈಟೋನ್ಯೂಟ್ರಿಯೆಂಟ್‍ಗಳೆಂಬ ಆಂಟಿ ಆಕ್ಸಿಡೆಂಟಗಳಿರುತ್ತದೆ. ಇವು ಕೆಟ್ಟ ಕೊಲೆಸ್ಟ್ರಾಲನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ.

ರೋಗನಿರೋಧಕಶಕ್ತಿ ಯನ್ನುಹೆಚ್ಚಿಸುತ್ತದೆ  : ವೈರಸ ಮತ್ತು ಬ್ಯಾಕ್ಟೀರಿಯಾಗಳ ವಿರುದ್ದ ಹೋರಾಡುವ ಸಾಮಥ್ರ್ಯವನ್ನು ಹೊಂದಿರುವುದರಿಂದ ವಿವಿಧ ಅಲರ್ಜಿಯನ್ನು ತಡೆಗಟ್ಟಲು  ಸಹಾಯ ಮಾಡುತ್ತದೆ.

ಮಧುಮೇಹವನ್ನು ಕಡಿಮೆಮಾಡುತ್ತದೆ : ಪ್ರತಿದಿನ ಹಾಗಲಕಾಯಿ ಸೇವಿಸುವುದರಿಂದ ಮಧುಮೇಹಿಗಳ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ.  ಹಾಗಲಕಾಯಿಯ ಜ್ಯೂಸ್ ಅತಿ ಸಾಮಾನ್ಯವಾದ, ಜನಪ್ರಿಯ ಪರಿಹಾರವಾಗಿದೆ. insulin ಗೆ ಸಮನಾದ ಕೆಲವು ರಾಸಾಯನಿಕಗಳು ಹಾಗಲಕಾಯಿಯಲ್ಲಿದ್ದು, ಅವು ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ಕಡಿಮೆ ಮಾಡುತ್ತವೆ.

ಮಲಬದ್ಧತೆಯನ್ನು ತಡೆಗಟ್ಟುತ್ತದೆ:  ಮಲಬದ್ದತೆಯನ್ನು ತಡೆಗಟ್ಟುವಲ್ಲಿ ಹಾಗಲಕಾಯಿ ನೈಸರ್ಗಿಕ ಪರಿಹಾರವಾಗಿದೆ.  ಯಾವದೇ ಅಡ್ಡ ಪರಿಣಾಮಗಳಿಲ್ಲ.

ಚರ್ಮ  ಮತ್ತು ಕೂದಲಿನ  ಕಾಂತಿಗಾಗಿ: ಚರ್ಮದ ಮೇಲಿನ ಮಯಸ್ಸಾದ ಚಿಹ್ನೆಗಳನ್ನು ಕಡಿಮೆ ಮಾಡುವಲ್ಲಿ ಆಂಟಿ ಆಕ್ಸಿಡೆಂಟಗಳು ಮತ್ತು ವಿಟಮಿನ್ ಸಿ ಮತ್ತು ಎ ಸಹಾಯ ಮಾಡುತ್ತದೆ. ಹಾಗಲಕಾಯಿಯ ಸೇವನೆಯು ಮೊಡವೆಗಳ ನಿವಾರಣೆಗೆ ಸಹಕಾರಿಯಾಗಿದೆ ಮಾತ್ರವಲ್ಲದೇ ಆಳವಾದ ಚರ್ಮದ ಸೋಂಕುಗಳಿಗೂ ಶಮನಕಾರಿಯಾಗಿದೆ. ಹಾಗಲಕಾಯಿಯ ರಸವನ್ನು ನಿಂಬೆ ಹಣ್ಣಿನ ರಸದೊಂದಿಗೆ ಬೆರೆಸಿ, ಪ್ರತಿದಿನ ಖಾಲಿ ಹೊಟ್ಟೆಗೆ 6 ತಿಂಗಳುಗಳ ಕಾಲ ಸೇವಿಸಿರಿ ಇಲ್ಲವೇ ನಿಮ್ಮ ನಿರೀಕ್ಷಿತ ಫಲಿತಾಂಶ ದೊರೆಯುವವರೆಗೆ ಸೇವನೆಯನ್ನು ಮುಂದುವರೆಸಿರಿ.

ತೂಕಕಡಿಮೆಮಾಡುತ್ತದೆ ಕ್ಯಾಲೋರಿ, ಕೊಬ್ಬು ಮತ್ತು ಕಾರ್ಬೋಹೈಡ್ರೇಟಗಳು ಕಡಿಮೆ ಇರುವುದರಿಂದ ತೂಕ ಇಳಿಸುವಲ್ಲಿ ಆಹಾರದಲ್ಲಿ ಸೇರಿಸಲಾಗುತ್ತದೆ.

ಕಣ್ಣಿನದೃಷ್ಟಿ  ಹೆಚ್ಚಿಸುತ್ತದೆ: ಇದರಲ್ಲಿನ ಬೀಟಾ ಕ್ಯಾರೋಟಿನ್ ಮತ್ತು ಜೀವಸತ್ವ ಎ ಪೋಷಕಾಂಶಗಳು ಹೇರಳವಾಗಿರುವುದರಿಂದ ಕಣ್ಣಿಗೆ ಅವಶ್ಯಕವಾದ ಪೋಷಕಾಂಶಗಳು ದೊರೆತು ಕಣ್ಣಿನ ತೊಂದರೆಗಳಿಂದ ರಕ್ಷಣೆ ನೀಡುತ್ತದೆ. ಹಾಗಲಕಾಯಿಯ ರಸದಲ್ಲಿ ಬೀಟಾ-ಕ್ಯಾರೋಟೀನ್ ಮತ್ತು ವಿಟಮಿನ್ ಎ ಪೋಷಕಾಂಶಗಳು ಹೇರಳವಾಗಿರುವುದರಿಂದ ಕಣ್ಣಿಗೆ ಅಗತ್ಯವಾದ ಪೋಷಕಾಂಶಗಳು ದೊರೆತು ಕಣ್ಣಿನ ತೊಂದರೆಗಳಿಂದ ರಕ್ಷಣೆ ನೀಡಿದಂತಾಗುತ್ತದೆ. ಅಲ್ಲದೇ ಉತ್ತಮ ಪ್ರಮಾಣದಲ್ಲಿರುವ ವಿಟಮಿನ್ ಸಿ ಮತ್ತು ಆಂಟಿ ಆಕ್ಸಿಡೆಂಟುಗಳು ಮಧುಮೇಹದ ಕಾರಣದಿಂದಾಗಿ ಉತ್ಪತ್ತಿಯಾಗುವ ದೃಷ್ಟಿದೋಷದಿಂದ ಕಣ್ಣುಗಳನ್ನು ಕಾಪಾಡುತ್ತವೆ. ಹಾಗಲಕಾಯಿಯ ನಿಯಮಿತ ಸೇವನೆಯಿಂದ ಕಣ್ಣುಗಳ ಉತ್ತಮ ಆರೋಗ್ಯವನ್ನು ಕಾಪಾಡಿಕೊಂಡು ಬರಲು ಸಾಧ್ಯವಾಗುತ್ತದೆ.

ರಕ್ತವನ್ನುಶುದ್ಧಿಕರಿಸುತ್ತದೆ ಪ್ರತಿದಿನ ಬೆಳೆಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ಹಾಗಲಕಾಯಿ ರಸ ಸೇವಿಸುವುದರಿಂದ ರಕ್ತ ಶುದ್ಧಿಗೊಳ್ಳುತ್ತದೆ.

ಕ್ಯಾನ್ಸರ್ ನಿಂದ ಕಾಪಾಡುತ್ತದೆ

ರಕ್ತದಲ್ಲಿ ಇನ್ಸುಲಿನ್ ಪ್ರಮಾಣ ಕಡಿಮೆಯಾಗಲು ಕ್ಯಾನ್ಸರ್ ಗೆ ತುತ್ತಾಗಿ ಬಾಡಲಿಯ ಕಾರ್ಯಕ್ಷಮತೆ ಕುಸಿಯುವುದು ಪ್ರಮುಖ ಕಾರಣವಾಗಿದೆ. ಹಾಗಲಕಾಯಿಯಲ್ಲಿರುವ ಪೋಷಕಾಂಶಗಳು ಈ ಕ್ಯಾನ್ಸರ್ ಗೆ ಕಾರಣವಾದ ಅಪಾಯಕಾರಿ ಜೀವಕೋಶಗಳನ್ನು ಬೆಳೆಯದಂತೆ ತಡೆಯುತ್ತದೆ. ಪರಿಣಾಮವಾಗಿ ಬಾಡಲಿ ಸುಕ್ಷಮವಾಗಿ ಕಾರ್ಯನಿರ್ವಹಿಸಿ ರಕ್ತಕ್ಕೆ ಅಗತ್ಯವಾದ ಪ್ರಮಾಣದಲ್ಲಿ ಇನ್ಸುಲಿನ್ ಅನ್ನು ಉತ್ಪಾದಿಸಿಕೊಡಲು ಸಾಧ್ಯವಾಗುತ್ತದೆ.