ಆರೋಗ್ಯ

‘ ಹಸಿ ಶುಂಠಿ’ ಅನೇಕ ನೋವಿಗೆ ಪರಿಹಾರ..! ತಿಳಿಯಲು ಈ ಲೇಖನ ಓದಿ ..

By admin

November 30, 2017

ನಿಮ್ಮ ಹೊಟ್ಟೆಯಲ್ಲಿ ಏನಾದರೂ ತೊಂದರೆಯಾದರೆ ಹೊಟ್ಟೆನೋವು ಮತ್ತು ಕೆಳಹೊಟ್ಟೆ ಕಿವುಚಿದಂತಹ ಅನುಭವಾಗಿರಬಹುದು. ಸಾಮಾನ್ಯವಾಗಿ ಅಜೀರ್ಣತೆ ಹಾಗೂ ಒಗ್ಗದ ಆಹಾರ ಸೇವನೆಯಿಂದ ಹೊಟ್ಟೆ ಕೆಡುವುದು ಸಾಮಾನ್ಯವಾದ ತೊಂದರೆ. ಇದರ ಪರಿಣಾಮವಾಗಿ ಹೊಟ್ಟೆಯಲ್ಲಿ ಉರಿ, ಐಬಿಎಸ್ , ಮಲಬದ್ಧತೆ ಹಾಗೂ ಹೊಟ್ಟೆಯೊಳಗಣ ಉರಿಯೂತ ಕಾಣಿಸಿಕೊಳ್ಳುತ್ತದೆ.ಹೊಟ್ಟೆಯ ತೊಂದರೆಗಳಿಗೆ ಶುಂಠಿಯ ಕೆಲವು ಲಾಭಗಳ ವಿವರ ಇಲ್ಲಿದೆ.

ಹಸಿಶುಂಠಿಯಲ್ಲಿರುವ ಉರಿಯೂತ ನಿವಾರಕ ಗುಣ, ಜಠರದಲ್ಲಿ ಜೀರ್ಣ ರಸವನ್ನು ಹೆಚ್ಚಿಸಲು ನೆರವಾಗುತ್ತದೆ. ಇದರಿಂದ ಜಠರದಲ್ಲಿ ಆಮ್ಲೀಯತೆ ಕಡಿಮೆಯಾಗುತ್ತದೆ ಹಾಗೂ ಆಹಾರವನ್ನು ಜೀರ್ಣಿಸಲು ನೆರವಾಗುತ್ತದೆ. ಪರಿಣಾಮವಾಗಿ ಆಹಾರದಿಂದ ಪೋಷಕಾಂಶಗಳನ್ನು ಹೀರಿಕೊಳ್ಳಲು ಹಾಗೂ ಅನಗತ್ಯವಾಗಿ ಹೊಟ್ಟೆ ಮತ್ತು ಕರುಳುಗಳಲ್ಲಿ ವಾಯು ಉತ್ಪನ್ನವಾಗುವುದರಿಂದ ತಡೆದಂತಾಗುತ್ತದೆ. ಹಸಿಶುಂಠಿಯ ಅತ್ಯುತ್ತಮ ಪ್ರಯೋಜನ ಪಡೆಯಲು ಒಂದು ಚಿಕ್ಕ ತುಂಡು ಹಸಿಶುಂಠಿಯ ಸಿಪ್ಪೆ ಸುಲಿದು ನಿತ್ಯವೂ ಒಂದು ಗ್ರಾಂನಷ್ಟು ಸೇವಿಸುತ್ತಾ ಬರಬೇಕು.

 

1.ಕೆಟ್ಟ ಹೊಟ್ಟೆಯ ಆರೈಕೆಗೆ ಹಸಿಶುಂಠಿಯ ರಸದ ಸೇವನೆ ಉತ್ತಮ ಪರಿಣಾಮ ನೀಡುತ್ತದೆ. ಇದಕ್ಕಾಗಿ ಸಮಪ್ರಮಾಣದಲ್ಲಿ ಹಸಿಶುಂಠಿಯ ರಸ ಹಾಗೂ ಸಕ್ಕರೆಯನ್ನು ಮಿಶ್ರಣ ಮಾಡಿ ಒಂದು ಲೋಟ ಉಗುರುಬೆಚ್ಚನೆಯ ನೀರಿನಲ್ಲಿ ಬೆರೆಸಿ ಕುಡಿಯಬೇಕು.

2.ಹೊಟ್ಟೆಯ ಗುಡುಗುಡು ಕಡಿಮೆ ಮಾಡಲು ಹಸಿಶುಂಠಿಯ ಕ್ಯಾಂಡಿಯೊಂದನ್ನು ಮಾಡಿ ಚೀಪುತ್ತಾ ಸೇವಿಸಬೇಕು. ಕ್ಯಾಂಡಿಯನ್ನು ತಯಾರಿಸಲು ಒಂದು ಚಿಕ್ಕ ಹಸಿಶುಂಠಿಯ ತುಂಡನ್ನು ಚಿಕ್ಕದಾಗಿ ಕತ್ತರಿಸಿ ಕೊಂಚ ಜೇನು ಹಾಗೂ ಕೊಂಚ ಬೆಣ್ಣೆ ಬೆರೆಸಿ ಚಿಕ್ಕ ಉರಿಯಲ್ಲಿ ಐದು ನಿಮಿಷಗಳ ಕಾಲ ಕುದಿಸಬೇಕು. ಬಳಿಕ ಈ ದ್ರವವನ್ನು ತಣಿಸಿ ಐಸ್ ಕ್ಯಾಂಡಿ ಮಾಡುವ ಅಚ್ಚುಗಳಲ್ಲಿ ಹಾಕಿ ಫ್ರಿಜ್ಜಿನಲ್ಲಿ ಕನಿಷ್ಠ ಮೂವತ್ತು ನಿಮಿಷಗಳ ಕಾಲ ಇರಿಸಿ ಗಟ್ಟಿಯಾಗಿಸಬೇಕು.

3. ಹಸಿಶುಂಠಿಯನ್ನು ಹಾಗೇ ತಿನ್ನಲು ಖಾರವಾಗಿರುವ ಕಾರಣ ಇದನ್ನು ಸಕ್ಕರೆಯ ಹರಳುಗಟ್ಟಿಸಿದರೆ ತಿನ್ನಲು ರುಚಿಯಾಗಿರುತ್ತದೆ. ಇದಕ್ಕಾಗಿ ಕೊಂಚ ಶುಂಠಿಯ ಚಿಕ್ಕ ಚಿಕ್ಕ ತುಂಡುಗಳನ್ನು ಒಂದು ಲೋಟ ನೀರಿನಲ್ಲಿ ಮಧ್ಯಮ ಉದಿಯಲ್ಲಿ ಕುದಿಸಿ. ಬಳಿಕ ಉರಿ ಆರಿಸಿ ಇಪ್ಪತ್ತು ನಿಮಿಷ ತಣಿಸಿ.

ಬಳಿಕ ಈ ನೀರಿಗೆ ಶುಂಠಿಯ ಪ್ರಮಾಣದಷ್ಟೇ ಸಕ್ಕರೆಯನ್ನು ಬೆರೆಸಿ ಮತ್ತೊಮ್ಮೆ ಕುದಿಸಿ ಗಟ್ಟಿಯಾದ ಪಾಕವಾಗಿಸಿ. ಬಳಿಕ ಈ ಪಾಕವನ್ನು ತಟ್ಟೆಯಲ್ಲಿ ತೆಳುವಾಗಿ ಹರಡಿ ಒಣಗಲು ಬಿಡಿ. ಒಣಗಿದ ಬಳಿಕ ಪಟ್ಟಿಗಳಂತೆ ಕತ್ತರಿಸಿ ಫ್ರಿಜ್ಜಿನಲ್ಲಿ ಶೇಖರಿಸಿ ಅಗತ್ಯವಿದ್ದಾಗ ಸೇವಿಸಿ.