ಸುದ್ದಿ

ಹಳ್ಳಿ ಮತ್ತು ನಗರ ಬೈಕ್ ಸವಾರರೆ ಎಚ್ಚರ..!ನಿಮ್ಮಲ್ಲಿ ಇದು ಇಲ್ಲಂದ್ರೆ ಏನಾಗುತ್ತೆ ಗೊತ್ತಾ..?

By admin

January 10, 2018

ಪೋಲೀಸರ ಕಾಟಕ್ಕೆ ಕಳಪೆಮಟ್ಟದ, ಬಿಐಎಸ್ ಅಥವಾ ಐಎಸ್‌’ಐ ಮಾರ್ಕ್ ಇಲ್ಲದ ಹೆಲ್ಮೆಟ್’ಗಳನ್ನು ಕೊಂಡು ಬೈಕ್ ಸವಾರಿ ಮಾಡುತ್ತಿದ್ದವರಿಗೆ ಇಲ್ಲೊಂದು ಶಾಕಿಂಗ್ ನ್ಯೂಸ್ ಇದೆ.ಬೆಂಗಳೂರಿನಲ್ಲಿ ಈಗಾಗ್ಲೆ ಅರ್ಧ ಹೆಲ್ಮೆಟ್ ಹಾಕಿ ಓಡಾಡುತ್ತಿದ್ದವರಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.

ಹೈಕೋರ್ಟ್ ಮಹತ್ವದ ತೀರ್ಪು :-

ಐ.ಎಸ್.ಐ. ಮಾರ್ಕ್ ಇಲ್ಲದ ಹೆಲ್ಮೆಟ್ ಧರಿಸಿದ ದ್ವಿಚಕ್ರವಾಹನ ಸವಾರರ, ಒಂದು ವೇಳೆ ಅಪಘಾತವಾಗಿ ಪ್ರಾಣ ಕಳೆದುಕೊಂಡರೆ ಅಥವಾ ದೇಹದ ಅಂಗಗಳು ಊನವಾದ್ರೆ ಇನ್ಸೂರೆನ್ಸ್ ಕಂಪನಿಗಳು ಅಂತಹವರಿಗೆ ಹಣ ಕೊಡಬಾರದು ಎಂದು ಹೈ ಕೋರ್ಟ್ ತೀರ್ಪು ನೀಡಿದೆ.

ಹಳ್ಳಿಗಳಿಗೂ ಅನ್ವಯ:-

ಈ ತೀರ್ಪು ನಗರಗಳಿಗೆ ಮಾತ್ರವಲ್ಲದೆ ಹಳ್ಳಿಗಳಿಗೂ ಅನ್ವಯವಾಗಲಿದೆ,ಹಳ್ಳಿಗಳಲ್ಲೂ ಕೂಡ ಐಎಸ್‌’ಐ ಮಾರ್ಕ್ ಇರುವ ಹೆಲ್ಮೆಟ್ ಧರಿಸಿ ಓಡಾಡಬೇಕು ಎಂದು ಕೋರ್ಟ್ ಹೇಳಿದೆ.

ನಿಮ್ಮ ಹೆಲ್ಮೆಟ್ ಹೇಗಿರಬೇಕು…

ಸುಮ್ಮನೆ ನೆಪ ಮಾತ್ರಕ್ಕೆ ಹೆಲ್ಮೆಟ್ ಧರಿಸದೆ, ಉತ್ತಮ ಗುಣಮಟ್ಟವುಳ್ಳ ಐ.ಎಸ್.ಐ. ಮಾರ್ಕ್’ವುಳ್ಳದ್ದಾಗಿರಬೇಕು, ಮತ್ತು ಕಂಪನಿಯ ಹೆಸರು ಮತ್ತು ದಿನಾಂಕಗಳನ್ನು ನಮೂದಿಸಿರಬೇಕು ಆದ್ರೆ ಅದು ಅಳಿಸಿಹೊಗುವನ್ತಿರಬಾರದು ಎಂದು ಕೋರ್ಟ್ ಹೇಳಿದೆ.

ಏನ್ ಮಾಡ್ಬೇಕು…

ನೀವೇನಾದ್ರೂ ಅರ್ಧ ಹೆಲ್ಮೆಟ್ ಅಥವಾ ಕಳಪೆ ಗುಣಮಟ್ಟದ ಹೆಲ್ಮೆಟ್ ಏನಾದ್ರೂ ಉಪಯೋಗಿಸ್ತಾ ಇದ್ರೆ ಅವುಗಳನ್ನು ಮೂಲೆಗೆ ಹಾಕಿ ಐ.ಎಸ್.ಐ. ಗುಣಮಟ್ಟದ ಹೆಲ್ಮೆಟ್‘ಗಳನ್ನು ಖರಿದಿಸಿ…