ಉಪಯುಕ್ತ ಮಾಹಿತಿ

ಹಲಸಿನ ಹಣ್ಣಿನ ಈ ಪ್ರಯೋಜನಗಳನ್ನು ಕೇಳಿದ್ರೆ, ನೀವು ತಿನ್ನದೇ ಸುಮ್ಮನೆ ಇರಲ್ಲ…

By admin

August 14, 2017

ಹಲಸಿನ ಹಣ್ಣಿನ ಹೆಸರು ಕೇಳಿದ್ರೆ ಸಾಕು ಬಾಯಲ್ಲಿ ನೀರು ಬರುತ್ತೆ. ಆದ್ರೆ ಇದು ವರ್ಷ ಪೂರ್ತಿ ನಮ್ಗೆ ಸಿಗೋದಿಲ್ಲ. ಕೆಲವೊಂದು ಸೀಸನ್’ಗಳಲ್ಲಿ ಮಾತ್ರ ಸಿಗುತ್ತೆ. ಹಲಸಿನ ಹಣ್ಣಿನ ವಿಚಾರದಲ್ಲಿ, ಆರೋಗ್ಯದ ಕಡೆ ಬಂದ್ರೆ ಕೆಲವೊಂದು ಅಭಿಪ್ರಾಯಗಳು ವಿಭಿನ್ನವಾಗಿವೆ. ಎನಂದ್ರೆ ಹಲಸಿನ ಹಣ್ಣು ತಿಂದ್ರೆ ಖಾಯಿಲೆ ಬರುತ್ತೆ, ಆರೋಗ್ಯ ಕೆಡುತ್ತೆ ಅನ್ನೋದು ಇದೆ.

ಆದರೆ ಈ ಹಣ್ಣು ಕಾಯಿಲೆ ತರುವುದಿಲ್ಲ, ಕಾಯಿಲೆ ಹೋಗಲಾಡಿಸಲು ಸಹಕಾರಿಯಾಗಿದೆ.

ಹಲಸಿನ ಹಣ್ಣು ತಿಂದ್ರೆ ತಿಂದರೆ ಏನೆಲ್ಲಾ ಆರೋಗ್ಯಕಾರಿ ಲಾಭಗಳಿವೆ ಗೊತ್ತಾ? ತಿಳಿಯಲು ಮುಂದೆ ಓದಿ…

ಹಲಸಿನ ಹಣ್ಣು ತಿಂದ್ರೆ ತಿಂದರೆ ಜ್ವರ ಬರುವುದಿಲ್ಲ, ಆದರೆ ಜ್ವರ ಇದ್ದಾಗ ಈ ಹಣ್ಣುಗಳನ್ನು ತಿನ್ನಲು ಹೋಗಬೇಡಿ.

ಹಲಸಿನ ಹಣ್ಣಿನ ಆರೋಗ್ಯಕರ ಗುಣಗಳು :

 

ಹಲಸಿನ ಹಣ್ಣು ತಿಂದರೆ ಕಾಯಿಲೆ ಬರುತ್ತದೆ ಎಂದು  ತಿನ್ನಲು ಭಯಪಡುವಾಗ ಇದನ್ನು ತಿಂದರೆ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಅಂದರೆ ಆಶ್ಚರ್ಯವಾಗುವುದು ಸಹಜ. ಹಲಸಿನ ಹಣ್ಣಿನಲ್ಲಿ ವಿಟಮಿನ್ ಸಿ ಮತ್ತು ಉತ್ತಮ ಪೋಷಕಾಂಶಗಳಿದ್ದು ಶೀತ, ಸೋಂಕು ಇವುಗಳನ್ನು ತಪ್ಪಿಸಲು ಸಹಕಾರಿಯಾಗಿದೆ. ಇದರಲ್ಲಿ antioxidant ಪ್ರಮಾಣ ಅಧಿಕವಾಗಿದೆ.

ದೇಹದಲ್ಲಿ ಖನಿಜಾಂಶಗಳ ಕೊರತೆ ಉಂಟಾದರೆ ದೇಹದಲ್ಲಿ ಸಕ್ಕರೆ ಪ್ರಮಾಣ ಅಧಿಕವಾಗುತ್ತದೆ. ಹಲಸಿನ ಹಣ್ಣಿನಲ್ಲಿ ಖನಿಜಾಂಶಗಳು ಅಧಿಕವಾಗಿ ಇರುವುದರಿಂದ ದೇಹದಲ್ಲಿ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿಡಲು ಸಹಕಾರಿಯಾಗಿದೆ.

ಈ ಹಣ್ಣಿನಲ್ಲಿ ಅಧಿಕ ಮ್ಯಾಗ್ನಿಷಿಯಂ ಮತ್ತು ಕ್ಯಾಲ್ಸಿಯಂ ಅಂಶವಿರುವುದರಿಂದ ಮೂಳೆಗಳನ್ನು ಬಲಪಡಿಸಲು ಸಹಕಾರಿಯಾಗಿದೆ. ಮ್ಯಾಗ್ನಿಷಿಯಂ, ಕ್ಯಾಲ್ಸಿಯಂ, ಪೊಟಾಷ್ಯಿಯಂ ಅಧಿಕವಿರುವ ಆಹಾರ ತಿಂದರೆ ಮೂಳೆಗಳು ಗಟ್ಟಿಯಾಗುವುದು.

ಹಲಸಿನ ಹಣ್ಣಿನಲ್ಲಿರುವ ಖನಿಜಂಶಗಳು (micromineral) ಥೈರಾಯ್ಡ್ ಗ್ರಂಥಿಯ ಆರೋಗ್ಯವನ್ನು ಕಾಪಾಡುತ್ತದೆ. ದೇಹದಲ್ಲಿ ಹಾರ್ಮೋನ್ ಗಳ ಉತ್ಪತ್ತಿಯನ್ನು ಸರಿ ಪ್ರಮಾಣದಲ್ಲಿ ಇಡಲು ಥೈರಾಯ್ಡ್ ಗ್ರಂಥಿ ಮುಖ್ಯ ಪಾತ್ರವಹಿಸುತ್ತದೆ.

ಒಂದು ಹಲಸಿನ ಹಣ್ಣಿನಲ್ಲಿ ಬಾಳೆಹಣ್ಣಿನಲ್ಲಿರುವಷ್ಟು ಪೊಟಾಷ್ಯಿಯಂ ಅಂಶವಿರುತ್ತದೆ. ಪೊಟಾಷ್ಯಿಯಂ ದೇಹದಲ್ಲಿ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುವಲ್ಲಿ ಸಹಕಾರಿಯಾಗಿದೆ.

ಇದರಲ್ಲಿ ನಾರಿನಂಶವಿರುವುದರಿಂದ ಮಲಬದ್ಧತೆ ಸಮಸ್ಯೆ ಇರುವವರು ಇದನ್ನು ತಿನ್ನುವುದು ಒಳ್ಳೆಯದು.

ಇದರಲ್ಲಿ ಕ್ಯಾರೆಟ್ ನಲ್ಲಿರುವ ಕಾಲು ಭಾಗದಷ್ಟು ವಿಟಮಿನ್ ಎ ಅಂಶವಿರುವುದರಿಂದ ಹಣ್ಣಿನ ದೃಷ್ಟಿ ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ. ವಿಟಮಿನ್ ಎ ಕೊರತೆ ಉಂಟಾದರೆ ಇರುಳು ಕುರುಡುತನ ಉಂಟಾಗುವುದು.

ಇದರಲ್ಲಿ ವಿಟಮಿನ್ ಬಿ6 ಅಂಶವಿರುವುದರಿಂದ ರಕ್ತದಲ್ಲಿರುವ homocystein ಪ್ರಮಾಣ ಕಡಿಮೆ ಮಾಡಿ ಹೃದಯದ ಸ್ವಾಸ್ಥ್ಯ ಹೆಚ್ಚಿಸಲು ಸಹಕಾರಿಯಾಗಿದೆ.

ಇದರಲ್ಲಿರುವ ವಿಟಮಿನ್ ಮತ್ತು ಖನಿಜಾಂಶಗಳು ದೇಹದಲ್ಲಿ ರಕ್ತ ಸರಾಗವಾಗಿ ಹರಿಯಲು ಸಹಕಾರಿಯಾಗಿದೆ. ಮೂಳೆಗಳನ್ನು ಬಲಪಡಿಸಿ ಶರೀರದಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಸಮಸ್ಯೆಯನ್ನು ತಡೆಗಟ್ಟುತ್ತದೆ.

ಇದರಲ್ಲಿ ಕಬ್ಬಿಣದಂಶ ಕೂಡ ಇರುವುದರಿಂದ ರಕ್ತ ಹೀನತೆ ಸಮಸ್ಯೆ ನಿವಾರಣೆಗೆ ಇದನ್ನು ತಿನ್ನುವುದು ಒಳ್ಳೆಯದು.

ಮೂಲ: ಸಂಗ್ರಹ ಮಾಹಿತಿ