ಮನರಂಜನೆ

‘ಹರ ಹರ ಮಹಾದೇವ’ ಧಾರಾವಾಹಿಯನ್ನು ನಿಲ್ಲಿಸಿದ ಕಾರಣ ಕೇಳಿದ್ರೆ ನೀವ್ ಶಾಕ್ ಆಗ್ತೀರಾ…!

By admin

February 26, 2018

ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಹರ ಹರ ಮಹಾದೇವ’ ಧಾರಾವಾಹಿ ಜನವರಿ  13ರಂದು ರಾತ್ರಿ 7.30ಕ್ಕೆ ಕೊನೆಯ ಸಂಚಿಕೆಯೊಂದಿಗೆ ಮುಕ್ತಾಯವಾಗಿದೆ. ಈ ದಾರವಾಹಿ ಇದುವರೆಗೂ  416 ಕಂತುಗಳ ಪ್ರಸಾರ ಆಗಿದೆ.

 

 

 

ದೇವಾದಿ ದೇವ ಮಹಾದೇವನ ಮಹಿಮೆ ಹಾಗೂ ಜೀವನಚಿತ್ರ ಒಳಗೊಂಡ ಈ ಧಾರಾವಾಹಿಯು ಕರ್ನಾಟಕದ ಮನೆ ಮನೆಗಳಲ್ಲಿ ಪ್ರೇಕ್ಷಕರನ್ನು ಹಿಡಿದಿಟ್ಟಿತ್ತು. ಕನ್ನಡಿಗರ ಜನಪ್ರಿಯ ಸಿರಿಯಲ್’ಗಳ ಪೈಕಿ ಇದು ಒಂದಾಗಿತ್ತು.ಕಿರುತೆರೆಯಲ್ಲಿ ಅದ್ದೂರಿ ಗ್ರಾಪಿಕ್ಸ್ ಮತ್ತು ಸೆಟ್ ಗಳಿಂದ ನಿರ್ಮಾಣವಾಗಿದ್ದ ಈ ದಾರವಾಹಿಯನ್ನು ಜನರು ತುಂಬಾ ಮೆಚ್ಚಿಕೊಂಡಿದ್ದರು.

ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಹರ ಹರ ಮಹಾದೇವ’ ಧಾರಾವಾಹಿ ಸತಿ ಮತ್ತು ಶಿವನ ಪ್ರೇಮ ಪ್ರಸಂಗದಿಂದ ಆರಂಭವಾಗಿದ್ದ ಈ ಧಾರಾವಾಹಿ, ಮಹಾದೇವನ ಮಾರ್ತಾಂಡ ಅವತಾರದ ಪ್ರಸಂಗದೊಂದಿಗೆ ಮುಕ್ತಾಯವಾಗಿದೆ.ಪಾರ್ವತಿ ದೇವಿಯ ಮಹಲ್ಸಳಾ ಅವತಾರ ಮತ್ತು ಮಲ್ಲ, ಮಣಿ ಎಂಬ ದುಷ್ಟ ಅಘೋರರ ಅಂತ್ಯ, ಹಾಗೂ ಮಹಲ್ಸಳಾ ಜೊತೆ ಶಿವನ ಅವತಾರ ಮಾರ್ತಾಂಡನ ಮದುವೆಯ ಸನ್ನಿವೇಶದೊಂದಿಗೆ ಧಾರವಾಹಿಯನ್ನು ನಿಲ್ಲಿಸಲಾಗಿದೆ.

‘ಹರ ಹರ ಮಹಾದೇವ’ ಧಾರಾವಾಹಿ ನಿಲ್ಲಲು ಕಾರಣ…

ಜನರನ್ನು ತನ್ನತ್ತ ಸೆಳೆದಿದ್ದ ಈ ದಾರವಾಹಿ ನಿಲ್ಲಲು ಕಾರಣ ಟಿಅರ್’ಪಿ. ಹೌದು,ಬೇರೆ ದಾರವಾಹಿಗಳ ಪೈಪೋಟಿ ಮತ್ತು ಟಿಅರ್’ಪಿ ಒಂದೇ ಸಮನೆ ಏರಿಕೆಯಾಗಿದ್ದರಿಂದ ‘ಹರ ಹರ ಮಹಾದೇವ’ ನಿಲ್ಲಿಸಲಾಗಿದೆ. ಮುಂಬೈನಲ್ಲಿ ನಿರ್ಮಿಸಿದ್ದ ಸೆಟ್‌ನಲ್ಲಿ ಇದರ ಚಿತ್ರೀಕರಣ ಆಗುತಿತ್ತು.ಸುಮಾರು 300 ತಂತ್ರಜ್ಞರು ಇದರಲ್ಲಿ ಕೆಲಸ ಮಾಡುತ್ತಿದ್ದರು.