ಉಪಯುಕ್ತ ಮಾಹಿತಿ

ಹರಿದ ಬಟ್ಟೆ, ಜೀನ್ಸ್ ತೊಡೋದರಿಂದ ಏನಾಗುತ್ತೆ ಗೊತ್ತಾ?

By admin

March 06, 2019

ಈವರೆಗೆ ವಾಸ್ತುವಿಗೆ ಸಂಬಂಧಿಸಿದಂತೆ ಅನೇಕ ವಿಷಯಗಳನ್ನು ಹೇಳಿದ್ದೇವೆ. ಫೆಂಗ್ ಶೂಯಿಯಲ್ಲಿ ಯಾವ ವಸ್ತು ಮನೆಯಲ್ಲಿದ್ದರೆ ಶುಭ ಹಾಗೆ ಯಾವ ಜಾಗದಲ್ಲಿ ಯಾವ ವಸ್ತು ಇರಬೇಕು ಎಂಬೆಲ್ಲ ವಿಷಯಗಳನ್ನು ಹೇಳಲಾಗಿದೆ. ಇದ್ರ ಜೊತೆಗೆ ಫೆಂಗ್ ಶೂಯಿಯಲ್ಲಿ ಬಟ್ಟೆಗೂ ಮಹತ್ವ ನೀಡಲಾಗಿದೆ.  ಯಾವ ಬಟ್ಟೆ ಧರಿಸ್ತೇವೆ ಹಾಗೆ ಬಟ್ಟೆಯನ್ನು ಹೇಗೆ ಬಳಸ್ತೇವೆ ಎಂಬುದು ಫೆಂಗ್ ಶೂಯಿಯಲ್ಲಿ ಮಹತ್ವ ಪಡೆದಿದೆ.

ನೀವು ಧರಿಸುವ ಬಟ್ಟೆ ನಿಮ್ಮ ಸೌಂದರ್ಯವನ್ನು ಹೆಚ್ಚಿಸಬಹುದು. ಆದ್ರೆ ಇದೇ ಬಟ್ಟೆ ನಿಮ್ಮ ದುರಾದೃಷ್ಟಕ್ಕೆ ಕಾರಣವಾಗಬಹುದು. ಮನೆಯಿಂದ ಹೊರ ಹೋಗುವಾಗಲ್ಲ ಮನೆಯಲ್ಲಿರುವಾಗ ಅಥವಾ ಅಡುಗೆ ಮಾಡುವಾಗ ಕೂಡ ಹಳೆಯ ಹಾಗೂ ಹರಿದ ಬಟ್ಟೆಯನ್ನು ಧರಿಸಬಾರದು. ಇದು ಬಡತನಕ್ಕೆ ದಾರಿ ಮಾಡಿಕೊಡುತ್ತದೆ.

ಬೆಳಿಗ್ಗೆ ಎದ್ದ ತಕ್ಷಣ ನೈಟ್ ಡ್ರೆಸ್ ಬಿಚ್ಚಿ ಕಣ್ಣಿಗೆ ಹಿತವೆನಿಸುವ ಬಟ್ಟೆಯನ್ನು ಧರಿಸಬೇಕು. ಇದು ನಿಮ್ಮಲ್ಲಿ ಧನಾತ್ಮಕ ಶಕ್ತಿಯನ್ನು ಹೆಚ್ಚಿಸಿ ಅದೃಷ್ಟವನ್ನು ಹೊತ್ತು ತರುತ್ತದೆ.

ಸ್ವಚ್ಛವಾಗಿರುವ ಬಟ್ಟೆ ಹಾಗೂ ಸುಂದರ ನಗುವಿನೊಂದಿಗೆ ಬೆಳಗನ್ನು ನೀವು ಸ್ವಾಗತಿಸಬೇಕು. ಬಟ್ಟೆಯನ್ನು ತೊಳೆದ ನಂತ್ರ ಅದನ್ನು ಬಿಸಿಲಿನಲ್ಲಿ ಒಣ ಹಾಕಬೇಕು.

ತೊಳೆದ ಹಾಗೂ ಒಣಗಿದ ಬಟ್ಟೆಯನ್ನು ರಾತ್ರಿ ಹೊರಗೆ ಇಡಬಾರದು. ರಾತ್ರಿ ನಕಾರಾತ್ಮಕ ಶಕ್ತಿ ಜಾಸ್ತಿ ಇರುತ್ತದೆ. ಇದು ಬಟ್ಟೆಯ ಮೇಲೂ ಪ್ರಭಾವ ಬೀರುತ್ತದೆ. ಅದೇ ಬಟ್ಟೆಯನ್ನು ನಾವು ಧರಿಸಿದ್ರೆ ನಮ್ಮ ಮೇಲೆ ನಕಾರಾತ್ಮಕ ಶಕ್ತಿ ಪ್ರಭಾವ ಹೆಚ್ಚಾಗುತ್ತದೆ.

ತಿಂಗಳಿಗೊಮ್ಮೆಯಾದ್ರೂ ದಿಂಬು ಹಾಗೂ ಹಾಸಿಗೆಯನ್ನು ಬಿಸಿಲಿಗೆ ಹಾಕಬೇಕು. ಅನಾರೋಗ್ಯಕ್ಕೊಳಗಾದ ವ್ಯಕ್ತಿ ಬಳಸಿದ ಬಟ್ಟೆಯನ್ನು ಸ್ವಚ್ಛಗೊಳಿಸಿ ಬಿಸಿಲಿಗೆ ಹಾಕಬೇಕು. ಸಣ್ಣಪುಟ್ಟ ವಿಷಯಗಳು ಕೂಡ ನಮ್ಮ ಆರೋಗ್ಯ, ಅದೃಷ್ಟದ ಮೇಲೆ ಪರಿಣಾಮ ಬೀರುತ್ತದೆ.