ಸುದ್ದಿ

ಸ್ವಾತಂತ್ರ್ಯ ಬಂದಾಗಿನಿಂದ ಇಲ್ಲಿವರೆಗೂ ಈ ಗ್ರಾಮದಲ್ಲಿ ಒಂದೇ ಒಂದು ಅಪರಾಧ ಪ್ರಕರಣ ನಡೆದಿಲ್ಲ..!ಯಾವುದೇ ಕೇಸ್ ದಾಖಲಾಗಿಲ್ಲ!ನಮ್ಮ ಪಕ್ಕದಲ್ಲೇ ಇದೇ ಆ ಊರು.ತಿಳಿಯಲು ಈ ಲೇಖನ ಓದಿ…

By admin

March 01, 2018

ಈ ಗ್ರಾಮದಲ್ಲಿ ಇದುವರೆಗೂ ಒಂದು ಅಪರಾಧ ಕೃತ್ಯಗಳು ನಡೆದಿಲ್ಲ. ಇದು ಎಲ್ಲೋ ಹೊರ ದೇಶದಲ್ಲಿ ಅಲ್ಲ ನಮ್ಮ ಭಾರತದ ಹಾಗು ಕರ್ನಾಟಕದ ಪಕ್ಕದ ರಾಜ್ಯ ಆದಂತ ಆಂಧ್ರ ಪ್ರದೇಶದ ಶ್ರೀಕಾಕುಲಂ ಜಿಲ್ಲೆಯ ಬೈರಿಪುರಂ ಗ್ರಾಮದಲ್ಲಿ ಈ ಗ್ರಾಮದಲ್ಲಿನ ಜನರು ಹಾಗು ಇಲ್ಲಿನ ವಾತಾವರಣದ ಬಗ್ಗೆ ನೀವು ಕೇಳಿದರೆ ಆಶ್ಚರ್ಯ ಪಡೋದು ಗ್ಯಾರೆಂಟಿ..

ಹೇಳಿ ಕೇಳಿ ಅಂದ್ರ ಹಲವು ಅಪರಾಧ ಪ್ರಕರಣಕ್ಕೆ ಸುದ್ದಿ ಯಾಗುವಂತ ರಾಜ್ಯ ಆದರೆ ಅಂತ ರಾಜ್ಯದಲ್ಲಿ ಇಂತದೊಂದು ಗ್ರಾಮ ಇರೋದು ನಿಜಕ್ಕೂ ಆಶ್ಚರ್ಯವೇ ಆಗಿದೆ.ಬೈರಿಪುರಂ ಗ್ರಾಮದಲ್ಲಿ ಸ್ವಾತಂತ್ರ್ಯ ಸಿಕ್ಕಿದ ನಂತರ ಒಂದೇ ಒಂದು ಅಪರಾಧ ನಡೆದಿಲ್ಲವಂತೆ 15 ವರ್ಷಗಳ ಹಿಂದೆ ಕಾನೂನು ವ್ಯಾಜ್ಯದ ಕೇಸು ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವುದು ಬಿಟ್ಟರೆ ಬೇರೆ ಯಾವುದೇ ಪ್ರಕರಣಗಳು ದಾಖಲಾಗಿಲ್ಲ.

ಈ ಗ್ರಾಮದಲ್ಲಿ ಚಿಕ್ಕ ಪುಟ್ಟ ಗಲಾಟೆಗಳು ಸಮಸ್ಯೆಗಳು ಎದುರಾದರೆ ಆ ಊರಿನ ಗ್ರಾಮಸ್ಥರೇ ಕೂಡಿ ಪರಿಹಾರವನ್ನು ಕಂಡು ಕೊಳ್ಳುತ್ತಾರೆ. ಹಾಗು ಯಾವುದೇ ಅಪರಾಧ ಕೃತ್ಯಗಳು ನಡೆಯದಂತೆ ಆ ಗ್ರಾಮದ ಜನರು ನೋಡಿಕೊಳ್ಳುತ್ತಾರೆ. ಈ ಗ್ರಾಮವನ್ನು ಅಪರಾಧ ಮುಕ್ತ ಗ್ರಾಮವನ್ನಾಗಿ ಇಡುವುದು ಇಲ್ಲಿಯ ಜನರ ಸಂಪ್ರದಾಯವಾಗಿದೆ ಅಂತೇ.

ಪೊಲೀಸ್ ಇಲಾಖೆ ಇದರ ಬಗ್ಗೆ ಹೇಳುವುದು ಏನು..?

ಗ್ರಾಮಸ್ಥರು ತಮ್ಮಷ್ಟಕ್ಕೆ ವಿವಾದಗಳನ್ನು ಬಗೆಹರಿಸಲು ಪ್ರಯತ್ನಿಸುತ್ತಾರೆ. ತಮ್ಮ ಗ್ರಾಮದ ಮುಖ್ಯಸ್ಥರು ಕೊಡುವ ತೀರ್ಮಾನವನ್ನು ಗೌರವಿಸುತ್ತಾರೆ. ಸ್ವಾತಂತ್ರ್ಯ ಬಂದ ನಂತರ ಒಂದೇ ಒಂದು ಕೇಸು ದಾಖಲಾಗಿದೆಯಷ್ಟೆ ಎನ್ನುತ್ತಾರೆ ಕಾವಿಟಿ ಸಬ್ ಇನ್ಸ್ ಪೆಕ್ಟರ್ ಕೆ.ವಾಸು ನಾರಾಯಣ.

ಸ್ವಾತಂತ್ರ್ಯ ಬಂದ ನಂತರ ಒಂದೇ ಒಂದು ಕೇಸು ದಾಖಲಾಗಲು ಕಾರಣ ಇದೆ…

ಕೃಷಿ ಭೂಮಿಗೆ ಸಂಬಂಧಿಸಿದಂತೆ ಎರಡು ಗುಂಪಿನ ಮಧ್ಯೆ ವಿವಾದ ಶುರು ಆಗಿತ್ತು ಆಗಾಗಿ ಆರೋಪಿಗಳು ಪಕ್ಕದ ಗ್ರಾಮದವರಾಗಿದ್ದರಿಂದ ಹಾಗು ವಿವಾದ ಕಂದಾಯ ಜಮೀನಿಗೆ ಸಂಬಂಧಪಟ್ಟದ್ದಾಗಿದ್ದರಿಂದ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ಈ ಗ್ರಾಮ ಸಮಿತಿಯಿದ್ದು ಅಲ್ಲಿ ವಿವಾದಗಳ ವಿಚಾರಣೆಯಾಗಿ ಪರಿಹಾರ ಕಂಡುಕೊಳ್ಳಲಾಗುತ್ತದೆ. ಇತ್ತೀಚೆಗೆ ವಿಚ್ಛೇದನಕ್ಕೆ ಹೊರಟಿದ್ದ ಐವರು ದಂಪತಿಗಳನ್ನು ಸಮಾಲೋಚನೆ ನಡೆಸಿದ ನಂತರ ವಿಚ್ಛೇದನದ ಯೋಚನೆ ಬಿಟ್ಟು ಇಂದು ಉತ್ತಮ ಜೀವನ ನಡೆಸುತ್ತಿದ್ದಾರೆ. ಅದೇನೇ ಇರಲಿ ಇಂತಹ ಒಂದು ಗ್ರಾಮ ಇರುವುದು ನಿಜಕ್ಕೂ ಅದ್ಭುತವೇ ಅನ್ನಬಹುದು..