ಹಣ

ಸ್ಲಮ್ ಮಕ್ಕಳಿಗೆ ಆದ ಅವಮಾನ…! ತಿಳಿಯಲು ಈ ಲೇಖನ ಓದಿ…

By admin

October 27, 2017

ಮೆರಿನಾ ಗಾರ್ಡನ್‌ ದಕ್ಷಿಣ ಮುಂಬಯಿಯ ಶ್ರೀಮಂತರ ದುರಹಂಕಾರದ ವರ್ತನೆ ಇದೀಗ ತೀವ್ರ ಚರ್ಚೆಗೆ ಕಾರಣವಾಗಿದೆ. ಪ್ರತಿಷ್ಠಿತ ಗಾರ್ಡನ್‌ಗೆ ಸ್ಲಮ್‌ ಮಕ್ಕಳು ಆಡಲು ಬರಬಾರದೆಂದು ಕಫ್ ಪರೇಡ್ ಪ್ರದೇಶದ ನಿವಾಸಿಗಳು ಪೊಲೀಸ್‌ ಕಂಪ್ಲೇಂಟ್‌ ಮಾಡಿರುವ ಅಮಾನವೀಯ ಘಟನೆ ನಡೆದಿದೆ.

ದಕ್ಷಿಣ ಮುಂಬಯಿಯ ಪ್ರಸಿದ್ಧ ಗಾರ್ಡನ್‌ಗಳಲ್ಲಿ ಮೆರಿನಾ ಗಾರ್ಡನ್‌ ಒಂದು. ಇತ್ತೀಚಿಗಷ್ಟೆ ಮುಂಬಯಿ ದಕ್ಷಿಣದ ಜಿಲ್ಲಾಧಿಕಾರಿ ಸಂಪದ ಮೆಹ್ತಾ ಸ್ಲಮ್‌ ಮಕ್ಕಳಿಗೂ ಅವಕಾಶ ನೀಡಬೇಕೆಂದು ಆದೇಶ ನೀಡಿದ್ದರು.ಇದರಿಂದ ಶ್ರೀಮಂತ ಹೈಫೈ ವರ್ಗಕ್ಕೆ ಮಾತ್ರ ಸ್ವಲ್ಪ ಮುಜುಗರ ಉಂಟಾಗಿದೆ.

ಸಂವಿಧಾನಕ್ಕೆ ಶ್ರೀಮಂತರು, ಬಡವರು ಅಂತ ಬೇಧವಿಲ್ಲ. ಸಾರ್ವಜನಿಕ ಸ್ವತ್ತನ್ನು ಬಳಸಲು ಹಕ್ಕು ಪ್ರತಿಯೊಬ್ಬರಿಗೂ ಇದೆ. ಈ ಗಾರ್ಡನ್‌ ಆಡಲು ಬಂದ ಸ್ಲಮ್‌ ಮಕ್ಕಳಿಗೆ ‘ಒಂದೋ ಪೊಲೀಸ್‌ ವ್ಯಾನ್‌ ಹತ್ತಿ ಸ್ಟೇಷನ್‌ಗೆ ಹೋಗಿ ಇಲ್ಲ ಜಾಗ ಖಾಲಿ ಮಾಡಿ’ ಎಂದು ಬೆದರಿಸಿದ್ದಾರೆ ಅಲ್ಲಿಯ ವಾಚ್‌ಮೆನ್‌, ನಾವು ಆಡಲು ಬಂದಾಗ ಸೆಕ್ಯೂರಿಟಿ ಗಾರ್ಡ್‌ ಕೋಲು ಹಿಡಿದು ನಮ್ಮನ್ನು ಬೆರಿಸುತ್ತಾರೆ, ನಮ್ಮನ್ನು ಓಡಿಸಲು ನಾಯಿಯನ್ನೂ ಕೂಡ ಬಿಟ್ಟಿದ್ದಾರೆ, ಕಫ್‌ ಪರೇಡ್‌ ಟವರ್‌ನ ಶ್ರೀಮಂತ ಮಕ್ಕಳು ಬಂದಾಗ ನಾವು ಮೈದಾನದಿಂದ ಹೋಗಬೇಕಾಗುತ್ತದೆ’ ಎಂದಿದ್ದಾರೆ.