ಸುದ್ದಿ

ಸ್ಪೋಟಕ ಮಾಹಿತಿ;ಪಬ್‌ಜಿ ವ್ಯಸನದಿಂದಾಗಿ ಯುವಕನ ಜೀವನವಾಯ್ತು ನರಕ!

By admin

September 04, 2019

ಜನಪ್ರಿಯ ಆನ್‌ಲೈನ್ ಆಟಗಳಲ್ಲಿ ಒಂದಾದ ಪಬ್‌ಜಿ ಇತ್ತೀಚಿಗೆ ಯಾವಾಗಲೂಕೆಟ್ಟ ಕಾರಣಗಳಿಗಾಗಿಯೇ ಸುದ್ದಿಯಾಗುತ್ತಿದೆ. ಪಬ್‌ಜಿ ಆಟಗಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆಮತ್ತು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಮತ್ತು ಇತರೆ ವ್ಯಸನಗಳಿಗೆತುತ್ತಾಗಿದ್ದಾರೆ ಎಂಬ ಅನೇಕ ಪ್ರಕರಣಗಳು ದಾಖಲಾಗಿವೆ. ಇಂತಹುದೇ ಮತ್ತೊಂದು ಪ್ರಕರಣ ಹೈದರಾಬಾದ್‌ನಲ್ಲಿವರದಿಯಾಗಿದೆ. ಹೌದು, ಪಬ್‌ಜಿ ಆಟದ ಕಾರಣದಿಂದಾಗಿ ಹೈದರಾಬಾದ್‌ನ 19 ವರ್ಷದ ಯುವಕನೋರ್ವಪಾರ್ಶ್ವವಾಯುವಿಗೆ ಒಳಗಾಗಿದ್ದಾನೆ ಎಂದು ತಿಳಿದುಬಂದಿದೆ.

ಹೌದು, ಕಳೆದ ಆಗಸ್ಟ್ 26 ರಂದು ಈ ಘಟನೆ ನಡೆದಿದ್ದು, ಪಬ್‌ಜಿಗೆವ್ಯಸನಿಯಾಗಿದ್ದ ಹೈದರಾಬಾದ್‌ನ ಯುವಕನಿಗೆ ಪಾರ್ಶ್ವವಾಯು ಅಪ್ಪಳಿಸಿದೆ. ಐಸಿಯುಗೆ ಕರೆದೊಯ್ಯಲಾಗಿರುವಆತ ತನ್ನ ಬಲಗೈ ಮತ್ತು ಕಾಲು ಸರಿಸಲು ಸಾಧ್ಯವಾಗುತ್ತಿಲ್ಲ ಎಂದು ಐಸಿಯು ವೈದ್ಯರು ತಿಳಿಸಿದ್ದಾರೆ.ವೈದ್ಯರ ಪ್ರಕಾರ, ಆತನ ಮೆದುಳಿನ ಹೊಡೆತಕ್ಕೆ ಅನುಗುಣವಾದ ಚಿಹ್ನೆಗಳಿವೆಯಂತೆ.ಆತನ ಮೆದುಳಿನಲ್ಲಿ ರಕ್ತಹೆಪ್ಪುಗಟ್ಟುದ್ದು, ಅದು ಅವನ ಕೈ ಮತ್ತು ಕಾಲುಗಳ ಚಲನೆಯನ್ನು ವಿಫಲಗೊಳಿಸುತ್ತದೆ ಎಂದು ಅವರು ಧೃಡೀಕರಿಸಿದ್ದಾರೆ.

ಪಾರ್ಶ್ವವಾಯು ಹೊಡೆತವನ್ನು ಈ ಹಂತದ ಯುವಕರಲ್ಲಿ ನೋಡುವುದು ಬಹಳ ಅಪರೂಪ. ಆತದಿನಕ್ಕೆ ಕನಿಷ್ಠ 8 ರಿಂದ 10 ಗಂಟೆಗಳ ಕಾಲ ಆಟವಾಡುತ್ತಿದ್ದ ಎಂದು ಪೋಷಕರು ನಮಗೆ ತಿಳಿಸಿದ್ದಾರೆ.ಸರಿಯಾಗಿ ತಿನ್ನುವುದು, ಮಲಗುವುದು ಅಥವಾ ನೀರನ್ನು ಕುಡಿಯದೆ ಆತ ಪಬ್‌ಜಿ ಆಡುತ್ತಿದ್ದನಂತೆ. ಈ ಎಲ್ಲಅಂಶಗಳು ಸೇರಿ ಅವನ ಸ್ಥಿತಿಗೆ ಕಾರಣವಾಗಿವೆ ಎಂದು ವೈದ್ಯರು ತಿಳಿಸಿದ್ದಾರೆ. ಇದು ಗೇಮಿಂಗ್ ಲೋಕದಕರಾಳತೆಯನ್ನು ತೆರೆದಿಟ್ಟಿದ್ದು, ಒಮ್ಮೆ ವ್ಯಸನವಾದರೆ ಬಿಟ್ಟುಬಿಡದೆ ಕಾಡುವ ಈ ಗೇಮಿಂಗ್ ಲೋಕದ ಬಗ್ಗೆಮುಂದೆ ಓದಿ ತಿಳಿಯಿರಿ.

ಗೇಮಿಂಗ್ ಎಂಬ ಕರಾಳ ಲೋಕ! ನೇರವಾಗಿ ಇದನ್ನು ಒಂದು ಸಮಸ್ಯೆ ಎಂದು ಹೇಳಲು ಸಾಧ್ಯವಿಲ್ಲ.ಆದರೆ, ನೀವೊಮ್ಮೆ ಗೂಗಲ್ ಮಾಡಿದರೆ ಆನ್‌ಲೈನ್‌ ಗೇಮಿಂಗ್ ಗಂಭೀರತೆ ಎಷ್ಟಿದೆ ಎಂಬುದು ಅರ್ಥವಾಗುತ್ತದೆ.ಅವು ಬೀರುತ್ತಿರುವ ಸಾಮಾಜಿಕ ಸಮಸ್ಯೆಯ ಚಿತ್ರಣ ಕಣ್ಣನ್ನು ರಾಚುತ್ತದೆ. ಜನರನ್ನು ಆಕರ್ಷಿಸುವ ಸಲುವಾಗಿಯೇಇಂತಹ ಹೊಸ ಹೊಸ ಗೇಮ್‌ಗಳು ಪ್ರತಿ ವರ್ಷ ಮಾರುಕಟ್ಟೆಗೆ ಬರುತ್ತಿವೆ.

ಆನ್‌ಲೈನ್‌ ಗೇಮ್ ಈಗ ಗೇಮ್ ಅಲ್ಲ! ಈ ಗೇಮ್‌ಗಳು ಮನರಂಜನೆಗೆ ಸೀಮಿತವಾಗಬೇಕಿತ್ತು.ಆದರೆ, ಗೇಮ್‌ಗಳು ಈಗ ಜನರ, ಯುವಕರ ಮನಸ್ಸನ್ನು ಕದಡುತ್ತಿವೆ. ಜನರು ಕಲ್ಪನೆಯನ್ನು ತಮ್ಮ ಗೇಮ್‌ ಮೂಲಕಸಾಕಾರಪಡಿಸಿಕೊಳ್ಳಲು ಮುಂದಾಗುತ್ತಿದ್ದಾರೆ. ಕಲ್ಪನಾ ಲೋಕದಲ್ಲಿ ವಿಹರಿಸುತ್ತಾ ತಮ್ಮನ್ನು ತಾವು ಮರೆಯುತ್ತಿದ್ದಾರೆ.ಗೇಮ್ ಅಲ್ಲದ ಗೇಮ್ ಈಗ ಅವರನ್ನು ಬಹುದೂರ ಕರೆದೊಯ್ಯುತ್ತಿದೆ.