ಪ್ರತಿಯೊಬ್ಬ ವ್ಯಕ್ತಿಯೂ ಪ್ರತಿಷ್ಠೆ, ಗೌರವ, ಉನ್ನತ ಹುದ್ದೆ ಬಯಸ್ತಾನೆ. ಆದ್ರೆ ಕೆಲವೇ ಕೆಲವು ವ್ಯಕ್ತಿಗಳು ಮಾತ್ರ ಜೀವನದಲ್ಲಿ ಬಯಸಿದ್ದನ್ನು ಪಡೆಯಲು ಯಶಸ್ವಿಯಾಗ್ತಾರೆ.
ಪ್ರತಿಷ್ಠೆ, ಗೌರವ ಪ್ರಾಪ್ತಿಯಾಗಲು ಜ್ಯೋತಿಷ್ಯ ಶಾಸ್ತ್ರದಲ್ಲಿ ಕೆಲವೊಂದು ಉಪಾಯಗಳನ್ನು ಹೇಳಲಾಗಿದೆ. ಅದನ್ನು ಪಾಲಿಸಿದ್ರೆ ಉನ್ನತ ಹುದ್ದೆ ಜೊತೆ ಸುಖ ಪ್ರಾಪ್ತಿಯಾಗಲಿದೆ.
ಉಪಾಯ: ಸ್ನಾನ ಮಾಡುವ ನೀರಿಗೆ ಬೆಲ್ಲ, ಬಂಗಾರದ ಯಾವುದಾದ್ರೂ ವಸ್ತು, ಅರಿಶಿನ, ಜೇನುತುಪ್ಪ, ಸಕ್ಕರೆ, ಉಪ್ಪು, ಹಳದಿ ಬಣ್ಣದ ಹೂ, ಇವುಗಳಲ್ಲಿ ಯಾವುದಾದ್ರೂ ಒಂದನ್ನು ಹಾಕಿ.
ಪ್ರತಿ ದಿನ ಈ ಉಪಾಯ ಅನುಸರಿಸಿದ್ರೆ ಯಶಸ್ಸು ಪ್ರಾಪ್ತಿಯಾಗಲಿದೆ. ಸ್ನಾನದ ನಂತ್ರ ತಾಮ್ರದ ಪಾತ್ರೆಯಲ್ಲಿ ನೀರು ತುಂಬಿ ಸೂರ್ಯನಿಗೆ ಅರ್ಪಿಸಿ. ಹೀಗೆ ಮಾಡಿದಲ್ಲಿ ಲಾಭ ನಿಮ್ಮನ್ನರಸಿ ಬರುತ್ತದೆ.
ದುರ್ಗಾ ಸಪ್ತಶತಿಯ ಅಧ್ಯಯನ ಮಾಡುವುದ್ರಿಂದಲೂ ಲಾಭವಿದೆ. ಪ್ರತಿ ದಿನ ಇದರ ಪಠಣ ಮಾಡುವುದ್ರಿಂದ ಸಮಾಜದಲ್ಲಿ ಪ್ರತಿಷ್ಠೆ, ಗೌರವ ಪ್ರಾಪ್ತಿಯಾಗುತ್ತದೆ. ಪ್ರತಿ ದಿನ ಪಕ್ಷಿಗೆ ಧಾನ್ಯಗಳನ್ನು ಹಾಕಿದ್ರೂ ಪ್ರಯೋಜನ ಸಿಗಲಿದೆ.