ಸಿನಿಮಾ

ಸ್ಟಾರ್ ನಟ ನಟಿಯ ಕಿಸ್ಸಿಂಗ್ ಫೋಟೋ ಬಯಲು ಮಾಡಿ ಬಿರುಗಾಳಿ ಎಬ್ಬಿಸಿದ ನಟಿ!

By admin

February 28, 2019

ಚಿತ್ರರಂಗದಲ್ಲಿ ನಡೆಯುತ್ತಿರುವ ಕಾಸ್ಟಿಂಗ್ ಕೌಚ್ ವಿರುದ್ಧ ಧ್ವನಿ ಎತ್ತಿ ಹಲವಾರು ಖ್ಯಾತ ನಟರ ವಿರುದ್ಧ ಗಂಭೀರ ಆರೋಪ ಮಾಡಿದ್ದ ನಟಿ ಶ್ರೀರೆಡ್ಡಿ ಮತ್ತೊಮ್ಮೆ ಬಿರುಗಾಳಿ ಎಬ್ಬಿಸಿದ್ದಾರೆ.

ಸಾಕ್ಷಿ ಸಮೇತವಾಗಿ ತಮ್ಮ ಟ್ವಿಟರ್ ಖಾತೆಯಲ್ಲಿ ಫೋಟೋ ಅಪ್ಲೋಡ್ ಮಾಡಿರುವ ಶ್ರೀ ರೆಡ್ಡಿ ಹಲ್ ಚಲ್ ಸೃಷ್ಟಿಸಿದ್ದಾರೆ. ‘ಬಾಹುಬಲಿ’ ಖ್ಯಾತಿಯ ನಟ ರಾಣಾ ದಗ್ಗುಬಾಟಿ ಮತ್ತು ಬಹುಭಾಷಾ ನಟಿ ತ್ರಿಶಾ ಅವರು ಪರಸ್ಪರ ಚುಂಬಿಸುತ್ತಿರುವ ಫೋಟೋ ಪೋಸ್ಟ್ ಮಾಡಿದ್ದಾರೆ.

ಅಲ್ಲದೇ, ಅದರೊಂದಿಗೆ ರಾಣಾ ದಗ್ಗುಬಾಟಿ ಸಹೋದರ ಅಭಿರಾಮ್ ದಗ್ಗುಬಾಟಿ ತಮ್ಮನ್ನು ಚುಂಬಿಸುತ್ತಿರುವ ಮತ್ತೊಂದು ಫೋಟೋ ಕೂಡ ಪೋಸ್ಟ್ ಮಾಡಿದ್ದಾರೆ. ಇವೆರಡು ಫೋಟೋಗಳನ್ನು ಪೋಸ್ಟ್ ಮಾಡಿರುವ ಶ್ರೀ ರೆಡ್ಡಿ ಗೌರವ ಮತ್ತು ಸಂಸ್ಕೃತಿ ಬಗ್ಗೆ ಮಾತನಾಡುವ ದಗ್ಗುಬಾಟಿ ಕುಟುಂಬದವರು ನಿಮ್ಮ ಮಕ್ಕಳಿಗೆ ಇದನ್ನೇ ಕಲಿಸಿದ್ದೀರಾ? ಎಂದು ಪ್ರಶ್ನಿಸಿದ್ದಾರೆ.

ಹಿಂದೆ ರಾಣ ದಗ್ಗುಬಾಟಿ ಮತ್ತು ತ್ರಿಶಾ ಡೇಟಿಂಗ್ ನಲ್ಲಿ ಇದ್ದಾರೆ ಎಂದು ಸುದ್ದಿಯಾಗಿತ್ತು. ಆದರೆ, ಅದು ಮರೆತು ಹೋದ ವಿಷಯವಾಗಿತ್ತು. ಈಗ ಶ್ರೀ ರೆಡ್ಡಿ ಚುಂಬನದ ಫೋಟೋ ಹಾಕಿ ಹಲ್ ಚಲ್ ಸೃಷ್ಟಿಸಿದ್ದಾರೆ.