ಸೌಂದರ್ಯ

ಸೌತೆಕಾಯಿಯಲ್ಲಿದೆ ತೇವಾಂಶಭರಿತವಾದ ತ್ವಚೆಯ ಗುಟ್ಟು.! ತಿಳಿಯಲು ಈ ಲೇಖನ ಓದಿ..

By admin

February 20, 2018

ಸೌತೆ ಕಾಯಿ ತೇವಾಂಶಭರಿತವಾದದ್ದು ಇದು ಎಲ್ಲಾರಿಗೂ ತಿಳಿದಿರುವ ವಿಷಯ. ಬೇಸಿಗೆ ಕಾಲದಲ್ಲಿ ಹೆಚ್ಚಾಗಿ ಹೆವಿಸುವುದು ಒಳ್ಳೆಯದು ಏಕೆಂದರೆ ಇದು ದೇಹದ ಉಷ್ಣಾಂಶವನ್ನ ಕಡಿಮೆ ಮಾಡುತ್ತದೆ. ಇದನ್ನ ಚಳಿಗಾಲದಲ್ಲಿ ತಿಂದರೆ ಶೀತವಾಗುತ್ತದೆ ಎಂದು ಎಲ್ಲರು ನಂಬುತ್ತಾರೆ, ಆದರೆ ಇದು ಚಳಿಗಾಲದಲ್ಲಿ ನಮ್ಮ ತ್ವಚೆಯಣ್ಣ ಕಾಪಾಡಿಕೊಳ್ಳಲು ಸಹಾಯಕವಾಗುತ್ತದೆ.

 

* ಸ್ಥೂಲಕಾಯದವರು ತಮ್ಮ ಆಹಾರದೊಂದಿಗೆ ಸೌತೆಕಾಯಿಯನ್ನು ಸೇವಿಸುವುದರಿಂದ ಸ್ಥೂಲಕಾಯ ಕಡಿಮೆಯಾಗುತ್ತದೆ.

* ಸೌತೆಯ ಬೀಜವನ್ನು ನೆರಳಿನಲ್ಲಿ ಒಣಗಿಸಿ ಚೂರ್ಣ ಮಾಡಿಕೊಂಡು, ಅದಕ್ಕೆ ತುಳಸಿ ಎಲೆ ಅರೆದು ಸೇರಿಸಿ ಮೈಗೆ ಹಚ್ಚಿಕೊಂಡು ಸ್ನಾನ ಮಾಡುವುದರಿಂದ ತುರಿಕೆ ನಿವಾರಣೆಯಾಗುತ್ತದೆ.

* ಸೌತೆಕಾಯಿಯನ್ನು ಕತ್ತರಿಸುವಾಗ, ತಿರುಳು ಹಾಗೂ ಸಿಪ್ಪೆಯನ್ನು ತೆಗೆದು ಮುಖ, ಕತ್ತು, ಅಂಗಾಲು, ಅಂಗೈಗಳಿಗೆ ಚೆನ್ನಾಗಿ ತಿಕ್ಕಿ 10-15 ನಿಮಿಷಗಳ ಕಾಲ ಹಾಗೆಯೇ ಬಿಡಿ, ಇದರಿಂದ ಶರೀರದ ಉಷ್ಣಾಂಶವು ಕಡಿಮೆಯಾಗುತ್ತದೆ.

* ವಾರದಲ್ಲಿ 2 ಬಾರಿ ಸೌತೆಕಾಯಿಯ ರಸವನ್ನು ಅರ್ಧ ಬಟ್ಟಲು ಕೊಬ್ಬರಿ ಎಣ್ಣೆಯೊಂದಿಗೆ ಬೆರೆಸಿ, ತಲೆ, ನೆತ್ತಿ, ಮೈಗೆ ಹಚ್ಚಿಕೊಂಡು ಅರ್ಧ ಗಂಟೆಯ ನಂತರ ಸ್ನಾನ ಮಾಡುವುದರಿಂದ ಚರ್ಮ ಕಾಂತಿಯುತವಾಗುವ ಜೊತೆಗೆ ಮೃದುವಾಗುತ್ತದೆ.