ಈಗಂತೂ ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ವಿಷಯ ಇರಲಿ, ಅಂದ್ರೆ ಅದು ಒಳ್ಳೇದು ಅಥವಾ ಕೆಟ್ಟದ್ದು ಆಗಿರಬಹುದು, ಬಹಳ ವೇಗವಾಗಿ ವೈರಲ್ ಆಗುತ್ತದೆ.
ಪ್ರಸ್ತುತ ದಿನಗಳಲ್ಲಿ ಹೆಚ್ಚಿನ ಜನರು ಅವಲಂಬಿಸಿರುವ ಸೋಸಿಯಲ್ ಮೀಡಿಯಗಳಾದ ಪೇಸ್ಬುಕ್, ವಾಟ್ಸಪ್, ಟ್ವಿಟರ್ ಮುಂತಾದವುಗಳಲ್ಲಿ ಕೆಲವರು ಅವಹೇಳನಕಾರಿ ಬರಹಗಳನ್ನು ಪ್ರಕಟಿಸುವುದು ಸಾಮಾನ್ಯವಾಗಿದೆ.
ಆದ್ರೆ ಈ ರೀತಿ ಯಾವುದೇ ಸಮುದಾಯದ ವಿರುದ್ದ ಇಲ್ಲ ಸಲ್ಲದ ಅಥವಾ ಸಮುದಾಯಗಳ ವಿರುದ್ದ ಅವಹೇಳನಕಾರಿ ಬರಹಗಳನ್ನು ಪ್ರಕಟಿಸುವುದು ಶಿಕ್ಷಾರ್ಹ ಅಪರಾಧ ಎಂಬುದಾಗಿ ದೆಹಲಿ ಹೈಕೋರ್ಟು ತಿಳಿಸಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಒಳ್ಳೆಯದರ ಜೊತೆಗೆ ಕೆಟ್ಟ ಸುದ್ದಿಗಳು, ಮತ್ತು ಮಾಹಿತಿಗಳು ಇರುತ್ತವೆ. ಕೆಲವು ಮಾಹಿತಿಗಾಳು ಎಷ್ಟು ಪ್ರಯೋಜನಕಾರಿಯೊ? ಅಷ್ಟೇ ಪರಿಣಾಮಕಾರಿಯಾಗಿರುತ್ತದೆ. ಇದಕ್ಕೆ ಸಾಕ್ಷಿಯಾಗಿ ಈ ಹಿಂದೆ ಹಲವಾರು ಉದಾಹರಣೆಗಳನ್ನು ನೋಡಿರುತ್ತಿರಿ.
ಧರ್ಮದ ವಿರುದ್ದ, ಜಾತಿಗಳ ನಡುವೆ ಸಮುದಾಯಗಳ ನಡುವೆ ಅವಹೇಳನಕಾರಿ ಮಾಹಿತಿ ನೀಡುವುದು ಹಾಗು ಕೋಮುಗಲಭೆಗೆ ಪ್ರಚೋದನೆ ನೀಡುವಂತಹ ಮಾಹಿತಿಗಳನ್ನು ತಡೆಗಟ್ಟಲು ಮತ್ತು ಇಂತಹ ಮಾಹಿತಿಗಳಿಗೆ ಕಡಿವಾಣ ಹಾಕಲು ದೆಹಲಿ ಹೈಕೋರ್ಟು ಶಿಕ್ಷಾರ್ಹ ಅಪರಾಧವೆಂದು ತೀರ್ಪು ನೀಡಿದೆ.
ಕಾಯ್ದೆ
ಪರಿಶಿಷ್ಟ ಜಾತಿ -ಪರಿಶಿಷ್ಟ ಸಮುದಾಯದ ಮೇಲಿನ ದೌರ್ಜನ್ಯ ತಡೆ 1989 ರ ಕಾಯ್ದೆಯ 3 (1) act ಅಡಿ ಸಾಮಾಜಿಕ ಜಾಲತಾಣಗಳಲ್ಲಿ SC/ST ಸಮುದಾಯದ ವ್ಯಕ್ತಿಯ ವಿರುದ್ಧ ಯಾವುದೇ ತರಹದ ಅವಹೇಳನಕಾರಿ ಪೋಸ್ಟ್ ಗಳನ್ನು ಹಾಕುವುದು ಶಿಕ್ಷರ್ಹ ಅಪರಾಧವೆಂದು ನ್ಯಾಯ ಮೂರ್ತಿ ವಿಪಿನ್ ಸಿಂಗ್ ಸ್ಪಷ್ಟವಾಗಿ ಹೇಳಿದ್ದಾರೆ.
ವಾಟ್ಸಪ್’ನಲ್ಲಿ ಇವುಗಳನ್ನು ಹಂಚಿಕೊಳ್ಳುವಂತಿಲ್ಲ
ಪೇಸ್ಬುಕ್, ಟ್ವಿಟರ್ ನಲ್ಲಿ ಹಾಕುವಂತಹ ಪೋಸ್ಟ್ಗಳನ್ನು ವಾಟ್ಸಪ್ ನಲ್ಲಿ ಹಂಚಿಕೊಳ್ಳುವಂತಿಲ್ಲ. ಇನ್ಮುಂದಾದ್ರು ಇಂತಹ ತಪ್ಪುಗಳನ್ನು ಮಾಡದೆ ಇರುವಂತಹದ್ದು ಒಳ್ಳೆಯದು, ಹಾಗೆಯೇ ಸಮಾಜದ ಶಾಂತಿ ಸುವ್ಯವಸ್ಥೆ ಗೆ ಉತ್ತಮವಾದ ಕೆಲಸವಾಗುತ್ತದೆ.