ಜ್ಯೋತಿಷ್ಯ

ಸೋಮವಾರದ ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ…

By admin

February 26, 2018

ಇಂದು ಸೋಮವಾರ , 12/03/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…

ಮೇಷ:

ವಿವಾಹಿತರಿಗೆ ಶುಭವಾರ್ತೆ ಇದೆ. ವಾಹನಗಳನ್ನು ಚಲಾಯಿಸುವಾಗ ಎಚ್ಚರವಿರಲಿ.  ಸಾಂಸಾರಿಕವಾಗಿ ಅಭಿವೃದ್ಧಿದಾಯಕ ವಾತಾವರಣ. ಮಕ್ಕಳಿಂದ ಅನಿರೀಕ್ಷಿತ ಸುದ್ದಿ ಸಂತೋಷದ ಕ್ಷಣಗಳನ್ನು ತರುತ್ತದೆ.ದೂರ ಸಂಚಾರದಲ್ಲಿ ಕಾರ್ಯಸಿದ್ಧಿ. ಆರೋಗ್ಯದ ಬಗ್ಗೆ ಜಾಗ್ರತೆ.

ವೃಷಭ :-

ಬಂಧು ಬಳಗದವರ ಪ್ರೀತಿ,ಸೂಕ್ತ ಔಷಧೋಪಚಾರ ನಡೆಸಿ. ಹಣಕಾಸಿನ ಸ್ಥಿತಿ ಸಾಧಾರಣ ಮಟ್ಟದ್ದಾಗಿರುತ್ತದೆ. ಧರ್ಮಪತ್ನಿಗೆ ಆಲಂಕಾರಿಕ ವಸ್ತುಗಳ ಖರೀದಿ ಸಂತಸ ತರಲಿದೆ. ಉದ್ಯೋಗದಲ್ಲಿರುವವರು ಇತ್ತೀಚಿನ ಸಾಧನೆಗಳಿಗಾಗಿ ತಮ್ಮ ಸಹೋದ್ಯೋಗಿಗಳಿಂದ ಮೆಚ್ಚುಗೆ ಹಾಗೂ ಬೆಂಬಲ ಪಡೆಯುತ್ತಾರೆ.ದಿನಾಂತ್ಯ ಶುಭ.

ಮಿಥುನ:

ನಿಮ್ಮ ಮನೋಕಾಮನೆಗಳು ಸಿದ್ಧಿಸುವುದು. ಸಮಾಜದಲ್ಲಿ ಕೀರ್ತಿ ಪ್ರತಿಷ್ಠೆಗಳು ಹೆಚ್ಚುವವು. ಮಗುವಿನ ಅಧ್ಯಯನದ ಬಗ್ಗೆ ಚಿಂತಿಸುವ ಅಗತ್ಯವಿಲ್ಲ.  ವೃತ್ತಿರಂಗದಲ್ಲಿ ಕಾರ್ಯಾನುಸಾಧನೆಯಿಂದ ಸಂತಸ. ವಿದ್ಯಾರ್ಥಿಗಳಿಗೆ ಪ್ರವಾಸಯೋಗವಿದೆ. ವಾಹನ ಸಂಚಾಲಕರಿಗೆ ಜಾಗ್ರತೆ ಅಗತ್ಯವಿದೆ. ಹನುಮಂತನ ದೇವಸ್ಥಾನಕ್ಕೆ ತಪ್ಪದೇ ಹೋಗಿ.

ಕಟಕ :-

ನಿಮ್ಮ ಕೆಲಸವನ್ನು ನಿಷ್ಠೆಯಿಂದ ಮಾಡಿ, ಒಳ್ಳೆಯದೇ ಆಗುತ್ತದೆ.ಆಗಾಗ ಮಾನಸಿಕ ಒತ್ತಡದಿಂದ ಕಾರ್ಯಸಾಧನೆಯಾಗದು. ಆದರೂ ಆರ್ಥಿಕವಾಗಿ ಹಂತ ಹಂತವಾಗಿ ಅಭಿವೃದ್ಧಿಗೋಚರಕ್ಕೆ ಬರುತ್ತದೆ.

 ಸಿಂಹ:

ಮಕ್ಕಳು, ಮೊಮ್ಮಕ್ಕಳಿಂದ ಬರುವ ಸುದ್ದಿಯಿಂದಾಗಿ ಹರ್ಷಭರಿತರಾಗುವಿರಿ. ನಿಮ್ಮ ಮನೆ ವೈದ್ಯರ ಸಲಹೆ ಪಡೆಯಿರಿ. ದೈವಬಲ ಇರುವುದರಿಂದ ಅತಿ ಚಿಂತೆ ಬೇಡ. ಹಣದ ವ್ಯವಹಾರದಲ್ಲಿ ಲೆಕ್ಕಾಚಾರ ತಪ್ಪಾದೀತು. ಕಾಳಜಿ ಇರಬೇಕು. ನಿಮ್ಮ ಕೆಲಸದ ಮೇಲೆ ಗಮನ ನೀಡಿದಲ್ಲಿ- ನೀವು ದುಪ್ಪಟ್ಟು ಕೆಲಸ ಮಾಡಬಹುದು. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.

ಕನ್ಯಾ :-

ನಿಮ್ಮ ಸಕಾರಾತ್ಮಕ ಚಿಂತನೆಗಳಿಗೆ ಬೆಂಬಲ ಸಿಗುವುದು. ಸಂಗಾತಿಯ ಆಯ್ಕೆಗೆ ಇದು ಒಳ್ಳೆಯ ಕಾಲ.ನಿಮಗೆ ಸಹಾಯ ಸಹಕಾರ ನೀಡಿದ ಗುರುಹಿರಿಯರನ್ನುಗೌರವಿಸಿ ಹಣಕಾಸಿನ ಪರಿಸ್ಥಿತಿಯು ಸುಧಾರಿಸುವುದು. ದೇವರ ಅನುಗ್ರಹ ನಿಮಗಿರುತ್ತದೆ. ದೂರ ಸಂಚಾರದಲ್ಲಿ ಕಾರ್ಯಸಿದ್ಧಿ.

ತುಲಾ:

ನಿಮಗೆ ವಿವಿಧ ಮೂಲಗಳಿಂದ ಹಣಕಾಸು ಬರುವುದು. ಹೊಸ ಒಪ್ಪಂದಗಳು ಲಾಭದಾಯಕವೆಂದು ಕಂಡರೂ ಬಯಸಿದ ಲಾಭ ತರುವುದಿಲ್ಲ ದೂರ ಸಂಚಾರದಿಂದ ಆಯಾಸ. ನಿಮ್ಮ ಖ್ಯಾತಿಗೆ ಧಕ್ಕೆ ತರುವವರೊಂದಿಗೆ ಸಂಬಂಧ ಹೊಂದಬೇಡಿ. ಖರ್ಚುವೆಚ್ಚಗಳಿದ್ದರೂ ಧನಾಗಮನದಿಂದ ಅನುಕೂಲ.

ವೃಶ್ಚಿಕ :-

ಬೇರೆಯವರ ಜಗಳವನ್ನು ನಿಲ್ಲಿಸಲು ಹೋಗಿ ನಿಮಗೆ ಅಪಾಯವಾಗುವ ಸಾಧ್ಯತೆ ಇದೆ. ಜಾಗ್ರತರಾಗಿರಿ. ಮೂರನೇ ವ್ಯಕ್ತಿಯ ಹಸ್ತಕ್ಷೇಪ ನೀವು ಮತ್ತು ನಿಮ್ಮ ಪ್ರೀತಿಪಾತ್ರರಲ್ಲಿ ಕಂದಕ ತರಬಹುದು.ನಿಮ್ಮ ಆರೋಗ್ಯದ ಬಗ್ಗೆ ಎಚ್ಚರ ಇರಲಿ.

ಧನಸ್ಸು:

ವ್ಯಾಪಾರ ವ್ಯವಹಾರದಲ್ಲಿ ಯಶಸ್ಸನ್ನು ಪಡೆಯುವಿರಿ. ಯಾವುದೇ ಆಗಲೇ ದಿಢೀರನೇ ಯಶಸ್ಸನ್ನು ತಂದು ಕೊಡುವುದಿಲ್ಲ. ಹಾಗಾಗಿ ನೀವು ನಿರಾಶರಾಗುವುದು ಬೇಡ. ವಿವಾಹ ಪ್ರಸ್ತಾವಗಳು ಯೋಗ್ಯ ವಯಸ್ಕರಿಗೆ ಕಂಕಣಭಾಗ್ಯ ತರುತ್ತವೆ.

ಮಕರ :-

ನಿಮ್ಮನ್ನು ಟೀಕಿಸುವ ಜನರಿಂದ ಮಾನಸಿಕ ಯಾತನೆ ಉಂಟಾಗುವ ಸಂಭವವಿದ್ದು ಮೌನ ತಾಳಿ. ಆರೋಗ್ಯದ ಬಗ್ಗೆ ಸ್ವಲ್ಪ ಗಮನ ನೀಡಬೇಕು. ಆರ್ಥಿಕವಾಗಿ ಪರಿಸ್ತಿತಿ  ಸರಿಹೋದ್ರೂ ಜಾಗ್ರತೆ ಇರಲಿ. ಕಚೇರಿಯಲ್ಲಿ ಅತಿಯಾದ ಸಮಯ ಕಳೆಯುವುದು ಮುಂದೆ ಕುಟುಂಬದಲ್ಲಿ ಸಮಸ್ಯೆಗಳನ್ನು ಉಂಟುಮಾಡಬಹುದು.

ಕುಂಭ:-

ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು. ಹಣಕಾಸಿನ ಹರಿವಿಗೆ ಕಾರಣವಾಗುವುದು. ಸಂಗಾತಿಯ ಆರೋಗ್ಯದ ಕಡೆ ಗಮನ ಹರಿಸಿ. ಹಠಾತ್ ಪ್ರಣಯ ಪ್ರಸಂಗಗಳು ನಿಮ್ಮನ್ನು ಗೊಂದಲಕ್ಕೀಡು ಮಾಡಬಹುದು.ಪತ್ನಿಯ ಸಹಕಾರ ಪ್ರೀತಿ ವಿಶ್ವಾಸದಿಂದ ನೆ‌ಮ್ಮದಿ. ದಿನಾಂತ್ಯದಲ್ಲಿ ಶುಭ.

ಮೀನ :-

ನಿಮ್ಮ ಮಾತಿನ ವೈಖರಿಯಿಂದ ಎಲ್ಲರನ್ನು ಆಕರ್ಷಿಸುವಿರಿ. ಆರ್ಥಿಕವಾಗಿ ಖರ್ಚುವೆಚ್ಚಗಳ ಬಗ್ಗೆ ಜಾಗ್ರತೆ ಇರಲಿ. ಬೇರೆಯವರನ್ನು ನಿಮಗೆ ಬೇಕಾದ ಕೆಲಸಗಳನ್ನು ಮಾಡಲು ಒತ್ತಾಯಿಸಲು ಪ್ರಯತ್ನಿಸಬೇಡಿ.  ಸಾಂಸಾರಿಕವಾಗಿ ನೆಮ್ಮದಿ, ಶಾಂತಿ ಸಮಾಧಾನ ತರಲಿದೆ.ನಿಮ್ಮ ಪ್ರಯಾಣಕ್ಕೆ ಅನುಕೂಲ ಆಗಿದ್ದರೂ,ದುಬಾರಿಯಾಗಲಿದೆ.