ಉಪಯುಕ್ತ ಮಾಹಿತಿ

“ಸೊನ್ನೆ” (ಝೀರೋ) ಕಂಡುಹಿಡಿದದ್ದು ಭಾರತ.ಹಾಗಿದ್ರೆ ಉಳಿದ ನಂಬರಗಳನ್ನು ಕಂಡುಹಿಡಿದಿದ್ದು ಯಾರು ಗೊತ್ತೇ.?ತಿಳಿಯಲು ಈ ಲೇಖನ ಓದಿ ಮರೆಯದೇ ಶೇರ್ ಮಾಡಿ…

By admin

March 31, 2018

ಆರ್ಯಭಟ್ಟ ಕ್ರಿಶ 499 ರಲ್ಲಿ “ಸೊನ್ನೆ” (0)ಕಂಡುಹಿಡಿದ ? ನಂತರ ಬಂದ ಬ್ರಹ್ಮ ಗುಪ್ತ ಇದನ್ನು ಡೆವಲಪ್ ಮಾಡಿ ಈಗಿನ ಸೊನ್ನೆ ರೂಪಕ್ಕೆ ತಂದ?  ಹಾಗಿದ್ದರೆ ಕೇವಲ ಒಂದೂವರೆ ಸಾವಿರ ವರ್ಷದ ಹಿಂದೆ ಬಂದಿದ್ದಾ ಸೊನ್ನೆ ? ಅದರ ಮೊದಲು ಏನಿತ್ತು ? ಉಳಿದ ನಂಬರಗಳು ಯಾರು ಕಂಡುಹಿಡಿದಿದ್ದು ?

ಕ್ರಿಪೂ ಮೂರನೇ ಶತಮಾನದಲ್ಲಿ ಅಂದರೆ 800 ವರ್ಷ ಮೊದಲೇ ಪುಣೆ ಮತ್ತು ಉತ್ತರ ಪ್ರದೇಶದ ಗುಹೆಗಳಲ್ಲಿ ಸೊನ್ನೆ(ಝೀರೋ) ಕಂಡು ಬಂದಿದೆ.

ಇದಕ್ಕೂ ತುಂಬಾ ಮೊದಲು ಅಂದರೆ ಕ್ರಿಪೂ 2000 ರಲ್ಲಿ ಸುಮೇರಿಯನ್ನರು ಮತ್ತು ಬ್ಯಾಬಿಲೋನ್ ನವರೂ ಝೀರೊ ತರ ಉಪಯೋಗಿಸಿದ್ದಾರೆ.

ಆದರೆ ಅದೊಂದು ಅಂಕಿ ಅಂತ ಆಗಿರಲಿಲ್ಲ. ಖಾಲಿ ಜಾಗ ಬಿಡುತ್ತಿದ್ದರು. ಇದರಿಂದ ಗೊಂದಲ ಉಂಟಾಗುತ್ತಿತ್ತು. ಇವರಿಗೆ ಎಡದ ಅಂಕಿ ದೊಡ್ಡದು ಬಲದ ಅಂಕಿ ಚಿಕ್ಕದು ಅಂತ ಪೊಸೀಶನ್ ಸಿಸ್ಟಮ್ ಕೂಡ ಗೊತ್ತಿತ್ತು.

 

 

ಆರ್ಯಭಟ ದೊಡ್ಡ ನಂಬರ ಗಳ ಶಾರ್ಟ್ ಫಾರ್ಮ ಕಂಡು ಹಿಡಿದಿದ್ದ. ಉದಾಹರಣೆ ಗೆ – ಕ್ಯೂಘ್ರ ಅಂದರೆ 4,320,000 ಇದು ಜನಪ್ರಿಯ ಆಗಲಿಲ್ಲ.

ಬ್ರಹ್ಮ ಗುಪ್ತ ನ ನಂತರ ಅರಬ್ ಜನ ನಮ್ಮ ಪುಸ್ತಕ ಗಳನ್ನು ಭಾಷಾಂತರ ಮಾಡಿದರು. ನಮ್ಮ ನಂಬರಗಳನ್ನು ಮತ್ತು ಝೀರೋ ಕಾಪಿ ಮಾಡಿದರು. ನಮಗೆ ಗೌರವ ಕೊಡುವುದಕ್ಕಾಗಿ ಅಲ್ಲಿನ ಪಂಡಿತರು ಇದಕ್ಕೆ – ರಕಮ್ ಅಲ್ ಹಿಂದ್ ಅಂತ ಹೆಸರಿಟ್ಟರು. ಇದನ್ನು ಓದಿದಾಗ ನನಗೆ ಅನ್ನಿಸಿದ್ದು ಹಿಂದ್ ಶಬ್ದ ಆಗಿನಿಂದಲೇ ಇದೆ ಅಂತ.

ಮುಂದೆ ಅರಬ್ ರಿಂದ ಈ ಪದ್ಧತಿ ಎಲ್ಲಾ ಕಡೆಗಳಲ್ಲಿ ಹೋಗಿ ಈಗಿನ ನಂಬರ ಪದ್ದತಿ ಗೆ ಹಿಂದೂ ಅರಬ್ ಪದ್ಧತಿ ಅಂತಲೇ ಕರೆಯುತ್ತಾರೆ.

ನಂಬರ ಲೆಕ್ಕ ಮಾಡುವುದು ಅಂದರೆ ಒಂದು ಎರಡು ಮೂರು ಮಾನವ ಗುಹಾ ವಾಸಿ ಆಗಿದ್ದಾಗಲೇ ಇರುವುದರಿಂದ ಇವನ್ನು ಭಾರತೀಯರೇ ಕಂಡು ಹಿಡಿದರು ಅಂತ ಹೇಳಲಾಗುತ್ತಿಲ್ಲ. ಆದರೂ ಈಗಿನ ನಂಬರ ಪದ್ಧತಿ ಕಂಡು ಹಿಡಿದದ್ದು ಭಾರತವೇ. ಕೇವಲ ಝೀರೋ ಮಾತ್ರ ಅಲ್ಲ. ಒಂದರಿಂದ ಒಂಬತ್ತು ಹೀಗಿತ್ತು ಭಾರತ ಇಲ್ಲವಾದರೆ ಜಗತ್ತಿನ ಆಟವು ಮುಗಿದಿತ್ತು .

ಅನ್ನಲೂ ಬಹುದು. ಇದರ ಮೊದಲು 1000 ಅಂತ ಬರೆಯಲು ಓದಲು ಸುಮಾರು 1000 ಗೆರೆ ಹಾಕುತ್ತಾ ಕೂರುವ ಸ್ಥಿತಿ ಜಗತ್ತಿನ ಕೆಲವು ಕಡೆ ಇತ್ತು. ಹಾಗಂತ ಮಾಯನ್ನರೂ ಕೂಡ ತಮ್ಮದೇ ಆದ ಝೀರೋ ತರದ್ದೇ ಸ್ವಂತವಾಗಿ ಕಂಡುಹಿಡಿದಿದ್ದಾರೆ. ಆದರೆ ಎಡದ ಅಂಕಿ ದೊಡ್ಡದು, ಬಲದ ಅಂಕಿ ಚಿಕ್ಕದು ಅಂತ ಪೊಸಿಶನ್ ಸಿಸ್ಟಮ್ ಗೆ ಹೆಚ್ಚಾಗಿ ಭಾರತವೇ ಮೂಲ. ಅವರೆಲ್ಲರೂ ಕಲ್ಲಿನಲ್ಲಿ ಕೊರೆದು, ನಾವು ತಾಳೆ ಗ್ರಂಥಗಳು ಉಪಯೋಗಿಸಿದ್ದರಿಂದ ಅಧಿಕೃತ ದಾಖಲೆಗಳು ಸಿಗುತ್ತಿಲ್ಲ.

ಎಲ್ಲರಿಗೂ ಮೊದಲು ವೇದ ಕಾಲದಲ್ಲಿ ಒಂದು ಕಲ್ಪ ಅಂದರೆ 4,320,000,000 ವರ್ಷ ಗಳು .

ಸೌರವ್ಯೂಹ ದ ಉದ್ದ 1,871,206,920,000,000 ಯೋಜನಗಳು ಅಂತ ಹೇಳಿದ್ದಾರೆ. ಝೀರೋ ಬಂದಿದ್ದು ಒಂದೂವರೆ ಸಾವಿರ ವರ್ಷದ ಹಿಂದೆ ಅಂದರೆ ವೇದ ಕಾಲದಲ್ಲಿ ಈ ನಂಬರ ಕಲ್ಪಿಸಲು ಸಾಧ್ಯ ಇತ್ತೇ ? ವೇದ ಕಾಲದಲ್ಲಿ” ದಶ, ಶತ, ಸಹಸ್ರ, ಆಯತ, ನಿಯತ, ಪ್ರಯತ, ಅರ್ಬುದ, ನಿರ್ಬುದ, ಸಮುದ್ರ, ಮಧ್ಯ, ಅಂತ, ಪರಾರ್ಥ ” ಹೀಗೆ ಲೆಕ್ಕ ಮಾಡುತ್ತಿದ್ದರಂತೆ. 2 ಆಯತ 6 ಸಹಸ್ರ 4 ಶತ 3 ದಶ 2 = 26432 ಈ ತರ.