ಆರೋಗ್ಯ

ಸೇಬು ಹಣ್ಣು ಪ್ರತಿದಿನ ತಿನ್ನುವುದರಿಂದ ಆಗುವ ಉಪಯೋಗಗಳೇನು ನಿಮಗೆ ಗೋತ್ತಾ..?ತಿಳಿಯಲು ಈ ಲೇಖನ ಓದಿ…

By admin

February 14, 2018

ಆಪಲ್ ಪ್ರತಿದಿನ ತಿನ್ನುತ್ತಿದ್ದರೆ ವೈದ್ಯರಿಂದ ದೂರವಿರಬಹುದು ಎಂಬ ಮಾತಿದೆ. ಹೌದು ಆಪಲ್ ಅಂತಹ ಗುಣಗಳನ್ನ ಹೊಂದಿದೆ. ಆದರೆ ಆಪಲ್ ಬೀಜ ಸಿಪ್ಪೆ ತಿನ್ನುವುದು ಸರಿಯೇ…? ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿರುತ್ತದೆ.ಬೀಜವನ್ನ ನಾವು ಆಪಲ್ ತಿನ್ನುವಾಗ ಗೊತ್ತಾಗದೆ ಒಮ್ಮೊಮ್ಮೆ ತಿಂದುಬಿಡುತ್ತೇವೆ, ಸಿಪ್ಪೆಯನ್ನು ಸಹ ತಿನ್ನುತ್ತೆವೆ, ಸಿಪ್ಪೆಯೊಂದಿಗೆ ಆಪಲ್ ಸೇವಿಸುವುದು ಸಾಮಾನ್ಯ ಆದರೆ ಇನ್ನು ಮುಂದೆ ಇಂತಹ ತಪ್ಪನ್ನ ಅಪ್ಪಿ ತಪ್ಪಿಯೂ ಮಾಡಬೇಡಿ.

* ಆಪಲ್ ಬೀಜ:-

ಆಪಲ್ ಬೀಜ ತಿನ್ನುವುದರಿಂದ ನಿಮ್ಮ ಜೀವಕ್ಕೇ ಕುತ್ತು ಬರಬಹುದು, ಏಕೆಂದರೆ ಇದರಲ್ಲಿ ವಿಷಕಾರಿ ಅಂಶವನ್ನ ಹೊರ ಹಾಕುವ ಶಕ್ತಿ ಇದೆ ಎಂದು ತಜ್ಞರು ತಿಳಿಸಿದ್ದಾರೆ.ಆಪಲ್ ನ ಬೀಜದಲ್ಲಿರುವ ಅಮಿಗ್ ಡಾಲಿನ್ ಎಂಬ ವಿಷಕಾರಿ ಅಂಶ ನಮ್ಮ ಜೀರ್ಣ ಪ್ರಕ್ರಿಯೆಯೊಂದಿಗೆ ಸೇರಿದಾಗ ಸೈನೈಡ್ ಬಿಡುಗಡೆ ಮಾಡುವ ಶಕ್ತಿಯನ್ನ ಹೊಂದಿದೆ. ಈ ಸೈನೈಡ್ ನಮ್ಮ ದೇಹದಲ್ಲಿನ ಆಕ್ಸಿಜನ್ ಪೂರೈಕೆಗೆ ಅಡ್ಡಿಯಾಗಿ ನಮ್ಮ ಜೀವಕ್ಕೆ ಕುತ್ತು ತರುತ್ತದೆ.

* ಆಪಲ್ ಸಿಪ್ಪೆ:-

ಕೆಲವು ತರಕಾರಿಗಳ ಸಿಪ್ಪೆಯಲ್ಲಿ ಆರೋಗ್ಯಕರ ಅಂಶಗಳು ಇವೆ ಎಂಬುದು ಸಾಮಾನ್ಯವಾಗಿ ಎಲ್ಲರಿಗು ತುಳಿದಿರುವಂತದ್ದು. ಹಾಗೆಯೆ ಆಪಲ್ ನ ಸಿಪ್ಪೆಯು ಕೂಡ ನಿಜಕ್ಕೂ ಆರೋಗ್ಯಕ್ಕೆ ಒಳ್ಳೆಯದು. ಆಪಲ್ ಸಾಕಷ್ಟು ನಾರಿನಂಶ, ನೀರಿನಂಶವಿರುವ ಹಣ್ಣು. ಇದು ಅಜೀರ್ಣವಾಗಿದ್ದರೆ ಅತ್ಯುತ್ತಮ ನೈಸರ್ಗಿಕ ಮದ್ದೂ ಹೌದು. ಅಲ್ಲದೆ, ಸಾಕಷ್ಟು ರೋಗ ನಿರೋಧಕ ಶಕ್ತಿಯಿರುವ ಇದನ್ನು ಸೇವಿಸುವುದು ನಿಜಕ್ಕೂ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.

ಇದರ ಪೋಷಕಾಂಶದ ಮೂಲವಿರುವುದು ಸಿಪ್ಪೆಯಲ್ಲಿ ಎಂದರೆ ನೀವು ನಂಬಲೇಬೇಕು. ಸಿಪ್ಪೆ ಸಮೇತ ಆಪಲ್ ತಿನ್ನುವುದರಿಂದ ಚರ್ಮ, ಕೂದಲು ಆರೋಗ್ಯದ ದೃಷ್ಟಿಯಿಂದ ನಿಜಕ್ಕೂ ಒಳ್ಳೆಯದು. ಆದರೆ ಇತ್ತೀಚೆಗೆ ಅದನ್ನು ಸಂರಕ್ಷಿಸಡಲು ಬಳಸುವ ಔಷಧಗಳು ನಮ್ಮ ಆರೋಗ್ಯಕ್ಕೆ ಖಂಡಿತಾ ಒಳ್ಳೆಯದಲ್ಲ. ಅದಕ್ಕಾಗಿ ಆಪಲ್ ತೊಳೆದುಕೊಂಡು, ಸಿಪ್ಪೆಯನ್ನ ತೆಗೆದು ನಂತರ ಚೆನ್ನಾಗಿ ತೊಳೆದುಕೊಂಡು ತಿನ್ನುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.