ದೇಶ-ವಿದೇಶ

ಸೇನೆಯ ಮೇಲೆ ಕಲ್ಲು ತೂರಾಟ, ನಡೆಸಿದ ಯುವಕನಿಗೆ 10 ಲಕ್ಷ ಪರಿಹಾರ..!

By admin

July 12, 2017

ಕಲ್ಲು ತೂರಾಟಗಾರರ ಹಣಿಯಲು, ಕಲ್ಲು ತೂರಾಟಗಾರರ ನಾಯಕನನ್ನು ಸೇನಾ ವಾಹನಕ್ಕೆ ಗುರಾಣಿಯಾಗಿ ಕಟ್ಟಿದ, ಪ್ರಕರಣ ಸಂಭಂದ ಸಂತ್ರಸ್ತ ಯುವಕನಿಗೆ ಜಮ್ಮುಕಾಶ್ಮೀರ ಮಾನವ ಹಕ್ಕುಗಳ ಆಯೋಗ 10 ಲಕ್ಷ ರೂ. ಪರಿಹಾರ ನೀಡುವಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.

 ಮೂಲ

ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ ತನಿಖೆ ನಡೆಸಿದ  ಆಯೋಗದ ಸಮಿತಿ ಸದಸ್ಯರು, ಮನುಷ್ಯರಾಗಿ ಇಂತಹ ಹೀನ ಕೃತ್ಯಗಳನ್ನು ಸಹಿಸಲಸಾಧ್ಯ ಎಂದು ಆಯೋಗ ಸದಸ್ಯರು ಹೇಳಿದ್ದಾರೆ. ಸಂತ್ರಸ್ತ ಯುವಕ ಫಾರೂಖ್ ಅಹ್ಮದ್ ದಾರ್‍ಗೆ ಮುಂದಿನ 6 ವಾರದ ಒಳಗಡೆ 10 ಲಕ್ಷ ರೂ. ಪರಿಹಾರ ನೀಡುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.

ದೇಶದಲ್ಲಿ ಶಾಂತಿ ಸುವ್ಯವಸ್ಥೆ ರಕ್ಷಣೆಗೆ ಹಲವು ಕಾನೂನುಗಳಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲೂ ಇಂತಹ ಕೃತ್ಯಗಳಿಗೆ ಕಾನೂನು ನೆರವು ನಾಗರಿಕ  ಸಮಾಜದಲ್ಲಿ ಆರೋಪಿಯನ್ನು ಹೀಗೆ ಹೀನಾಯವಾಗಿ ನಡೆಸಿಕೊಳ್ಳುವುದು ಸರಿಯಲ್ಲ ಎಂದು ಮಾನವ ಹಕ್ಕು ಆಯೋಗ ಹೇಳಿದೆ.

ಈ ಪ್ರಕರಣದ ನಡೆದ ಬಳಿಕ ಭಾರತೀಯ ಸೇನೆ ಮಾನವ ಗುರಾಣಿಯಾಗಿ ಯುವಕನನ್ನು ಬಳಸಿದ್ದಕ್ಕೆ, ಲೀತುಲ್ ಗೊಗೋಯ್ ಅವರಿಗೆ ಪ್ರಶಂಸಾ ಪತ್ರ ನೀಡಿ ಗೌರವಿಸಿತ್ತು. ಈ ಸುದ್ದಿ ಚರ್ಚೆಯಾಗುತ್ತಿದ್ದಂತೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ನಾಗರಿಕರ ಜೀವ ರಕ್ಷಿಸಲು ನಾನು ಈ ಕೆಲಸ ಮಾಡಬೇಕಾಯಿತು ಎಂದು ಹೇಳಿದ್ದರು.

ಏನಿದು ಪ್ರಕರಣ ?

ಕಳೆದ ಏಪ್ರಿಲ್’ನಲ್ಲಿ ಶ್ರೀನಗರ ಲೋಕಸಭೆಯ ಉಪಚುನಾವಣೆ ನಡೆದಿದ್ದು,ಈ ಚುನಾವಣೆಯನ್ನು ಕಾಶ್ಮೀರ ಪ್ರತ್ಯೇಕವಾದಿಗಳು ವಿರೋಧಿಸಿದ್ದರು. ಚುನಾವಣೆಗೆ ನಿಯೋಜನೆಗೊಂಡಿದ್ದ ಸೇನಾ ಸಿಬ್ಬಂದಿಯನ್ನು ಪ್ರತಿಭಟನಾಕಾರರು ಸುತ್ತುವರೆದು ದಾಳಿ ನಡೆಸುತ್ತಿದ್ದರು. ಆಗ  ಕಾಶ್ಮೀರದಲ್ಲಿ ಭುಗಿಲೆದ್ದಿದ್ದ ವ್ಯಾಪಕ ಹಿಂಸಾಚಾರ ಮತ್ತು ಕಲ್ಲು ತೂರಾಟ ನಿಗ್ರಹಕ್ಕಾಗಿ ಸೇನಾ ಯೋಧ ಮೇಜರ್ ನಿತಿನ್ ಗಗೋಯ್ ಅವರು, ಕಲ್ಲು ತೂರಾಟಗಾರರ ನಾಯಕ ರೂಕ್ ಅಹ್ಮದ್ ದಾರ್ ನನ್ನು  ಸೇನಾವಾಹನಕ್ಕೆ ಕಟ್ಟಿ ಮಾನವ ಗುರಾಣಿಯಾಗಿ ಬಳಕೆ ಮಾಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು.

ಈ ಕುರಿತು ಸೇನೆ ತನಿಖೆಗೆ ಆದೇಶಿಸಿದ್ದು, ನಿತಿನ್ ಗಗೋಯ್ಅ ವರ ವಿರುದ್ಧ ಪೊಲೀಸರು ಎಫ್‍ಐಆರ್ ಸಹ ದಾಖಲಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ್ದ ಸೇನಾ ಕೋರ್ಟ್ ಕ್ಲೀನ್ ಚಿಟ್ ನೀಡಿ ನಿತಿನ್ ಗಗೋಯ್ ಅವರನ್ನು ಶ್ಲಾಘಿಸಿತ್ತು.

ಇದರ ಬಗ್ಗೆ ಮಾತನಾಡಿದ್ದ ನಿತಿನ್ ಗಗೋಯ್’ರವರು, ಕಲ್ಲು ತೂರಾಟಗಾರರು ಪೊಲೀಸ್ ಠಾಣೆಗೆ ಬೆಂಕಿ ಹಚ್ಚಲು ಯತ್ನಿಸುತ್ತಿದ್ದರು. ಆ ಸಂದರ್ಭದಲ್ಲಿ ಅಲ್ಲಿ ಮಕ್ಕಳು, ಮಹಿಳೆಯರೂ ಇದ್ದರು. ನಾನು ಧ್ವನಿವರ್ಧಕದಲ್ಲಿ ಎಚ್ಚರಿಕೆ ಕೊಟ್ಟಿದ್ದರೂ ಪ್ರತಿಭಟನೆಕಾರರು ಮಣಿಯಲಿಲ್ಲ. ಹೀಗಾಗಿ ಅಲ್ಲಿದ್ದ ಚುನಾವಣಾ ಅಧಿಕಾರಿಗಳನ್ನು, ಜನರನ್ನು, ಪೊಲೀಸರನ್ನು ರಕ್ಷಿಸಲು ನಾನು ಆತನನ್ನು ಸೇನಾ ಜೀಪಿಗೆ ಕಟ್ಟಿದ್ದೆ. ಒಂದು ವೇಳೆ ನಾವು ಗೋಲಿಬಾರ್ ನಡೆಸಲು ಆದೇಶಿಸಿದ್ದರೆ ಅಲ್ಲಿನ ಹೆಚ್ಚು ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದರು ಎಂದು ನಿತಿನ್ ಗಗೋಯ್’ರವರು ಅವರು ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದರು.