Cinema

ಸೂಪರ್​ಸ್ಟಾರ್​ ರಜನೀಕಾಂತ್​ ಆಗಾಗ ಹಿಮಾಲಯಕ್ಕೆ ಹೋಗಿ ಬರುತ್ತಿರುತ್ತಾರೆ ಏಕೆ ಗೊತ್ತಾ..?ತಿಳಿಯಲು ಈ ಲೇಖನ ಓದಿ..

By admin

March 13, 2018

ಸೂಪರ್​ಸ್ಟಾರ್​ ರಜನೀಕಾಂತ್​ ಆಗಾಗ ಹಿಮಾಲಯಕ್ಕೆ ಹೋಗಿ ಧ್ಯಾನ ಮಾಡಿ ಬರುತ್ತಾರೆ. ವಿಶೇಷವಾಗಿ ತಮ್ಮ ಸಿನಿಮಾಗಳು ಬಿಡುಗಡೆ ಆಗುವ ಮುಂಚೆ ಹಾಗೂ ತಮ್ಮ ಜೀವನದಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ  ಮುಂಚೆ  ರಜನಿ ಹಿಮಾಲಯಕ್ಕೆ ಭೇಟಿ ಕೊಡುತ್ತಾರೆ. ಕೆಲ ದಿನಗಳ ಹಿಂದೆ ಸ್ವತಃ  ರಜನಿ ಅವರೇ  ಹಿಮಾಲಯಕ್ಕೆ  ಹೋಗುವುದಾಗಿ ತಿಳಿಸಿದ್ದರು.

ಸದ್ಯ ರಜನಿ ಹಿಮಾಲಯಕ್ಕೆ ಭೇಟಿ ಕೊಡುತ್ತಾರೆ.ಕೆಲ ದಿನಗಳ ಹಿಂದೆ ರಜನೀಕಾಂತ್​ ಹಿಮಾಲಯಕ್ಕೆ ಹೋಗುವುದಾಗಿ ತಿಳಿಸಿದ್ದು  ಸದ್ಯ ರಜನೀ ಹಿಮಾಲಯದಲ್ಲಿ  ತಮ್ಮ  ಗುರುಗಳನ್ನ ಭೇಟಿ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ರಜನಿ ಯಾವ ಕಾರಣಕ್ಕೆ ಭೇಟಿ ನೀಡುತ್ತಿದ್ದಾರೆ  ಎನ್ನುವುದಕ್ಕೆ ಉತ್ತರ ಸಿಕ್ಕಿದೆ.

ರಜನೀಕಾಂತ್​ ಈ ಹಿಂದೆ ತಮ್ಮ ಚಿತ್ರಗಳು ಬಿಡುಗಡೆಯಾಗುವ ಮುನ್ನ, ಹಾಗೂ ತಮ್ಮ ರಾಜಕೀಯ  ವಿಚಾರಗಳು ಮತ್ತು ಮತ್ತಿತರ ಜೀವನ ನಿರ್ಧಾರಗಳನ್ನು  ತೆಗೆದುಕೊಳ್ಳುವ ಮುನ್ನ ಅಲ್ಲಿಗೆ ಹೋಗಿ ತಮ್ಮ ಗುರುಗಳ ದರ್ಶನ ಪಡೆದುಕೊಂಡು ಬರುತ್ತಲೇ ಇರುತ್ಥಾರೆ.  ಆದರೆ ಈ ಬಾರಿ ಅವರು ಹೋಗುವ ಮುನ್ನ ಎಲ್ಲಿಗೆ ಹೋಗುತ್ತಿದ್ದಾರೆ ಎಂದು ಯಾರಿಗೂ ತಿಳಿದಿರಲಿಲ್ಲ. ಆದರೆ ಅವರು ಅಲ್ಲಿಗೆ ಹೋದಮೇಲೆ ಅವರು ಅಲ್ಲಿರುವುದಾಗಿ ತಿಳಿಸಿದ್ದಾರೆ.

ಭಾರತೀಯ ಯೋಗ ಸತ್ಸಂಗ ಸೊಸೈಟಿಯ ಶತಮಾನೋತ್ಸ ಕಾರ್ಯಕ್ರಮದಲ್ಲಿ ರಜನಿ ಭಾಗಿ ಆಗಲಿದ್ದಾರೆ ಎನ್ನುವ ಸುದ್ದಿ ಇತ್ತು. ಅಲ್ಲದೇ ಹಿಮಾಲಯದ ಪ್ರವಾಸದ ಹಿಂದೆ  ರಜನೀ ರಹಸ್ಯ ಏನು ಎಂದು ಎಲ್ಲರಿಗೂ ಕುತೂಹಲ ಕೆರಳಿಸಿತ್ತು. ಅವರ ಸಿನಿಮಾಗಳು ಬಿಡುಗಡೆಯಾಗುವ ಹಂತದಲ್ಲಿವೆ. ಅವರ ಕಾಲಾ ಮತ್ತು 2.0 ಸಿನಿಮಾಗಳು ರಿಲೀಸ್​ ಆಗುವುದಕ್ಕೆ ಕ್ಷಣಗಣನೇ ಆರಂಭವಾಗುತ್ತಿದೆ.ಹೀಗಾಗಿ ಹಿಮಾಲಯಕ್ಕೆ ಹೋಗಿ ಬರುತ್ತಿರುತ್ತಾರೆ.