ವಿಸ್ಮಯ ಜಗತ್ತು

ಸುಳ್ಳು ಸುದ್ದಿ ನಂಬಿ ಮಾಂಗಲ್ಯ ಸರದಲ್ಲಿನ ಹವಳವನ್ನು ಒಡೆದು ಬಿಸಾಡಿದ ಮಹಿಳೆಯರು!ಆ ಸುಳ್ಳು ವದಂತಿ ಏನು ಗೊತ್ತಾ?ಈ ಲೇಖನಿ ಓದಿ…

By admin

July 05, 2017

ಜನ ವದಂತಿಗಳನ್ನು ಎಷ್ಟು ನಂಬುತ್ತಾರೆಂದರೆ, ಅದು ನಿಜವೋ ಅಥವಾ ಸುಳ್ಳೋ ಎನ್ನುವುದನ್ನು ಪರಾಮರ್ಶಿಸುವುದಿಲ್ಲ.ಇದಕ್ಕೆ ನಿದರ್ಶನವಾಗಿ ಮಹಿಳೆಯರು ತಮ್ಮ ಮಾಂಗಲ್ಯ ಸರದಲ್ಲಿನ ಹವಳವನ್ನು ರಾತ್ರೋರಾತ್ರಿ ಒಡೆದು ಹಾಕಿರೋ ಘಟನೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ನಡೆದಿದೆ. ಅದೇನೋ ಹೇಳ್ತಾರೆ ಅಲ್ವಾ, ಒಂದು ಕುರಿ ಹಳ್ಳಕ್ಕೆ ಬಿದ್ರೆ, ಎಲ್ಲಾ ಕುರಿ ಹಳ್ಳಕ್ಕೆ ಬೀಳುತ್ತೆ ಅಂತಾ, ಹಾಗಾಗಿದೆ ಇವರ ಪರಿಸ್ತಿತಿ.

ವದಂತಿಯಾದರೂ ಏನು ಮತ್ತು ನಡೆದದ್ದು ಎಲ್ಲಿ? 

ಬಾಯಿಯಿಂದ ಬಾಯಿಗೆ ಹಬ್ಬಿದ ಸುಳ್ಳು ಸುದ್ದಿಯಿಂದಾಗಿ ಆತಂಕಗೊಂಡ ಮಹಿಳೆಯರು ರಾತ್ರಿಯೆಲ್ಲ ನಿದ್ದೆಗೆಟ್ಟಿದ್ದು ಎಲ್ಲಿ ತಮ್ಮ ಗಂಡಂದಿರ ಪ್ರಾಣಕ್ಕೆ ಕಂಟಕ ಬರಬಹುದು ಎಂಬ ಭಯದಿಂದ ಮಾಂಗಲ್ಯ ಸರದಲ್ಲಿ ಇದ್ದ ಕೆಂಪು ಹವಳವನ್ನು ತೆಗೆದು ಕುಟ್ಟಿ ಪುಡಿ ಮಾಡಿದ್ದಾರೆ.

ಮಂಗಳವಾರ ತಡರಾತ್ರಿ ಕೊಪ್ಪಳ ಜಿಲ್ಲೆಯಾದ್ಯಂತ ಹರಡಿದ ಈ ಸುಳ್ಳು ವದಂತಿಗೆ ಹೆದರಿದ ಮಹಿಳೆಯರು ಮಾಂಗಲ್ಯದಲ್ಲಿನ ಕೆಂಪು ಮುತ್ತು(ಹವಳ) ಒಡೆದು ಹಾಕಿದ್ದಾರೆ. ಕಿಡಗೇಡಿಗಳು ಹಬ್ಬಿಸಿದ ಸುಳ್ಳು ವದಂತಿಗೆ ಗಂಗಾವತಿ, ಕುಷ್ಟಗಿ, ಯಲಬುರ್ಗಾ ತಾಲೂಕಿನ ಬಹುತೇಕ ಗ್ರಾಮದ ಮಹಿಳೆಯರು ಮಾಂಗಲ್ಯ ಸರದಲ್ಲಿನ ಹವಳ ಒಡೆದಿದ್ದಾರೆ. ಅಲ್ದೆ ಈ ಸುಳ್ಳು ವದಂತಿ ಬಗ್ಗೆ ರಾತ್ರಿಯಿಡೀ ಮಹಿಳೆಯರು ಫೋನಾಯಿಸಿ ತಮ್ಮ ಸಂಬಂಧಿಕರಿಗೂ ಹೇಳಿದ್ದಾರೆ. ಇದ್ರಿಂದ ಸುಳ್ಳು ವದಂತಿ ತುಂಬಾ ಬೇಗ ಎಲ್ಲೆಡೆ ಹಬ್ಬಿದೆ.

ಕೊಪ್ಪಳವಲ್ಲದೆ ಬಳ್ಳಾರಿ ಜಿಲ್ಲೆಯಲ್ಲೂ ಕೂಡ ಮಹಿಳೆಯರು ತಾಳಿಯಲ್ಲಿರುವ ಮಣಿಯನ್ನು ಕುಟ್ಟಿ ಹಾಕಿದ್ದಾರೆ. ಬಳ್ಳಾರಿ,ಸುತ್ತಮುತ್ತ ತಾಲೂ ಕುಗಳಲ್ಲಿ ಸಹ ಹವಳವನ್ನು ಕಲ್ಲಿನಿಂದ ಕುಟ್ಟಿದ್ದಾರೆ. ಇವರು ಸುಲ್ಲುವದಂತಿ ನಮ್ಬಿದ್ದಲ್ಲದೆ ತಮ್ಮ  ಸಂಬಂಧಿಕರಿಗೂ ಕರೆ ಮಾಡಿ ಮಾಹಿತಿ ನೀಡಿದ್ದಾರೆ.

ಇಷ್ಟಕ್ಕೆ ನಿಲ್ಲದ ಈ ಸುಳ್ಳು ವದಂತಿ, ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ತಾಲೂಕು ಹಾಗೂ ದಾವಣಗೆರೆ ತಾಲೂಕಿನ ಕೆಲ ಹಳ್ಳಿಗಳಲ್ಲೂ ಹಾಗೂ ಚಿತ್ರದುರ್ಗದಲ್ಲಿಯೂ ಸಹ ಬಾಯಿಯಿಂದ ಬಾಯಿಗೆ ಹಬ್ಬಿದ ಸುಳ್ಳು ಸುದ್ದಿಯಿಂದಾಗಿ ಆತಂಕಗೊಂಡ ಮಹಿಳೆಯರು ರಾತ್ರಿಯೆಲ್ಲ ನಿದ್ದೆಗೆಟ್ಟಿದ್ದು ಎಲ್ಲಿ ತಮ್ಮ ಗಂಡಂದಿರ ಪ್ರಾಣಕ್ಕೆ ಕಂಟಕ ಬರಬಹುದು ಎಂಬ ಭಯದಿಂದ ಮಾಂಗಲ್ಯ ಸರದಲ್ಲಿ ಇದ್ದ ಕೆಂಪು ಹವಳವನ್ನು ತೆಗೆದು ಕುಟ್ಟಿ ಪುಡಿ ಮಾಡಿದ್ದಾರೆ.