ಸುಟ್ಟಗಾಯಗಳೇ ಇಷ್ಟು, ಗಾಯ ವಾಸಿಯಾದರೂ ಕಲೆ ಹೋಗುವುದಿಲ್ಲ.. ಕಲೆಗಳಿಂದಾಗಿ ಚರ್ಮದ ಕಾಂತಿ ಕುಗ್ಗಿದಂತಾಗುತ್ತದೆ. ಈ ಕಲೆಗಳಿಂದಾಗಿ ನಮ್ಮ ಸೌಂದರ್ಯವೇ ಹಾಳಾಗುತ್ತದೆ. ಇಂತಹ ಮಾಸದ ಕಲೆಗಳನ್ನ ಸುಲಭವಾಗಿ ನಿವಾರಿಸಬಹುದು.
ಸುಟ್ಟ ಕಲೆಗಳನ್ನ ಹೋಗಲಾಡಿಸಲು ಇಲ್ಲಿವೆ ಸಿಂಪಲ್ ಮನೆ ಮದ್ದುಗಳು.
* ಲೋಳೆರಸ ಇದು ಎಲ್ಲಾ ರೀತಿಯ ಚರ್ಮ ರೋಗಗಳಿಗೂ ಪರಿಹಾರ ನೀಡುತ್ತೆ ಎಂದರೆ ತಪ್ಪಾಗಲಾರದು. ಆದ್ದರಿಂದ ಸುಟ್ಟ ಗಾಯದ ಮೇಲೆ ಲೋಳೆರಸ ಲೇಪಿಸುವುದರಿಂದ ಉರಿ ಕಡಿಮೆಗೊಳಿಸಿ. ಕಲೆಯು ಉಳಿಯದಂತೆ ಮಾಡುತ್ತದೆ.
* ಪುದೀನಾ ಎಲೆಯನ್ನು ರುಬ್ಬಿ ತೆಳುವಾದ ಹತ್ತಿ ಬಟ್ಟೆಗೆ ಹಾಕಿ ಸುಟ್ಟ ಗಾಯದ ಮೇಲೆ ಹಿಂಡಬೇಕು. ಸುಟ್ಟುಕೊಂಡ ತಕ್ಷಣವೇ ಇದನ್ನು ಪಾಲಿಸಿದರೆ ಉರಿಯೂ ಕಡಿಮೆಯಾಗುವುದಲ್ಲದೆ ಬೊಬ್ಬೆ ಏಳುವುದೂ ನಿಲ್ಲುತ್ತದೆ. ಹಾಗೂ ಸುಟ್ಟ ಗಾಯದ ಕಲೆಯೂ ಉಳಿಯುವುದಿಲ್ಲ.
* ಸುಟ್ಟ ಗಾಯಕ್ಕೆ ಕೊಬ್ಬರಿ ಎಣ್ಣೆ ಲೇಪಿಸುವುದು ಹಿಂದಿನ ಕಾಲದಿಂದಲೂ ನಡೆದುಬಂದಿದೆ. ದಿನಕ್ಕೆ ನಾಲ್ಕು ಬಾರಿಯಾದರೂ ಸುಟ್ಟ ಗಾಯಕ್ಕೆ ಎಣ್ಣೆ ಹಚ್ಚುತ್ತಾ ಬಂದರೆ ಕೆಲವೇ ವಾರಗಳಲ್ಲಿ ಚರ್ಮದ ಮೇಲೆ ಆಗಿರುವ ಸುಟ್ಟ ಗಾಯದ ಕಲೆಗಳು ಹೋಗಿ ಚರ್ಮ ಮೊದಲಿನ ಬಣ್ಣ ಪಡೆಯುತ್ತದೆ.
* ತರಕಾರಿಯ ರಸವನ್ನು ಸುಟ್ಟ ಗಾಯದ ಮೇಲೆ ಲೇಪಿಸಿದರೆ ಅಥವಾ ಹಸಿರು ತರಕಾರಿಗಳ ಸೇವನೆಯಿಂದಲೂ ಸುಟ್ಟ ಗಾಯದ ಕಲೆ ಇಲ್ಲದಂತೆ ಮಾಡಬಹುದು.
* ಸುಟ್ಟು ಕೊಂಡ ಕೆಲವೇ ಕ್ಷಣಗಳಲ್ಲಿ ಅಡುಗೆ ಸೋಡವನ್ನು ಹಚ್ಚುವುದರಿಂದ ಬೊಬ್ಬೆ ಇಲ್ಲದಂತಾಗಿ ಗಾಯ ಬೇಗ ವಾಸಿಯಾಗುತ್ತದೆ.
* ಸುಟ್ಟ ಕೂಡಲೇ ಸುತ್ತಿರುವ ಜಾಗಕ್ಕೆ ಟೂತ್ ಪಾಸ್ಟ್ ಹಚ್ಚುವುದರಿಂದ ಬೊಬ್ಬೆ ಬರುವುದನ್ನ ತಡೆಯಬಹುದು.