ಶುಕ್ರವಾರದ ಹೊಸ ಸಿನಿಮಾಗಳ ನೀರಿಕ್ಷೆಯಲ್ಲಿರುವ ಸಿನಿ ಪ್ರೇಕ್ಷಕರಿಗೆ ಶಾಕಿಂಗ್ ನ್ಯೂಸ್. ಈ ದಿನ ಯಾರೂ ಚಿತ್ರಮಂದಿರಗಳ ಹತ್ತಿರ ಸುಳಿಯಬೇಡಿ.ಯಾಕಂದ್ರೆಇವತ್ತು ರಾಜ್ಯಾದ್ಯಂತ ಚಿತ್ರಮಂದಿರಗಳು ಬಂದ್ ಆಗಿವೆ.ಈ ದಿನ ಯಾವುದೇ ಹೊಸ ಸಿನಿಮಾ ಸೇರಿದಂತೆ ಯಾವುದೇ ಚಿತ್ರ ಪ್ರದರ್ಶನವಿರುವುದಿಲ್ಲ.
ಸಂಸ್ಥೆಗಳ ಶುಲ್ಕ ಹೆಚ್ಚಳ ಸಂಬಂಧ ಯುಎಫ್‍ಓ, ಕ್ಯೂಬ್ ನಡುವಿನ ಬಿಕ್ಕಟ್ಟಿನ ಕುರಿತಾಗಿ ದಕ್ಷಿಣ ಭಾರತ ವಾಣಿಜ್ಯ ಮಂಡಳಿ ಈ ತೀರ್ಮಾನಕ್ಕೆ ಬಂದಿದ್ದು ಇಂದು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಸಾಂಕೇತಿಕವಾಗಿ ಪ್ರದರ್ಶನ ರದ್ಧುಗೊಳಿಸಿದೆ.
ಶನಿವಾರದಿಂದ ಮಾಮೂಲಿಯಂತೆ ಹಳೆಯ ಸಿನಿಮಾಗಳ ಪ್ರದರ್ಶನ ಶುರುವಾಗಲಿದೆ. ಈ ನಡುವೆ ಯುಎಫ್‍ಓ ಕ್ಯೂಬ್ ಸಂಧಾನಕ್ಕೆ ಬರದಿದ್ದ ಪಕ್ಷದಲ್ಲಿ ದಕ್ಷಿಣ ಭಾರತೀಯ ಚಿತ್ರೋದ್ಯಮ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲು ತೀರ್ಮಾನಿಸಿದೆ. ಈ ವಿಚಾರವಾಗಿ ನಿರ್ಮಾಪಕರ ವಲಯ, ಪ್ರದರ್ಶಕರ ವಲಯ ಮತ್ತು ವಿತರಕರ ವಲಯ ಬೆಂಬಲ ನೀಡಿದೆ..