ಜೆಡಿಎಸ್ ನ ರೆಬೆಲ್ ಶಾಸಕರಲ್ಲಿ ಗುರುತಿಸಿಕೊಂಡಿರುವ ಮಾಗಡಿ ಶಾಸಕ ಬಾಲಕೃಷ್ಣ ರವರು ಎಂದು ಮಾಜಿ ಪ್ರಧಾನಿ ದೇವೇಗೌಡ್ರು ಮತ್ತು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಾಲಕೃಷ್ಣ ರವರನ್ನು ಕುಮಾರಸ್ವಾಮಿ ರವರು ಪಕ್ಷದ್ರೋಹಿ ಎಂದು ಎಚ್ಡಿಕೆ ಆರೋಪವಾರಿಸಿದರು…
ಈ ಆರೋಪಕ್ಕೆ ಉತ್ತರಿಸಿದ ಬಾಲಕೃಷ್ಣ ರವರು ಜೆಡಿಎಸ್ನಿಂದ ಹೊರಬಂದಿರೋದು ಎಲ್ಲರೂ ಜನತಾ ಪರಿವಾರದವರು. ಅವರನ್ನೆಲ್ಲಾ ಸರಿಯಾಗಿ ಗೌರವದಿಂದ ನಡೆಸಿಕೊಂಡಿದಿದ್ದರೆ ಯಾರೂ ಪಕ್ಷ ಬಿಡುತ್ತಿರಲಿಲ್ಲ, ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಮತ್ತು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಬಾಲಕೃಷ್ಣ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಇನ್ನು ಜೆಡಿಎಸ್ ಪಕ್ಷದ ಹಳೆ ವಿಚಾರದ ಬಗ್ಗೆ ಮಾತನಾಡಿದ ಇವರು, ಸದೃಢವಾಗಿರುವವರನ್ನು, ಪಕ್ಷ ಕಟ್ಟಿದವರನ್ನು, ಹಾಗೂ ಹೆಚ್ಚು ಮಾತನಾಡುವವರನ್ನು ಹಂತಹಂತವಾಗಿ ಹೊರಗೆ ಹಾಕಿದ್ರು. ಜನತಾದಳದ ನಾಯಕರನ್ನು ಒಟ್ಟಿಗೆ ಇಟ್ಟುಕೊಂಡಿದಿದ್ರೆ ಬೇರೆಯವರನ್ನು ಆಶ್ರಯಿಸಿ ಮುಖ್ಯಮಂತ್ರಿಯಾಗುವ ಸನ್ನಿವೇಶ ಬರುತ್ತಿರಲಿಲ್ಲ. ಸಿದ್ದರಾಮಯ್ಯ, ದೇಶಪಾಂಡೆಯಂಥ ನಾಯಕರನ್ನು ಸರಿಯಾಗಿ ನಡೆಸಿಕೊಂಡಿದ್ರೆ ಇಷ್ಟು ಹೊತ್ತಿಗಾಗಲೇ 2-3 ಬಾರಿ ಜನತಾ ದಳ ಅಧಿಕಾರಕ್ಕೆ ಬರುತ್ತಿತ್ತು. ಈ ಬಗ್ಗೆ ಕುಮಾರಸ್ವಾಮಿ ಮತ್ತು ದೇವೇಗೌಡರು ಅವರೇ ಕುಳಿತುಕೊಂಡು ಆಲೋಚನೆ ಮಾಡಲಿ ಎಂದು ತಮ್ಮ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಇನ್ನು ಬಿಜೆಪಿ ಅವರ ಪರಿವರ್ತನಾ ಬಗ್ಗೆ ಮಾತನಾಡಿದ ಇವರು, ಮಾಗಡಿಯಲ್ಲಿ ನಡೆದ ಬಿಜೆಪಿ ಪರಿವರ್ತನಾ ರ್ಯಾಲಿ ಏನೂ ವಿಶೇಷತೆ ಇಲ್ಲ. ಇಲ್ಲಿ ಬಿಜೆಪಿಗೆ ಜನಬೆಂಬಲ ಇಲ್ಲ ಎಂದು ಹೇಳಿದ್ದಾರೆ.ಹೆಚ್ಚು ಎಂದರೆ ಬೆರಳಿಣಿಕೆಯ ಮತ ಬರಬಹುದು. ಆದರೆ, ಬಿಜೆಪಿ ಗೆಲ್ಲಲು ಅಸಾಧ್ಯ ಎಂದು ಶಾಸಕ ಬಾಲಕೃಷ್ಣ ತಿಳಿಸಿದ್ದಾರೆ. ಸಿ ಪಿ ಯೋಗೇಶ್ವರ್ ರವರು ಚುನಾವಣೆಯಲ್ಲಿ ಸ್ಪರ್ದಿಸಬಹುದು ಆದರೆ ಗೆಲ್ಲುವುದು ಅಸಾಧ್ಯದ ಮಾತು ಎಂದು ತಿಳಿಸಿದರು. ಇನ್ನು ಸದ್ಯದಲ್ಲೇ ನಾನು ಹಾಗು ಉಳಿದ ರೆಬೆಲ್ ಶಾಸಕರು ಎಲ್ಲರು ಕೂಡ, ಬಜೆಟ್ ಅಧಿವೇಶನ ಮುಗಿದ ಬಳಿಕ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾಗಲಿದ್ದೇವೆ ಎಂದು ತಿಳಿಸಿದರು.
ಸಿದ್ದರಾಮಯ್ಯ ರವರು ಪಕ್ಷದಿಂದ ಹೊರಬಂದಿದ್ದು ಇದೇ ಕಾರಣಕ್ಕೆ…
ಈಗೆ ಕುಮಾರಸ್ವಾಮಿ ಹಾಗು ದೇವೇಗೌಡ ವಿರುದ್ಧ ಆಕ್ರೋಶವ್ಯಕ್ತ ಪಡಿಸಿರುವ ಬಾಲಕೃಷ್ಣ ರವರು, ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಕೂಡ ಇದೇ ಕಾರಣಕ್ಕೆ, ನಮ್ಮಂತೆಯೇ ಪಕ್ಷದಿಂದ ಹೊರಬಂದಿರುವುದು ಎಂದು ತಿಳಿಸಿದ್ದಾರೆ. ಇಂದು ಏನಾದರು ಅವರು ಪಕ್ಷದಲ್ಲಿದ್ದಿದ್ದರೆ, ಇಂದು ಪಕ್ಷ ಇನ್ನು ಬೆಳೆಯುತಿತ್ತು. ಮೊದಲು ನಾಯಕರನ್ನು ಹೇಗೆ ನಡೆಸುಕೊಳ್ಳಬೇಕೆಂದು ಕುಮಾರಸ್ವಾಮಿ ಹಾಗು ದೇವೇಗೌಡ್ರು ಅರಿಯಲಿ ಎಂದು ತಮ್ಮೆಲ್ಲ ಆಕ್ರೋಶವನ್ನು ವ್ಯಥಾ ಪಡಿಸಿದ್ದಾರೆ.