ಒಂದಿಲ್ಲೊಂದು ಸುದ್ದಿಯಲ್ಲಿರುವ ಬಿಗ್ ಬಾಸ್ ಖ್ಯಾತಿಯ ಒಳ್ಳೆ ಹುಡುಗ ಪ್ರಥಮ್, ಈಗ ತಮ್ಮ ಹೊಸ ಚಿತ್ರಕ್ಕೆ ಕ್ಲ್ಯಾಪ್ ಮಾಡುವಂತೆ ನಮ್ಮ ರಾಜ್ಯದ ದಂಡನಾಯಕರನ್ನು ಭೇಟಿ ಮಾಡಿ ಆಹ್ವಾನಿಸಿದ್ದಾರೆ.
ಹೌದು, ಯಾರು ಆ ದಂಡನಾಯಕರು ಅಂತೀರಾ!
ಅವರೇ ನಮ್ಮ ರಾಜ್ಯದ ಸಿಎಂ ಸಿದ್ದರಾಮಯ್ಯ ನವರು. ವಿಧಾನಸೌಧದ ಸಿಎಂ ಕೊಠಡಿಗೆ ತೆರಳಿದ ಪ್ರಥಮ್ ಅವರು ತಮ್ಮ ಮುಂದಿನ ಚಿತ್ರ ‘ಎಂಎಲ್‍ಎ-ಮದರ್ ಪ್ರಾಮಿಸ್ ಲೆಕ್ಕಕ್ಕೆ ಸಿಗದ ಆಸಾಮಿ’ ಚಿತ್ರಕ್ಕೆ ಕ್ಲ್ಯಾಪ್ ಮಾಡಲು ಸಿಎಂ ಅವರಿಗೆ ಆಹ್ವಾನಿಸಿದ್ದಾರೆ.
ಈ ಸಿನಿಮಾದಲ್ಲಿ ಪ್ರಥಮ್, ಎಂಎಲ್‍ಎ ಪಾತ್ರ ಮಾಡುತ್ತಿದ್ದಾರೆ. ಶುಕ್ರವಾರ ಮೂಹೂರ್ತ ಇದೆ. ಹೀಗಾಗಿ ರಾಜ್ಯದ ದಂಡನಾಯಕರಾದ ಸಿಎಂ ಸಿದ್ದರಾಮಯ್ಯ ನವರ ಕೈಯಲ್ಲಿ ಕ್ಲ್ಯಾಪ್ ಮಾಡುವಂತೆ ಆಹ್ವಾನ ನೀಡಿದ್ದಾರೆ.
‘ಎಂಎಲ್‍ಎ-ಮದರ್ ಪ್ರಾಮಿಸ್ ಲೆಕ್ಕಕ್ಕೆ ಸಿಗದ ಆಸಾಮಿ’ ಚಿತ್ರವೂ ಜವಾಬ್ದಾರಿ ಇಲ್ಲದ ವ್ಯಕ್ತಿಯೊಬ್ಬ ಎಂಎಲ್‍ಎ ಆಗಿ ಆಯ್ಕೆಯಾದರೆ ಏನೆಲ್ಲ ಆಗಬಹುದು ಎನ್ನುವ ಕಥೆಯನ್ನು ಹೊಂದಿದೆ ಎಂದು ಅವರು ಹೇಳಿಕೊಂಡಿದ್ದಾರೆ.