*ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ*
ಸರ್ಪಗಳ ತಾಯಿ ಯಾರೂ? ಅವಳು ತನ್ನ ಮಕ್ಕಳಿಗೆ ಶಾಪ ಕೊಡಲು ಕಾರಣವೇನು ? ಇವೆಲ್ಲದರ ಬಗ್ಗೆ ತಿಳಿಯುವ ಕುತೂಹಲ ಇದೆಯಲ್ಲವೇ! ಹಾಗಾದ್ರೆ ಮುಂದೆ ಓದಿ….
ಪ್ರಜಾಪತಿ ಬ್ರಹ್ಮನಿಗೆ ಕದ್ರು, ವಿನತೆ ಇತ್ಯಾದಿ ಅನೇಕ ಹಣ್ಣು ಮಕ್ಕಳಿದ್ದರು. ಇವರು ವಯಸ್ಸಿಗೆ ಬಂದ ಮೇಲೆ ಪ್ರಜಾವತಿ ಇವರಲ್ಲಿ ಕೆಲವರನ್ನು ಕಶ್ಯಪರೆಂಬ ತಪಸ್ವಿಗಳಿಗೆ ಕೊಟ್ಟು ಮದುವೆ ಮಾಡಿದನು. ಕಾಲಕ್ರಮದಲ್ಲಿ ಕದ್ರುವಿಗೆ ಅನೇಕ ಮಕ್ಕಳಾದುವು. ಇವುಗಳೆ ಸರ್ಪಗಳು. ಇವುಗಳಲ್ಲಿ ಮೊದಲನೆಯವನಾದ ಅದಿಶೇಷನೇ ಭೂಮಿಯನ್ನು ಹೊತ್ತಿರುವವನು. ವಿನತೆಗೆ ಅರುಣ ಮತ್ತು ಗರುಡ ಎಂಬ ಮಕ್ಕಳಾದವು. ಅರುಣನು ಸೂರ್ಯನ ಸಾರಥಿಯದನು. ಗರುಡನು ಮಹಾಶಕ್ತಿಶಾಲಿಯಾಗಿ ಬೆಳೆದನು. ವಿನತೆಯ ಮಗನಾದ್ದರಿಂದ ಗರುಡನಿಗೆ ವೈನತೆಯ ಎಂದೂ ಹೆಸರಿದೆ.
ಹೀಗಿರುವಾಗ ದೇವತೆಗಳು ರಾಕ್ಷಸರು ಅಮೃತಕ್ಕಾಗಿ ಕ್ಷೀರಸಾಗರವನ್ನು ಕಡೆದರು . ಆಗ ಕ್ಷೀರಸಾಗರದಿಂದ ಉದ್ಬವವಾದ ಅನೇಕ ವಸ್ತುಗಳಲ್ಲಿ ಉಚ್ಚೈಶ್ರವನ್ನು ಎಂಬ ಕುದುರೆಯೂ ಒಂದು. ಆ ಕುದುರೆಯೂ ಹಾಲಿನಂತೆ ಬೆಳ್ಳಗಿತ್ತು. ಅತ್ಯಾಕರ್ಷವಾಗಿತ್ತು. ಅದನ್ನು ನೋಡುವ ಸಲುವಾಗಿ ಮೂರು ಲೋಕದಿಂದಲೂ ಜೀವಿಗಳು ಬರುತ್ತಿದ್ದರು.
ಕದ್ರು ಮತ್ತು ವಿನಯತೆಯರಿಗೂ ಆ ಕುದರೆಯನ್ನು ಕಾಣುವ ತವಕ ಉಂಟಾಯಿತು. ಆ ಕುದುರೆ ಹೇಗಿದೆಯೂ ಎಂದು ಅವರಿಬ್ಬರೇ ಚರ್ಚಿಸಿದರು. ವಿನತೆಯು ‘’ಕುದುರೆ ಪೂರ್ತಿ ಬೆಳ್ಳಗಿದೆಯಂತೆ. ಒಂದೇ ಒಂದು ಕಪ್ಪು ಚುಕ್ಕೆಯು ಇಲ್ಲವಂತೆ’’ – ಎಂದಳು. ಕದ್ರುವು, ‘’ ಅದು ಹೇಗೆ ಸಾಧ್ಯ ? ಇನ್ನೇನು ಇಲ್ಲದಿದ್ದರೂ ಅದರ ಬಾಲವಾದರು ಕಪ್ಪಗಿರಬೇಕಲ್ಲವೇ ?’’ – ಎಂದಳು. ವಿನತೆ ‘’ಇಲ್ಲ ಬಾಲವೂ ಬೆಳ್ಳಗಿದೆಯಂತೆ’’ ಎಂದಳು. ಕದ್ರು ‘’ಸಾಧ್ಯವೇ ಇಲ್ಲ, ಬೇಕಾದರೆ ಪಂದ್ಯ ಕಟ್ಟೋಣ’’ – ಎಂದಳು. ‘’ಏನು ಪಂದ್ಯ ?’’ – ಎಂದಾಗ ‘’ಕುದುರೆಯೂ ಪೂರ್ತಿ ಬೆಳ್ಳಗಿದ್ದರೆ, ಜೀವನಪೂರ್ತಿಯಾಗಿ ನಾನು ನಿನ್ನ ಸೇವಕಿಯಗಿರುತ್ತೇನೆ. ಕುದುರೆಯೂ ಬಾಲ ಕಪ್ಪಾಗಿದ್ದರೆ ನೀನು ನನ್ನ ಸೇವಕಿಯಗಿರಬೇಕು ‘’ ಎಂದಳು. ವಿನತೆ ಇದಕ್ಕೆ ಒಪ್ಪಿದಳು. ಇಬ್ಬರೂ ಕುದುರೆಯನ್ನು ನೋಡಿ ಬರುವುದೆಂದು ನಿಶ್ಚಯಿಸಿದರು.
ವಿನೋದವಾಗಿ ಶುರುವಾದ ಮಾತು ತುಂಬ ದೊಡ್ಡದಾಗಿ ಹೋಯಿತು ಕದ್ರುವಿಗೂ ಕುದುರೆಯೂ ಬಾಲ ಕಪ್ಪಾಗಿದೆ ಎಂದು ನಂಬಿಕೆಯಿಲ್ಲ. ಎಲ್ಲರೂ ಕುದುರೆಯೂ ಪೂರ್ಣ ಬೆಳ್ಳಗಿದೆ ಎನ್ನುತ್ತಿದ್ದಾರೆ. ಆದರೆ ಯಾವುದೋ ಭಂಡ ಧೈರ್ಯದಿಂದ ಪಂದ್ಯ ಕಟ್ಟಿದ್ದಳು ಈಗ ಹೇಗಾದರೂ ಮಾಡಿ ಫಂದ್ಯದಲ್ಲಿ ಬೇಕೆಂದು ಯೋಚಿಸಿದಳು. ತನ್ನ ಮಕ್ಕಳಾದ ಸರ್ಪಗಳನ್ನು ಕರೆದಳು ಶೇಷ, ವಾಸುಕಿ, ತಕ್ಷಕ, ಕಾರ್ಕೋಟಕ ಮೊದಲಾದ ಸರ್ಪಗಳು ತಾಯಿಯ ಬಳಿಗೆ ಬಂದವು. ಕದ್ರುವು ತನಗೂ ವಿನತೆಗೂ ನಡೆದ ಮಾತುಕತೆಗಳನ್ನು ವಿವರಿಸಿದಳು ‘’ನೀವೆಲ್ಲರೂ ಹೋಗಿ ಆ ಕುದುರೆಯ ಬಾಲವನ್ನು ನಿಮ್ಮ ಶರೀರದಿಂದ ಮುಚ್ಚಿಬಿಡಿ. ಅದು ಕಪ್ಪಾಗಿ ಕಾಣುತ್ತದೆ. ನಾನು ಪಂದ್ಯದಲ್ಲಿ ಗೆದ್ದಂತಾಗುತ್ತದೆ’’ – ಎಂದಳು.
ಸರ್ಪಗಳು ‘’ಅಮ್ಮಾ ! ನಾವು ಈ ರೀತಿ ಮೋಸ ಮಾಡುವುದು ತಪ್ಪಲ್ಲವೇ ?’’ ಎಂದೂ ಕೇಳಿದವು. ಕದ್ರುವು ಕೂಪಗೊಂಡವು ‘’ನನ್ನ ಮಾತಿಗೆ ಎದುರುತ್ತರ ನೀಡುವಿರಾ ? ನನ್ನ ಮಾತಿಗೆ ಎದುರುತ್ತದೆ ನೀಡುವಿರಾ ? ನನ್ನ ಮಾತು ಮೀರಿದರೂ ಅಗ್ನಿಕುಂಡದಲ್ಲಿ ಬಿದ್ದು ಸಾಯುವಂತಾಗಲಿ’’ – ಎಂದು ಶಾಪ ಕೊಟ್ಟಳು. ಸರ್ಪಗಳು ದುಃಖ – ಭಯಗಳಿಂದ ತಾಯಿಯು ಹೇಳಿದಂತೆ ಉಚ್ಚೈಶ್ರವಸ್ಸಿನ ಬಾಲವನ್ನು ಹಿಡಿದುಕೊಂಡವು. ಅನಂತರ ಕದ್ರು ಮತ್ತು ವಿನತೆಯರು ಬಂದು ನೋಡಿದಾಗ ಆ ಕುದುರೆಯ ಬಾಲವೂ ಮಾತ್ರ ಕಪ್ಪಾಗಿತ್ತು ವಿನತೆಯರು ಬಂದು ನೋಡಿದಾಗ ಆ ಕುದುರೆಯೂ ಬಾಲವೂ ಮಾತ್ರ ಕಪ್ಪಾಗಿತ್ತು. ವಿನತೆಯು ತನ್ನ ಸೋಲನೋಪ್ಪಿಕೊಂಡು ಕದ್ರುವಿನ ಸೇವಕಿಯಾದಳು. ಇಲ್ಲಿ ಓದಿ:-ಆ ದಿನ ಈ ಯಾಗವೇನಾದರೂ ನಡೆದಿದ್ದರೆ, ಸರ್ಪಗಳ ವಂಶವೇ ಇರುತ್ತಿರಲಿಲ್ಲ..!
ಹೀಗೆ ವಿನತೆಯು ಕದ್ರುವಿನ ಸೇವಕಿಯದ್ದರಿಂದ ವಿನತೆಯು ಮಗನಾದ ಗರುಡನು ಸಹ ಕದ್ರು ಮತ್ತು ಅವಳ ಮಕ್ಕಳು ಹೇಳಿದಂತೆ ಮದುತ್ತಿರಬೇಕಾಯಿತು. ಸರ್ಪಗಳ ಗರುಡನನ್ನು ತಮ್ಮ ಸೇವಕನಂತೆ ಹಿನಾಯವಾಗಿ ನಡೆಸಿಕೊಳ್ಳಲಾರಂಬಿಸಿದವು. ಇದರಿಂದ ಗರುಡನ ಮನಸ್ಸಿಗೆ ಬಹಳ ದುಃಖವಾಯಿತು. ಹೇಗಾದರೂ ಮಾಡಿ ತನ್ನ ಮತ್ತು ತನ್ನ ತಾಯಿಯ ದಾಸ್ಯವನ್ನು ಹೋಗಲಾಡಿಸಬೇಕು ಎಂದು ಅವನು ಯೋಚಿಸಿದನು.
ಗರುಡನು ಸರ್ಪಗಳ ಬಳಿಗೆ ಹೋಗಿ ‘’ಅಯ್ಯಾ ! ನಾನು ನಿಮಗೆ ಏನ್ ಏನು ಕೆಲಸವನ್ನು ಮಾಡಿಕೊಟ್ಟರೆ ನಮ್ಮ ತಾಯಿಯ ದಾಸ್ಯವು ಹೋಗುತ್ತದೆ ತಿಳಿಸಿ’’ ಎಂದು ಕೇಳಿದನು. ಅದಕ್ಕೆ ಸರ್ಪಗಳ ತಮ್ಮ ತಾಯಿಯಿಂದ ತಮಗೆ ಬಂದ ಶಾಪವನ್ನು ನೆನೆಪಿಸಿಕೊಂಡು ‘’ ದೇವಲೋಕದಿಂದ ಅಮೃತವನ್ನು ತಂದದುಕೊಟ್ಟರೆ ನಿಮ್ಮ ಭಂಧವಿಮೊಚನೆಯಾಗುವುದು’’ – ಎಂದು ತಿಳಿಸಿದವು.
ಕೂಡಲೇ ಗರುಡನು ಆಕಾಶಕ್ಕೆ ಚಿಮ್ಮ್ಕಿದನು. ತನ್ನ ವಿಶಾಲವಾದ ರೆಕ್ಕೆಗಳನ್ನು ಪಟಪಟನೆ ಬಡಿಯುತ್ತ ವಯುವೆಗದಿಂದ ದೇವಲೋಕದ ಕಡೆ ಹಾರಿದನು. ಅವನು ಹಾರಿದ ರಭಸಕ್ಕೆ ದೊಡ್ಡ ದೊಡ್ಡ ವೃಕ್ಷಗಳು ಬಿದ್ದುಹೊದವು. ಪರ್ವತಗಳು ಅಲ್ಲಾಡಿ ಹೋದವು. ಅಂತಹ ವೇಗದಿಂದ ಗರುಡನು ದೇವಲೋಕಕ್ಕೆ ಬಂದನು.
ಗರುಡನು ಅಮೃತವನ್ನು ಕೊಂಡೊಯ್ಯಲು ಬರುತ್ತಿರುವನೆಂದು ತಿಳಿದ ದೇವೆಂದ್ರನು ಸೈನ್ಯವು ಗರುಡನ ಮೇಲೆ ಎರಗಿತು. ಆದರೆ ಗರುಡನು ಒಂದೇ ಕ್ಷಣದಲ್ಲಿ ಆ ಸೈನ್ಯದ ಧಾಳಿಯನ್ನು ನಿವರಿಸಿಕೊಂಡನು. ದೇವಲೋಕದ ಅಮೃತದ ಕುಂಭವನ್ನು ತೆಗೆದುಕೊಂಡು ಹೋಗಿ ಸರ್ಪಗಳ ಮುಂದಿಟ್ಟನು. ಹೀಗೆ ಸರ್ಪಗಳ ಕೋರಿಕೆಯನ್ನು ಈಡೇರಿಸಿ ಅವನು ತನ್ನ ತಾಯಿ ವಿನತೆಯ ದಾಸ್ಯವನ್ನು ಹೋಗಲಾಡಿಸಿದನು.
ಅಮೃತಕುಂಭವನ್ನು ತರುವ ಸಮಯದಲ್ಲಿ ಗರುಡನು ಪ್ರದರ್ಶಿಸಿದ ವಾಯುವೆಗವನ್ನು ಕಂಡು ಮಹಾವಿಷ್ಣುವಿಗೆ ಬಹಳ ಆನಂದವಾಯಿತು. ಅವನು ಗರುಡನನ್ನು ಕುರಿತು ‘’ಅಯ್ಯಾ ! ನೀನು ನನ್ನ ವಾಹನವಾಗಿರು’’ ಎಂದು ಕೇಳಿಕೊಂಡನು. ಗರುಡನು ಅದಕ್ಕೆ ಸಂತೋಷದಿಂದ ಒಪ್ಪಿಕೊಂಡನು. ಹೀಗೆ ಗರುಡನು ವಿಷ್ಣುವಾಹನನಾದನು.
ಸರ್ಪಗಳೆನೋ ಕದ್ರುವು ಹೇಳಿದಂತೆ ಕುದುರೆಯ ಬಾಲವನ್ನು ಹಿಡಿದು ಪಂದ್ಯದಲ್ಲಿ ಅವಳನ್ನು ಗೆಲ್ಲಿಸಿದುವು. ಆದರೆ ಅವಳು ಆ ಮುಂಚೆ ಅವರಿಗೆ ಕೊಟ್ಟಿದ್ದ ಶಾಪ ಮಾತ್ರ ಹಾಗೆಯೇ ಇತ್ತಲ್ಲ. ಆ ಶಪದಿಂದಾಗುವ ದುಷ್ಪರಿಣಾಮವನ್ನು ತಪ್ಪಿಸಿಕೊಳ್ಳುವುದು ಹೇಗೆಂದು ಅವರೆಲ್ಲ ಯೋಚಿಸಿದರು. ಗರುಡನೇನೋ ಅವರಿಗೆ ಅಮೃತವನ್ನು ತಂದುಕೊಟ್ಟಿದ್ದನು. ಆದರೆ ಇಂದ್ರನು ಅಪಹರಿಸಿಕೊಂಡು ಹೋದುದರಿಂದ ಅವರಿಗೆ ಅದು ದಕ್ಕಿರಲಿಲ್ಲ.
ಆಗ ಏಳಪತ್ರನೆಂಬ ಸರ್ಪವು ‘’ನಾವು ಈಗಲೇ ಸೂಕ್ತವಾದ ಸಂಬಂಧವನ್ನು ಹುಡುಕಿ, ನಮ್ಮ ತಂಗಿ ಜರತ್ಕ್ರಾರುವಿನ ಮದುವೆಯನ್ನು ಮಾಡಿಬಿಡೊಣ. ಅವಳ ಹೊಟ್ಟೆಯಲ್ಲಿ ಹುಟ್ಟುವ ಮಗನು ಬೇರೆ ವಂಶಕ್ಕೆ ಸೇರುವುದರಿಂದ, ಅವನಿಗೆ ನಮ್ಮ ತಾಯಿಯ ಶಾಪದ ಭೀತಿ ಇರುವುದಿಲ್ಲ. ಅವನು ಯಾವುದಾದರೂ ಯೋಜನೆಯಿಂದ ನಮಗೊದಗಿರುವ ದುರವಸ್ತೆಯನ್ನು ತಪ್ಪಿಸಲು ಯತ್ನಿಸಬಹುದು’’- ಎಂದನು ಸರ್ಪಗಳ ಜರತ್ಕಾರವನ್ನು ಅನುರೂಪನಾದ ವರನಿಗೆ ಕೊಟ್ಟು ಮದುವೆ ಮಾಡಿದರು. ಮುಂದೆ ಜರತ್ಕಾರು ಅಸ್ತೀಕ ಎಂಬ ಮಗನಿಗೆ ಜನ್ಮ ಕೊಟ್ಟಳು. ಆಸ್ತಿಕನು ಸಕಲ ವಿದ್ಯಾಪಾರಂಗತನಾಗಿ ಬೆಳೆದನು’’
ಉಗ್ರಶ್ರವ ಸೌತಿಗಳು ಇಷ್ಟು ಕಥೆಯನ್ನು ಹೇಳಿ ಮತ್ತೆ ಜನಮೇಜಯ ಸರ್ಪಯಾಗದ ಬಗ್ಗೆ ಹೇಳಲಾರಂಭಿಸಿದರು.