ಸರ್ಕಾರಿ ಶಾಲೆ ಯೊಂದರಲ್ಲಿ ಮಕ್ಕಳ ಬಿಸಿ ಊಟದಲ್ಲಿ ಹಾವು ಬಿದ್ದಿರುವ ಘಟನೆ ನಡೆದಿದೆ. ಈ ಶಾಲೆಗೆ ಊಟ ಸರಬರಾಜು ಮಾಡುತ್ತಿದ್ದದ್ದು ಒಂದು ಸರ್ಕಾರೇತರ ಖಾಸಗಿ ಸಂಸ್ಥೆ ಯಾಗಿದ್ದು , ಇದು ಶಾಲೆಗೆ ಕಳುಹಿಸಿಕೊಟ್ಟ ಆಹಾರದಲ್ಲಿ ಹಾವು ಇರುವುದು ಪತ್ತೆಯಾಗಿದೆ. ಮಾಧ್ಯಮಗಳಲ್ಲಿ ಈ ಸುದ್ಧಿ ವರದಿಯಾಗಿದ್ದು ಈ ಕುರಿತು ವಿಚಾರಣೆ ನಡೆಸಿ ಆ ಸಂಸ್ಥೆಯ ಮೇಲೆ ಕ್ರಮ ಕೈಗೊಳ್ಳುವಂತೆ ಸರ್ಕಾರ ಆದೇಶ ಹೊರಡಿಸಿದೆ.
ಇನ್ನು ಈ ಘಟನೆ ನಡೆದಿರುವುದು ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ.ಇಲ್ಲಿನ ಗಾರ್ಗವನ್ ಜಿಲ್ಲಾ ಪರಿಷದ್ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದೆ. ನಾಂದೇಡ್ನಿಂದ ಸುಮಾರು 50 ಕಿ.ಮೀ ದೂರದಲ್ಲಿರುವ ಶಾಲೆಯಲ್ಲಿ 80 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.ಪ್ರತಿ ದಿನವೂ ಈ ಶಾಲೆಗೆ ಸರ್ಕಾರೇತರ ಸಂಸ್ಥೆಯೊಂದು ಬಿಸಿಯೂಟ ಕಳುಹಿಸುತಿತ್ತು. ಆದರೆ ಅಂದು ಮಾತ್ರ ಶಾಲಾ ಸಿಬ್ಬಂದಿ ಗಳು ಊಟಾ ಬಡಿಸಲು ಪ್ರಾರಂಭಿಸಿದಾಗ ಕಿಚಡಿಯಲ್ಲಿ ಹಾವು ಇರುವುದು ಕಂಡು ಬಂದಿದೆ.
ತಕ್ಷಣ ಅವರು ಹಿರಿಯ ಅಧಿಕಾರಿಗಳಿಗೆ ಈ ಕುರಿತು ಮಾಹಿತಿ ನೀಡಿದ್ದಾರೆ. ಮತ್ತು ಯಾವ ಮಕ್ಕಳಿಗೂ ಈ ಹಾವು ಬಿದ್ದಿದ್ದ ಊಟ ನೀಡಿಲ್ಲ.ತಕ್ಷಣವೇ ಸ್ಥಳಕ್ಕೆ ನಾಂದೇಡ್ ಜಿಲ್ಲಾ ಶಿಕ್ಷಣಾಧಿಕಾರಿಗಳಾದ ಪ್ರಶಾಂತ್ ಅವರು ಭೇಟಿ ನೀಡಿದ್ದಾರೆ. ಈ ಕುರಿತು ಮಾಹಿತಿ ಪಡೆದು ತಕ್ಷಣ ತನಿಕೆ ನಡೆಯಬೇಕೆಂದು ಆದೇಶ ನೀಡಿದ್ದಾರೆ. ಅಂತೂ ಮಕ್ಕಳು ಮಾತ್ರ ಅಪಾಯದಿಂದ ಪಾರಾಗಿದ್ದಾರೆ.
ಮಹಾರಾಷ್ಟ್ರ ಸರ್ಕಾರವೂ ಸಹ ಇದರ ಬಗ್ಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ. ಅಲ್ಲಿಯ ವ್ಯವಸ್ಥೆ ಗಳಿಗೆ ಹೋಲಿಸಿದರೆ ನಮ್ಮ ಕರ್ನಾಟಕದಲ್ಲಿ ಶಾಲಾ ಮಕ್ಕಳಿಗೆ ನೀಡುವ ಬಿಸಿ ಊಟ ದ ವ್ಯವಸ್ಥೆ ಅಚ್ಚುಕಟ್ಟಾಗಿ, ಸುವ್ಯವಸ್ಥಿತವಾಗಿದೆ. ಇನ್ನು ಪೋಷಕರು ಮತ್ತು ಶಿಕ್ಷಕರು ಮಕ್ಕಳ ಊಟ ದ ವಿಚಾರದಲ್ಲಿ ಹೆಚ್ಚಿನ ಕಾಳಜಿ ವಹಿಸುವುದು ಅತ್ಯಗತ್ಯ ವಾಗವಾಗಿದೆ.