ಸುದ್ದಿ

ಸರ್ಕಾರಿ ನೌಕರರಿಗೊಂದು ಬಂಪರ್ ಆಪರ್ ,5 ದಿನ ಮೊದಲೇ ಸಿಗಲಿದೆ ಸಂಬಳ….!

By admin

September 21, 2019

ನೌಕರರು, ಉದ್ಯೋಗಿಗಳ ವಲಯಕ್ಕೆ ಶುಭ ಸುದ್ದಿ ಇಲ್ಲಿದೆ. ಸೆಪ್ಟಂಬರ್ 26, 27 ರಂದು ಬ್ಯಾಂಕ್  ಮುಷ್ಕರವಿದ್ದು, ಸತತವಾಗಿ 5 ದಿನ ರಜೆ ಇರುವುದರಿಂದ 5 ದಿನ ಮೊದಲೇ ವೇತನ ನೀಡಲು ಹಣಕಾಸು ಸಚಿವಾಲಯ ಸುತ್ತೋಲೆ ಹೊರಡಿಸಿದೆ.

ಸೆಪ್ಟೆಂಬರ್ 26, 27 ರಂದು ಬ್ಯಾಂಕ್ ವಿಲೀನ ವಿರೋಧಿಸಿ ಮುಷ್ಕರ ನಡೆಯಲಿದೆ. 28 ರಂದು 4ನೇ ಶನಿವಾರ ಬ್ಯಾಂಕುಗಳಿಗೆ ರಜೆ ಇರುತ್ತದೆ. 29 ರಂದು ಭಾನುವಾರ ಕೂಡ ರಜೆ ಇರುತ್ತದೆ. ಸೆಪ್ಟೆಂಬರ್ 30 ರಂದು ಬ್ಯಾಂಕುಗಳ ಅರ್ಧ ವಾರ್ಷಿಕ ವಹಿವಾಟು ಲೆಕ್ಕ ಚುಕ್ತಾ ದಿನವಾಗಿರುವುದರಿಂದ ಬ್ಯಾಂಕ್ ವ್ಯವಹಾರ ನಡೆಯುವುದಿಲ್ಲ.

ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 25 ರಂದು ಉದ್ಯೋಗಿಗಳಿಗೆ ವೇತನ ನೀಡುವಂತೆ ಕೇಂದ್ರ ಹಣಕಾಸು ಸಚಿವಾಲಯದ ಲೆಕ್ಕಪತ್ರ ನಿಬಂಧಕರ ಕಚೇರಿಯಿಂದ ಸುತ್ತೋಲೆ ಹೊರಡಿಸಲಾಗಿದೆ.

ಈ ತಿಂಗಳು ಸೆಪ್ಟೆಂಬರ್ 25 ರಂದು ಬ್ಯಾಂಕುಗಳ ಕೆಲಸದ ಅವಧಿಯ ಕೊನೆಯ ದಿನವಾಗಿದ್ದು, ಅಂದೇ ವೇತನ ಪಾವತಿಗೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಲಾಗಿದೆ.