ನಮ್ಮ ಜೀವನದ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬ ಮನುಷ್ಯನಿಗೂ ನಿದ್ರೆ ಅತ್ಯಾವಶ್ಯಕವಾಗಿದ್ದು, ನಮ್ಮ ಜೀವನದ ಮೂರನೇ ಒಂದು ಭಾಗವನ್ನು ನಾವು ನಿದ್ರೆಯಲ್ಲೇ ಕಳೆಯುತ್ತೇವೆ. ಆದರೆ ಬದಲಾದ ಜೀವನ ಶೈಲಿಯಿಂದಾಗಿ ಇಂದು ನಿದ್ದೆಗೆಡುವುದು ಸಾಮಾನ್ಯ ಎಂಬಂತಾಗಿ ಹೋಗಿದ್ದು, ಇದರಿಂದಾಗಿ ಭವಿಷ್ಯದಲ್ಲಿ ಸಾಕಷ್ಟು ಆರೋಗ್ಯಕರ ದುಷ್ಪರಿಣಾಮಗಳು ಸಂಭವಿಸುತ್ತವೆ
ವೈದ್ಯರು ಪ್ರಕಾರ ಸಾಮಾನ್ಯವಾಗಿ ಕಾಡುವ ನಿದ್ರಾಹೀನತೆಯಿಂದ ಭವಿಷ್ಯದಲ್ಲಿ ಮಾರಕ ಆರೋಗ್ಯ ದುಷ್ಪರಿಣಾಮಗಳು ಎದುರಾಗುತ್ತವೆ…
ನಿದ್ದೆಗೆಡುವುದರಿಂದ ಏನೆಲ್ಲಾ ಆಗುತ್ತದೆ ಗೊತ್ತಾ ?
ಕೆಲುವು ವರದಿಗಳ ಪ್ರಕಾರ ದೀರ್ಘಕಾಲದ ನಿದ್ರಾಹೀನತೆಯಿಂದಾಗಿ ಹೃದಯಾಘಾತ, ಪಾರ್ಶ್ವವಾಯು ಸಂಭವ ಹೆಚ್ಚು ಎಂದು ಹೇಳಲಾಗಿದೆ. ಅಂತೆಯೇ ಪುರುಷರಿಂಗಿಂತ ಹೆಚ್ಚಾಗಿ ಮಹಿಳೆಯರಿಗೇ ನಿದ್ರಾ ಹೀನತೆಯಿಂದ ಎದುರಾಗುವ ದುಷ್ಪರಿಣಾಮಗಳ ಅಪಾಯ ಹೆಚ್ಚಿದ್ದು, ಪುರುಷರಿಗಿಂತ ಬೇಗನೇ ಮಹಿಳೆಯರಲ್ಲಿ ಹೃದಯಾಘಾತ, ಪಾರ್ಶ್ವವಾಯು ಸಂಭವ ಹೆಚ್ಚು ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.
ಇವು ನಿದ್ರಾ ಹೀನತೆಯ ಲಕ್ಷಣಗಳು :-
ಪದೇ ಪದೇ ಆನಾರೋಗ್ಯಕ್ಕೀಡಾಗುವವರಿಗಿಂತಲೂ, ನಿದ್ರಾಹೀನತೆಯಿಂದ ಬಳಲುತ್ತಿರುವವರಲ್ಲೇ ಹೆಚ್ಚಾಗಿ ಪಾರ್ಶ್ವವಾಯು ಮತ್ತು ಹೃದಯಾಘಾತದ ಸಂಭವ ಹೆಚ್ಚಿರುತ್ತದೆ. ತೀರಾ ತಡವಾಗಿ ನಿದ್ರೆ ಬರುವುದು, ಅರೆ ನಿದ್ರೆಯಲ್ಲೇ ಎಚ್ಚರವಾಗುವುದು, ಸಮಾಧಾನಕರವಲ್ಲದ ನಿದ್ರೆ ಮತ್ತು ಅಗತ್ಯಕ್ಕಿಂತ ಮೊದಲೇ ಅಂದರೆ ಮುಂಜಾನೆಯೇ ಎಚ್ಚರವಾಗುವುದು ಇವೆಲ್ಲವೂ ನಿದ್ರಾ ಹೀನತೆಯ ಲಕ್ಷಣಗಳು ಎಂದು ವೈದ್ಯರು ಹೇಳಿದ್ದಾರೆ.
ನಿದ್ರಾಹೀನತೆಯನ್ನು ಕಂಡುಹಿಡಿದದ್ದು ಹೇಗೆ ಗೊತ್ತಾ ?
ಸುಮಾರು 160, 867 ಮಂದಿಯ ಮೇಲೆ ನಡೆಸಲಾದ ಪರೀಕ್ಷೆಯಲ್ಲಿ ಈ ಅಂಶ ಬೆಳಕಿಗೆ ಬಂದಿದ್ದು, ಶೇ.27ರಷ್ಟು ಮಂದಿ ತಡವಾಗಿ ನಿದ್ರೆ ಮಾಡುವ ಅಭ್ಯಾಸ ಹೊಂದಿದ್ದು, ಶೇ.11ರಷ್ಟು ಮಂದಿಯಲ್ಲಿ ನಿದ್ರೆ ಮಧ್ಯೆ ಎಚ್ಚರವಾಗುವ ಸಮಸ್ಯೆ ಕಂಡು ಬಂದಿದೆ. ಅಂತೆಯೇ ಶೇ.18ರಷ್ಟು ಮಂದಿಯಲ್ಲಿ ಅಗತ್ಯಕ್ಕೂ ಮೊದಲೇ ನಿದ್ರೆಯಿಂದ ಎಚ್ಚರವಾಗುವ ಸಮಸ್ಯೆ ಹೊಂದಿದ್ದಾರೆ. ಇಂತಹವರಲ್ಲಿ ಅತೀ ಬೇಗನೇ ಹೃದಯಾಘಾತವಾಗುವ ಅಪಾಯವಿದ್ದು, ಪಾರ್ಶ್ವವಾಯು ಸಂಭವ ಕೂಡ ಹೆಚ್ಚಿರುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.
ನಿದ್ದೆಗೆಡುವುದು ಹೃದಯಾಘಾತಕ್ಕೆ ಕಾರಣವಾಗಿ ಬಳಿಕ ಸಾವು ಕೂಡ ಸಂಭವಿಸಬಹುದು ಎಂದು ಹೇಳಿದ್ದಾರೆ. ಅಂತೆಯೇ ಅತೀ ಕಡಿಮೆ ನಿದ್ರೆ ನಮ್ಮ ಮೆದುಳಿನ ಮೇಲೂ ಅಗಾಧ ದುಷ್ಪರಿಣಾಮ ಬೀರಿ ಪಾರ್ಶ್ವವಾಯುವಿಗೆ ದಾರಿ ಮಾಡುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.
ಹಾಗಾದರೆ, ನೀವೇನಾದರೂ ನಿದ್ರಾ ಹೀನತೆಯಿಂದ ಬಳಲುತ್ತಿದ್ದಾರೆ ಆದಷ್ಟು ಬೇಗ ವೈದ್ಯರನ್ನು ಕಂಡು ಸಮಸ್ಯೆ ಬಗೆಹರಿಸಿಕೊಳ್ಳುವುದು ಸೂಕ್ತ ಎಂದು ವೈದ್ಯರು ಸಲಹೆ ನೀಡಿದ್ದಾರೆ.