ಪ್ರಸ್ತುತ ದಿನಗಳಲ್ಲಿ ಎಲ್ಲರನ್ನು ಆಕರ್ಷಿಸುತ್ತಿರುವ ಮೊಬೈಲ್ ಫೋನ್ ಒಂದು ಕ್ಷಣ ಇಲ್ಲ ಅಂದರೆ ಇರಲು ಸಾಧ್ಯವಿಲ್ಲವೇನೋ ಅನ್ನೋ ರೀತಿಯಲ್ಲಿ ಜನ ಅದಕ್ಕೆ ಅವಲಂಬಿತರಾಗಿದ್ದಾರೆ.
ಹೀಗುರುವಾಗ ಇದರ ಮೇಲೆ ಒಂದು ಸಮೀಕ್ಷೆ ನಡೆಸಿದಾಗ ಭಾರತೀಯರು ಮೊಬೈಲ್ ಮೇಲೆ ಎಷ್ಟು ಅವಲಂಬಿತರಾಗಿದ್ದಾರೆ ಅನ್ನೋದನ್ನ ತಿಳಿಯಲಾಗಿದೆ.
ಭಾರತೀಯರು ತಮ್ಮ ಬೇಸರವನ್ನು ನಿವಾರಿಸಿಕೊಳ್ಳಲು ಏನು ಮಾಡುತ್ತಾರೆ ಗೊತ್ತಾ..?
ಒಂದು ಸಮೀಕ್ಷೆ ಹೇಳುವ ಪ್ರಕಾರ ಭಾರತದ ಶೇ.72ರಷ್ಟು ಮಂದಿ ತಮ್ಮ ಬೇಸರ ನಿವಾರಿಸಿಕೊಳ್ಳುವುದಕ್ಕಾಗಿಯೇ ಸಂದೇಶ, ಕರೆ ಮತ್ತು ಯಾವುದೇ ಸಕಾರಣವಿಲ್ಲದೆಯೇ ತಮ್ಮ ಮೊಬೈಲ್ ನೋಡುತ್ತಾರಂತೆ. ಹೀಗಂತಾ ನಾವು ಹೇಳ್ತಿಲ್ಲ ಸಮೀಕ್ಷೆಯೊಂದು ಹೇಳಿದೆ.
ಭಾರತ, ಚೀನಾ, ಅಮೆರಿಕ ಮತ್ತು ಬ್ರಿಟನ್’ನಲ್ಲಿ ನಡೆದ ಈ ಸಮೀಕ್ಷೆಯಲ್ಲಿ ಹತ್ತು ಸಾವಿರ ಮಂದಿ ಭಾಗವಹಿಸಿದ್ದರು. ಅಲ್ಲದೆ, ಶೇ.51ರಷ್ಟು ಭಾರತೀಯರು ಹತ್ತು ನಿಮಿಷಕ್ಕೊಮ್ಮೆ ಮೊಬೈಲ್ ಸ್ಕ್ರೀನ್ ಅನ್ನು ನೋಡುತ್ತಾರೆಂದು ಸಮೀಕ್ಷೆಯಲ್ಲಿ ತಿಳಿಸಲಾಗಿದೆ.