ಭಿಕ್ಷುಕನ ಮನೆಯಲ್ಲಿ 1.70 ಕೋಟಿಗಳ ಹಣ ಸಿಕ್ಕಿದೆ. ಮುಂಬೈ ಪಟ್ಟಣದಲ್ಲಿನ ಕೊಳಗೇರಿಗೆ ಸೇರಿದ ಭಿಕ್ಷುಕನಿಗೆ ತನ್ನವರು ಎಂಬುವರು ಯಾರೂ ಇಲ್ಲ. ಪ್ರತಿದಿನ ಭಿಕ್ಷೆ ಬೇಡುವುದು, ದೊರೆತ್ತದ್ದನ್ನು ತಿನ್ನುವುದು, ಬಂದದ್ದನ್ನು ಎತ್ತಿಡುವುದು…..ಇದೇ ಆತನ ದಿನನಿತ್ಯದ ಕೆಲಸವಾಗಿತ್ತು.
ಕೆಲವು ವರ್ಷಗಳಿಂದಲೂ ಹೀಗೆಯೇ ಮಾಡುತ್ತಿದ್ದ ಆತನಿಗೆ ವಯಸ್ಸಾಗಿ ಅನಾರೋಗ್ಯದಿಂದ ಮೃತಪಟ್ಟಿದ್ದಾನೆ. ಮೊದಲೇ ಹೇಳಿದಂತೆ ತನ್ನವರೆಂಬುವರು ಯಾರೂ ಇಲ್ಲದಿರುವುದರಿಂದ ಸ್ಥಳೀಯ ಸ್ವಯಂಸೇವಾ ಸಂಸ್ಥೆಯು ಮುಂದಾಗಿ ಆತನ ಅಂತ್ಯಕ್ರಿಯೆಗಳನ್ನು ನಡೆಸಿದೆ.
ಆತನ ಗುಡಿಸಲಲ್ಲಿ ಹುಡುಕುವಾಗ ಕಣ್ಣು ಕುಕ್ಕುವ ದೃಶ್ಯ ಕಂಡು ಬಂದಿತು. ಪ್ಲಾಸ್ಟಿಕ್ ಚೀಲಗಳಲ್ಲಿ, ಗೋಣಿ ಚೀಲಗಳಲ್ಲಿ ಹಣ ಕಾಣಿಸಿದ್ದು, ಅದನ್ನು ಲೆಕ್ಕ ಹಾಕಿದಾಗ 1 ಕೋಟಿ 70 ಲಕ್ಷ 35 ಸಾವಿರ ರೂಪಾಯಿಗಳಿದ್ದವು. ಇದನ್ನು ಕಂಡವರೆಲ್ಲಾ ಬೆಚ್ಚಿ ಬಿದ್ದಿದ್ದಾರೆ.
ಆದರೆ ಆತ ಒಂದೊಂದು ಪೈಸೆಯನ್ನೂ ಕೂಡಿಟ್ಟ ಭಿಕ್ಷುಕನಾದ್ದರಿಂದ ಅನಾಥನಂತೆಯೇ ಲೋಕವನ್ನು ಬಿಟ್ಟಿದ್ದಾನೆ. ಕಳೆದ ವರ್ಷ ಇಂತಹದ್ದೇ ಘಟನೆಯೊಂದು ಬೆಂಗಳೂರಿನಲ್ಲಿಯೂ ನಡೆದಿದೆ. ಆದ್ದರಿಂದಲೇ ಹುಟ್ಟಿದಾಗ ಏನನ್ನೂ ತರುವುದಿಲ್ಲ. ಹೋಗುವಾಗ ಏನನ್ನೂ ಹೊತ್ತುಕೊಂಡು ಹೋಗುವುದಿಲ್ಲ ಎಂಬ ವೇದಾಂತದ ಮಾತಿದೆ.
ಈ ಮಾತನ್ನು ಯಾರಾದರೂ ಮೃತಪಟ್ಟಿದ್ದಾಗ ಆಡುತ್ತಾರೆ ಆದರೂ ಮನುಷ್ಯನು ಮಾತ್ರ ಜೀವನವಿಡೀ ಹಣದ ಸುತ್ತಲೂ ಸುತ್ತುತ್ತಿರುತ್ತಾನೆ. ಭಿಕ್ಷೆ ಬೇಡಿ ಅಷ್ಟು ಹಣವನ್ನು ಗಳಿಸಿದ್ದಾನೆ ಎಂದರೆ ನಂಬಲು ಸ್ವಲ್ಪ ಅಚ್ಚರಿಯೇ ಆಗುತ್ತದೆ.