ಸ್ಯಾಂಡಲ್‍ವುಡ್ ನಟಿ ಶ್ರುತಿ ಹರಿಹರನ್ ಅವರು ತಮ್ಮ ಮಗಳ ನಾಮಕರಣವನ್ನು ನೆರವೇರಿಸಿದ್ದಾರೆ. ಸದ್ಯ ನಾಮಕರಣದ ಫೋಟೋವನ್ನು ಶ್ರುತಿ ಅವರ ಪತಿ ರಾಮ್ ಕಲರಿ ಅವರು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಶ್ರುತಿ ಹರಿಹರನ್ ಮುದ್ದಿನ ಮಗಳು ಹೇಗಿದ್ದಾಳೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇದೆ. ಆದ್ರೀಗ ಶ್ರುತಿ ಮಗಳ ಮೊದಲ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಶ್ರುತಿ ಪತಿ ರಾಮ್ ಮಗಳ ನಾಮಕರಣದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಮುದ್ದು ಮಗಳಿಗೆ ಶ್ರುತಿ ದಂಪತಿ ಇಟ್ಟ ಹೆಸರೇನು ಗೊತ್ತಾ?
ಶ್ರುತಿ ಹರಿಹರನ್ ಮಗಳ ಹೆಸರೇನು ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇತ್ತು. ಆದ್ರೀಗ ಆ ಕುತೂಹಲಕ್ಕೆ ತೆರೆ ಬಿದ್ದಿದೆ. ಶ್ರುತಿ ಮತ್ತು ರಾಮ್ ಇಬ್ಬರು ಮಗಳಿಗೆ ಜಾನಕಿ ಎಂದು ನಾಮಕರಣ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಇತ್ತೀಚಿಗೆ ಕೆರಳಾದಲ್ಲಿ ಮಗಳ ನಾಮಕರಣವನ್ನು ಸರಳ ಆಚರಿಸಲಾಗಿದೆ. ಈ ಸಂಭ್ರಮದಲ್ಲಿ ಕುಟುಂಬದ ಸದಸ್ಯರು ಮಾತ್ರ ಭಾಗಿಯಾಗಿದ್ದಾರೆ.
ರಾಮ್ ಈ ಕಾರ್ಯಕ್ರಮದಲ್ಲಿ ತಮ್ಮ ಮಗಳನ್ನು ಎತ್ತಿಕೊಂಡು ಶ್ರುತಿ ಹಾಗೂ ಕುಟುಂಬಸ್ಥರ ಜೊತೆ ಕುಳಿತಿರುವ ಫೋಟೋವನ್ನು ಇನ್‍ಸ್ಟಾದಲ್ಲಿ ಶೇರ್ ಮಾಡಿದ್ದಾರೆ. ಅಲ್ಲದೆ ಅದಕ್ಕೆ, ನಾವು ಅತ್ಯುತ್ತಮ ಉಡುಗೊರೆಯಲ್ಲಿ ಒಂದನ್ನು ಸ್ವೀಕರಿಸಿ 28 ದಿನಗಳು ಕಳೆದಿವೆ. ಮತ್ತು ಅದು ಕುಟುಂಬದ ಪ್ರೀತಿ ಪಾತ್ರರ ಜೊತೆ ಸಂಭ್ರಮಾಚರಣೆಗೆ ಕರೆ ನೀಡುತ್ತದೆ. ಅಲ್ಲವೇ? ಎಂದು ಬರೆದುಕೊಂಡಿದ್ದಾರೆ.