ಸಿನಿಮಾವೊಂದರ ಬಗ್ಗೆ ಬಿಡುಗಡೆಗು ಮುನ್ನವೇ ಸಹಜವಾಗಿ ಬರುವ ನಿರೀಕ್ಷೆಯಾ ತೀವ್ರತೆಯಿದೆಯಲ್ಲಾ? ಅದಕ್ಕೆ ಮಾಸ್ಟರ್ ಪೀಸ್‍ನಂಥಾ ಚಿತ್ರಗಳು ಅನೇಕವಿವೆ. ಇತ್ತೀಚಿನ ತಾಜಾ ಮಾದರಿಯಾಗಿ ನಿಲ್ಲುವಂಥಾ ಚಿತ್ರ ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಭರಾಟೆ.
ಈ ಟೈಟಲ್ ಅನೌನ್ಸ್ ಮಾಡಿದಗಿನಿಂದಲೇ ಸೆನ್ಸೇಷನಲ್ ಭರಾಟೆ ಶುರುವಾಗಿ ಹೋಗಿತ್ತು. ರಾಜಸ್ಥಾನದ ಸುಂದರ ಸ್ಥಳಗಲ್ಲಿ , ವಿಭಿನ್ನ ಗೆಟಪ್ನಲ್ಲಿ ಮಿಂಚಿದ್ದ ಶ್ರೀಮುರಳಿ ಅಭಿಮಾನಿಗಳನ್ನು ಹುಚ್ಚೆಬ್ಬಿಸಿ ಕುಣಿಸಿದ್ದರು. ಅದೇ ರಭಸದೊಂದಿಗೆ ಸಾಗಿ ಬಂದಿರೋ ಭರಾಟೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ.
ಯುವ ಆವೇಗದ ಚೇತನ್ ಅವರು ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಭರಾಟೆ ಕಥೆಯನ್ನ ರೋರಿಂಗ್ ಸ್ಟಾರ್ ಶ್ರೀಮುರಳಿಯವರಿಗೆ ತಕ್ಕಂತೆಯೇ ಬರೆದಿದ್ದರೆ,ಅದಕ್ಕೆ ತಕ್ಕ ದೃಶ್ಯ ರೂಪವನ್ನೂ ನೀಡಿದ್ದಾರೆ. ಅದರ ಖದರ್ ಏನೆಂಬುದು ಈಗಾಗಲೇ ಟೀಸರ್ ಮುಖಾಂತರ ಪ್ರೇಕ್ಷಕರನ್ನು ಮನರಂಜಿಸಿದೆ.
ಇತ್ತೀಚೆಗೆ ಬಿಡುಗಡೆಯಾಗಿದ್ದ ಡೈಲಾಗ್ ಟ್ರೇಲರ್ ಅಂತೂ ಲಕ್ಷ ಲಕ್ಷ ವೀಕ್ಷಣೆ ಪಡೆಯೋದರೊಂದಿಗೆ ಭರಾಟೆ ಕ್ರೇಜ್ ಮತ್ತಷ್ಟು ಹೆಚ್ಚಿಕೊಂಡಿದೆ.ಅಷ್ಟಕ್ಕೂ ಸುಪ್ರೀತ್ ನಿರ್ಮಾಣ ಮಾಡಿರೋ ಈ ಚಿತ್ರ ಪ್ರೇಕ್ಷಕರನ್ನು ಆವರಿಸಿಕೊಂಡು ಸಾಗಿ ಬಂದಿರೋದೇ ಇಂಥಾ ಕ್ರಿಯೇಟಿವಿಟಿಯಿಂದ ಕೂಡಿದ ಕೆಲಸ ಕಾರ್ಯಗಳಿಂದ.