ಆರೋಗ್ಯ

ಶೇ.80 ರಷ್ಟು ಕ್ಯಾನ್ಸರ್‌ಗಳಿಗೆ ಇದೆ ಕಾರಣ..!ತಿಳಿಯಲು ಈ ಲೇಖನ ಓದಿ…

By admin

January 15, 2018

‘ನಮ್ಮ ಮುಂದೆ ಇರುವ ಅವಘಡಗಳಿಗೆ, ಹೆಚ್ಚು ಅಪಾಯ ತರುವ ಅಂಶಗಳಿಗೆಯಾವಾಗಲೂ ನಾವೇ ಕಾರಣರಾಗಿರುತ್ತೇವೆ’.ಶೇ.80 ರಷ್ಟು ಕ್ಯಾನ್ಸರ್‌ಗಳಿಗೆ ಕಾರಣ ನಮ್ಮ ಜೀವನಶೈಲಿ (ಧೂಮಪಾನ, ಮದ್ಯಪಾನ, ಆಹಾರಾಭ್ಯಾಸ) ಭಾರತದಲ್ಲಿ ಪುರುಷರಲ್ಲಿ ಶೇ.50ರಷ್ಟು ಮತ್ತು ಮಹಿಳೆಯರಲ್ಲಿ ಶೇ.20 ರಷ್ಟು ಕ್ಯಾನ್ಸರ್‌ಗಳಿಗೆ ತಂಬಾಕು ಬಳಕೆಯೇ ಕಾರಣ.

ಬೊಜ್ಜು ಒತ್ತಡದ ಕಾರಣದಿಂದಾಗಿ ಉಂಟಾಗುತ್ತದೆ. ಆದರೂ ಕೂಡ ಜನರು ಇದರ ಬಗ್ಗೆ ಯೋಚನೆ ಮಾಡೋದೆ ಇಲ್ಲ. ಅವರು ಇದನ್ನು ಸಮಸ್ಯೆ ಎಂದು ಹೇಳಲು ತಯಾರಿರೋದಿಲ್ಲ. ಹೆಚ್ಚು ತೂಕ ಹೊಂದಿರುವ ಜನರು ಆ ಬಗ್ಗೆ ಕಮೆಂಟ್‌ ಕೂಡ ಕೇಳಲು ಇಷ್ಟಪಡೋದಿಲ್ಲ. ಆದರೆ ಈ ಬೊಜ್ಜು ಹಲವಾರು ರೋಗಗಳಿಗೆ ಕಾರಣವಾಗಿದೆ.

ಬೊಜ್ಜು ಪ್ರಪಂಚದಾದ್ಯಂತ ಒಂದು ಮಹಾಮಾರಿಯಂತೆ ಹರಡಿದೆ. ಭಾರತವನ್ನು ಸಹ ಇದು ಬಿಟ್ಟಿಲ್ಲ. ಆದರೆ ಜನರು ಇದನ್ನು ಸಮಸ್ಯೆ ಎಂದು ಪರಿಗಣಿಸೋದೆ ಇಲ್ಲ. ಆದರೆ ಎಲ್ಲಾ ರೋಗದ ಮೂಲ ಇದಾಗಿದೆ. ಬೊಜ್ಜಿನಿಂದ ಹೃದಯದ ಸಮಸ್ಯೆ, ಹೈಪರ್‌ಟೆನ್ಶನ್‌, ಟೈಪ್‌2 ಮಧುಮೇಹ ಸಮಸ್ಯೆ ಕೂಡ ಉಂಟಾಗುತ್ತದೆ.

ಇಂಪೀರಿಯಲ್‌ ಕಾಲೇಜ್‌ ಆಫ್‌ ಲಂಡನ್‌ ನಡೆಸಿದಂತಹ ಅಧ್ಯಯನದಲ್ಲಿ ತಿಳಿಸಿದಂತೆ ಇಂಡಿವಿಶುವಲ್‌ ಆಗಿ ತೂಕ ಹೆಚ್ಚಾಗಿರೋದರಿಂದ 544,300 ಜನರಿಗೆ ಕ್ಯಾನ್ಸರ್‌ ಉಂಟಾಗಿರುವ ಕೇಸ್‌ಗಳು ಬಂದಿವೆ. ಅದರಂತೆ ಡಯಾಬಿಟೀಸ್‌ನಿಂದಾಗಿ 280100 ಜನರಿಗೆ ಕ್ಯಾನ್ಸರ್‌ ಉಂಟಾಗಿರುವ ಕೇಸ್‌ ಕೂಡ ಇದೆ.

ಒಟ್ಟಿನಲ್ಲಿ ಕ್ಯಾನ್ಸರ್‌ ಉಂಟಾಗುವ ಮುಖ್ಯ ಕಾರಣ ಡಯಾಬಿಟೀಸ್ ಮತ್ತು ಬೊಜ್ಜು ಎಂದು ತಿಳಿದು ಬಂದಿದೆ. ಕ್ಯಾನ್ಸರ್‌‌ ರೋಗಿಗಳ ಮೇಲೆ ನಡೆಸಿದ ಅಧ್ಯಯನದಲ್ಲಿ ಡಯಾಬಿಟೀಸ್ ಮತ್ತು ಬೊಜ್ಜು ಸಮಸ್ಯೆಯಿಂದ ಸುಮಾರು 8,00,000 ಜನರಿಗೆ ಕ್ಯಾನ್ಸರ್‌‌ ಆಗಿರುವುದು ತಿಳಿದು ಬಂದಿದೆ. ಇವೆರಡು ಜೊತೆಯಾದರೆ ಜನರಿಗೆ ಲಿವರ್‌ ಕ್ಯಾನ್ಸರ್‌, ಬ್ರೆಸ್ಟ್‌ ಕ್ಯಾನ್ಸರ್‌‌, ಕೊಲೊರೆಕ್ಟಲ್‌ ಕ್ಯಾನ್ಸರ್‌, ಎಂಡೊಮೆಟ್ರಿಯಲ್‌ ಕ್ಯಾನ್ಸರ್‌ ಉಂಟಾಗುತ್ತದೆ.

ಪ್ರಮುಖ ಕಾರಣಗಳು :-

ತಂಬಾಕು, ಮದ್ಯಪಾನ, ಆಹಾರಾಭ್ಯಾಸ,ಪ್ರಾಕೃತಿಕ ಅಂಶಗಳು. ವಂಶವಾಹಿನಿಯ ಅಂಶಗಳು.