ಉಪಯುಕ್ತ ಮಾಹಿತಿ

ಶೂನ್ಯ ಬಂಡವಾಳದಲ್ಲಿ ಶುರುಮಾಡುಬಹುದಾದ 7 ಬುಸಿನೆಸ್..!ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ ಉಪಯೋಗವಾಗಲಿ…

By admin

April 10, 2018

ಸಾಮಾನ್ಯವಾಗಿ ಸ್ವಂತ ಉದ್ಯೋಗ ಮಾಡುವವರು ಮೊದಲು ನೋಡುವುದು ಬಂಡವಾಳ‌.. ಹೌದು ದೊಡ್ಡ ಮಟ್ಟದ ಬಂಡವಾಳ ಹಾಕುವುದು ಎಲ್ಲರಿಂದಲೂ ಸಾಧ್ಯವಿಲ್ಲ ಅಂತವರು ಒಂದು ಹತ್ತು ಸಾವಿರ ರೂಪಾಯಿಗಳ ಒಳಗೆ ಬಂಡವಾಳ ಹೂಡಿ ಸ್ವಂತ ಉದ್ಯೋಗ ಮಾಡಬಹುದು.. ಆ ಉದ್ಯೋಗಗಳು ಇಲ್ಲಿವೆ ನೋಡಿ..

ಬ್ಲಾಗಿಂಗ್

ಎಲ್ಲರಿಗೂ ಓದಲು ಅನುಕೂಲವಾಗುವಂತೆ ಅಂತರಜಾಲದಲ್ಲಿ (ಇಂಟರ್ನೆಟ್ನಲ್ಲಿ) ಇಟ್ಟಂತಹ ತೆರೆದ ದಿನಚರಿ ಅಥವಾ ಡೈರಿಯನ್ನು ಬ್ಲಾಗ್ ಎನ್ನುತ್ತಾರೆ. ಬ್ಲಾಗ್ ಎಂದರೆ ಒಂದು ರೀತಿಯಲ್ಲಿ ಸಾರ್ವಜನಿಕ ಸ್ವಗತ ಎನ್ನಬಹುದು. ಬ್ಲಾಗ್ನ ಕ್ರಿಯಾರೂಪವೇ ಬ್ಲಾಗಿಂಗ್ ಅಂದರೆ ಬ್ಲಾಗ್ ನಡೆಸುವ ಕ್ರಿಯೆ. ಬ್ಲಾಗ್ ಬರೆಯುವ ವ್ಯಕ್ತಿಯೇ ಬ್ಲಾಗರ್.  ಬ್ಲಾಗಿಂಗ್ ಕೂಡ ಉತ್ತಮ ಆದಾಯ ತಂದುಕೊಡಬಲ್ಲ ವ್ಯವಹಾರ ಆಗಿದೆ. ಒಂದು ರೂಪಾಯಿಯ ಖರ್ಚು ಇಲ್ಲದೆ ನೀವು ಬ್ಲಾಗ್ ಖಾತೆಯನ್ನು ತೆರೆಯಬಹುದು. ಬ್ಲಾಗಿಂಗ್ ಮೂಲಕ ಹೆಚ್ಚು ಹಣ ಸಂಪಾದಿಸಬೇಕೆಂದರೆ ಹೆಚ್ಚು ತಾಳ್ಮೆ, ಕಠಿಣ ಪರಿಶ್ರಮ ಬೇಕಾಗುತ್ತದೆ.

ಯೂಟ್ಯೂಬ್ ಚಾನಲ್

ಇನ್ನು ಟ್ಯಾಲೆಂಟ್ ಒಂದಿದ್ದರೆ ಶೂನ್ಯ ಬಂಡವಾಳದಲ್ಲಿ ದುಡಿಯಬಹುದಾದ ದಾರಿ ಇಲ್ಲಿದೆ ನೋಡಿ.. ಯೂಟ್ಯೂಬ್ ಚಾನಲ್ ಗಳಲ್ಲಿ ವೀಡಿಯೋಗಳನ್ನು ಅಪ್ಲೋಡ್ ಮಾಡುವ ಮೂಲಕ ಹಣ ಸಂಪಾದಿಸಬಹುದಾಗಿದೆ.. ಇದಕ್ಕೆ ಯಾವುದೇ ರೀತಿಯಾದ ಹಣವನ್ನು ಕೊಡಬೇಕಾಗಿಲ್ಲ.. ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡರೆ ಸಾಕು..

ಟೈಲರಿಂಗ್

ನಿಮ್ಮ 1 ತಿಂಗಳ ಸಮಯವನ್ನು ಟೈಲರಿಂಗ್ ಕಲಿಯುವುದಕ್ಕೆ ವ್ಯಯಿಸಿದರೆ ಸಾಕು.. ಇದರಿಂದ ಯಾವ ಇಂಜಿನಿಯರ್ ಗೂ ಕಡಿಮೆ ಇಲ್ಲದಂತೆ ದುಡಿಯಬಹುದು.. ಹೌದು ಇತ್ತೀಚೆಗಿನ ದಿನಗಳಲ್ಲಿ ಟೈಲರಿಂಗ್ ಒಂದು ಬಹು ಬೇಡಿಕೆಯ ಉದ್ಯೋಗವಾಗಿದೆ.. ಏಕೆಂದರೆ ಜನರು ಹೊಸ ಬಟ್ಟೆ ಗಳನ್ನು ಖರೀದಿಸಲೇ ಬೇಕು.. ಬಟ್ಟೆಯನ್ನು ಹೊಲಿಸಲೇ ಬೇಕು.. ಹೆಣ್ಣು ಮಕ್ಕಳ ಉಡುಗೆಗಳ ಹೊಲಿಗೆಯನ್ನು ಕಲಿತರೆ ಒಳ್ಳೆಯ ಆದಾಯವನ್ನು ಪಡೆಯಬಹುದಾಗಿದೆ.. ಇದಕ್ಕೆ ಒಂದು ಟೈಲರಿಂಗ್ ಮೆಷಿನ್ ಗಾಗಿ ಒಂದು 5 ಸಾವಿರ ಬಂಡವಾಳವಿದ್ದರೆ ಸಾಕು..

ಬ್ಯೂಟಿಷಿಯನ್

ಸೌಂದರ್ಯಪ್ರಜ್ಞೆ ಇರುವ ಇಂದಿನ ದಿನಗಳಲ್ಲಿ ಬ್ಯೂಟಿಷಿಯನ್ ಗೆ ಎಲ್ಲಿಲ್ಲದ ಬೇಡಿಕೆ ಇದೆ. ಅದರಲ್ಲೂ ಮನೆ ಬಾಗಿಲಿಗೆ ಸೇವೆ ನೀಡಿದರೆ ಇದರಿಂದ ಉತ್ತಮ ಲಾಭವನ್ನೆ ಪಡೆಯಬಹುದಾಗಿದೆ. ಬ್ಯೂಟಿಷಿಯನ್ ಜ್ಞಾನ ಹೊಂದಿರುವವರು ಈ ಉದ್ಯೋಗದಿಂದ ಹೆಚ್ಚೆಚ್ಚು ಆದಾಯವನ್ನು ಗಳಿಸಬಹುದಾಗಿದೆ. ಇಂತವರು ಮನೆ ಬಾಗಿಲಿಗೆ ಹೋಗಿ ಸೆವೆಯನ್ನು ಒದಗಿಸಲು ಸಿದ್ದರಾದಲ್ಲಿ ದೊಡ್ಡ ಪ್ರಮಾಣದಲ್ಲಿ ಲಾಭ ಪಡೆಯಲು ಸಾಧ್ಯ.

ಜ್ಯೂಸ್ ಸೆಂಟರ್

ಹೊರಗೆ ದುಡಿಯುವ ಜನರು ಹಸಿವು ಬಾಯಾರಿಕೆಗೆ ಮೊದಲು ಮೊರೆ ಹೋಗುವುದೇ ಜ್ಯೂಸ್ ಗಳಿಗೆ.. ಅದರಲ್ಲೂ ಆರೋಗ್ಯದ ಮೇಲೆ ಅತಿ ಹೆಚ್ಚು ಗಮನ ನೀಡುವ ಕಾಲವಿದು.. ಹಣ್ಣಿನ ಜ್ಯೂಸ್ ಸೆಂಟರ್ ಅನ್ನು ಇಟ್ಟು ಕ್ವಾಲಿಟಿ ಮತ್ತು ರುಚಿಯನ್ನು ಕಾಪಾಡಿಕೊಂಡರೆ ಒಳ್ಳೆಯ ಆದಾಯ ಗಳಿಸಬಹುದಾಗಿದೆ..

ಜೆ ರಾಕ್ಸ್ ಅಂಗಡಿ

ಇದು ಕೂಡ ಸ್ವಂತ ಉದ್ಯೋಗ ಮಾಡಲು ಒಂದು ಅತ್ಯುತ್ತಮ ವಿಧಾನ ವಾಗಿದೆ.. ನಿಮ್ಮ ಊರಿನ ಯಾವುದಾದರು ಶಾಲಾ ಕಾಲೇಜು ಇರುವ ಸ್ಥಳದಲ್ಲಿ ಕ್ಸೆರಾಕ್ಸ್ ಹಾಗೂ ಸ್ಟೇಷನರಿ ಅಂಗಡಿ ಇಟ್ಟರೆ ಒಳ್ಳೆಯ ಲಾಭ ಗಳಿಸಬಹುದು.. ಕಾಲೇಜುಗಳಲ್ಲಿ ಯಾವ ಮಟ್ಟಕ್ಕೆ ಜೆರಾಕ್ಸ್ ಮಾಡಿಸಲು ಕೊಡುತ್ತಾರೆ ಎಂಬುದು ಎಲ್ಲರಿಗೂ ತಿಳಿದೇ ಇದೆ..

ಟ್ಯೂಷನ್ ಸೆಂಟರ್

ಉದ್ಯೋಗ ಮಾಡಬಯಸುವವರು ವಿದ್ಯಾವಂತರಾಗಿದ್ದರೆ ಸಾಕು..‌ ಈ ಕೆಲಸವನ್ನು ನಿರಾಯಾಸವಾಗಿ ಮಾಡಬಹುದು.. ಇದಕ್ಕೆ ಒಂದು ಪುಟ್ಟ ಹಾಲ್ ಅಥವಾ ರೂಮ್ ಇದ್ದರೇ ಸಾಕು.. ಬಂಡವಾಳವೇ ಬೇಕಾಗಿಲ್ಲ.. ಇದಕ್ಕೆ ನೀವು ಬುದ್ದಿವಂತರಾಗಿದ್ದರೆ ಸಾಕು.. ಜೊತೆಗೆ ನಿಮ್ಮ ಕೆಲಸವನ್ನು ಜಾಹಿರಾತು ಮಾಡಿ ಅತಿ ಹೆಚ್ಚು ಆದಾಯ ಪಡೆಯಬಹುದಾಗಿದೆ.