ಆರೋಗ್ಯ

ಶುಂಠಿ ನೀರನ್ನು ಕುಡಿಯೋದ್ರಿಂದ ಆಗೋ ಪ್ರಯೋಜನಗಳನ್ನು ಕೇಳಿದ್ರೆ ಈಗ್ಲೇ ಕುಡಿಯೋದಕ್ಕೆ ಸ್ಟಾರ್ಟ್ ಮಾಡ್ತೀರಾ..!

By admin

January 14, 2019

ಟೀ ರುಚಿ ಹೆಚ್ಚಿಸುವ ಜೊತೆಗೆ ಗಂಟಲು ನೋವನ್ನು ಗುಣಪಡಿಸುವ ಕೆಲಸವನ್ನು ಮಾತ್ರ ಶುಂಠಿ ಟೀ ಮಾಡುವುದಿಲ್ಲ. ಮಸಾಲೆ ರೂಪದಲ್ಲಿ ಬಳಸುವ ಶುಂಠಿ ಬಹು ಉಪಯೋಗಿ. ಇದ್ರ ನೀರನ್ನು ಪ್ರತಿದಿನ ಕುಡಿಯುವುದರಿಂದ ಸಾಕಷ್ಟು ಪ್ರಯೋಜನಗಳಿವೆ. ಇದ್ರಲ್ಲಿರುವ ಆ್ಯಂಟಿ ಬ್ಯಾಕ್ಟಿರಿಯ, ಆ್ಯಂಟಿ ಫಂಗಲ್ ಅಂಶ ದೇಹವನ್ನು ಆರೋಗ್ಯಕರವಾಗಿರಿಸುತ್ತದೆ.

ಊಟ ಮಾಡಿದ 20 ನಿಮಿಷದ ನಂತ್ರ ಒಂದು ಕಪ್ ಶುಂಠಿ ನೀರನ್ನು ಕುಡಿಯಿರಿ. ಇದು ದೇಹದಲ್ಲಿರುವ ಆಮ್ಲ ಪ್ರಮಾಣವನ್ನು ನಿಯಂತ್ರಿಸುತ್ತದೆ. ಇದ್ರಿಂದ ಹೊಟ್ಟೆಯಲ್ಲಾಗುವ ಉರಿ ಕಡಿಮೆಯಾಗುತ್ತದೆ.

ಶುಂಠಿಯನ್ನು ಕುಟ್ಟಿ ನೀರಿಗೆ ಹಾಕಿ ಕುದಿಸಿ ಆ ನೀರನ್ನು ಕುಡಿಯುವುದರಿಂದ ಜೀರ್ಣಕ್ರಿಯೆ ಸುಲಭವಾಗುತ್ತದೆ.

ಶುಂಠಿ ನೀರು ರಕ್ತದಲ್ಲಿರುವ ಸಕ್ಕರೆ ಪ್ರಮಾಣವನ್ನು ನಿಯಂತ್ರಣದಲ್ಲಿಡುತ್ತದೆ. ಇದ್ರಿಂದ ಮಧುಮೇಹ ಕಡಿಮೆಯಾಗುತ್ತದೆ.

ಶುಂಠಿ ರಸನ್ನು ನೀರಿನಲ್ಲಿ ಕುದಿಸಿ ಕುಡಿಯುವುದರಿಂದ ಕೆಮ್ಮು ಕಡಿಮೆಯಾಗುತ್ತದೆ.

ಶುಂಠಿ ನೀರು ಶ್ವಾಸಕೋಶ, ಅಂಡಾಶಯ, ಸ್ತನ, ಚರ್ಮದ ಕ್ಯಾನ್ಸರ್ ವಿರುದ್ಧ ಹೋರಾಡಲು ಸಹಕಾರಿ.

ಶುಂಠಿ ರಸ ಸೇವನೆ ಮಾಡುವುದರಿಂದ ತಲೆ ನೋವು ಕಡಿಮೆಯಾಗುತ್ತದೆ.

ಶುಂಠಿ ನೀರು ಕುಡಿಯುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಕೆಮ್ಮು, ಜ್ವರ, ಸೋಂಕಿನ ವಿರುದ್ಧ ದೇಹ ಹೋರಾಡಲು ಸಜ್ಜಾಗುತ್ತದೆ.