ರಿಯಲನ್ಸ್ ಮಾಲೀಕತ್ವದ ಜಿಯೋ ದೇಶದ ಟೆಲಿಕಾಂ ವಲಯದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ತನ್ನ ಆಕರ್ಷಕ ಆಫರ್ ಮತ್ತು ವೇಗದ ಇಂಟರ್ನೆಟ್ ನಿಂದಾಗಿ ಜನರಿಗೆ ಹತ್ತಿರವಾಗಿದೆ. ಇದಲ್ಲದೇ 2G – 3G ಗ್ರಾಹಕರನ್ನು ಸೆಳೆಯುವ ಸಲುವಾಗಿ ಕಡಿಮೆ ಬೆಲೆಗೆ 4G ಫೀಚರ್ ಫೋನ್ ಅನ್ನು ಲಾಂಚ್ ಮಾಡಿದೆ.
ಸದ್ಯ ಜಿಯೋ ಪಾಳಯದಿಂದ ಮತ್ತೊಂದು ಶಾಕಿಂಗ್ ಸುದ್ದಿಯೊಂದು ಲಭ್ಯವಾಗಿದೆ. ಮುಖೇಶ್ ಅಂಬಾನಿ ಈಗಾಗಲೇ ಜಿಯೋ ಫೋನ್ ಪ್ರೋಡೆಷನ್ ಅನ್ನು ನಿಲ್ಲಿಸುವಂತೆ ಸೂಚಿಸಿದ್ದಾರೆ ಎಂದು ಈಗಾಗಲೇ ತಿಳಿಸಿದ್ದೇವೆ, ಅಲ್ಲದೇ ಆಂಡ್ರಾಯ್ಡ್ ಫೋನ್ ಅನ್ನು ಲಾಂಚ್ ಮಾಡುವ ಸನಿಹದಲ್ಲಿದೆ ಎನ್ನುವುದು ಸದ್ಯದ ಸ್ಟೋರಿ. ಆದರೆ ಇದಕ್ಕಿಂತ ಹೆಚ್ಚಿನ ಸುದ್ದಿಯೊಂದಿದೆ.
ಜಿಯೋ ಆಂಡ್ರಾಯ್ಡ್ ಫೋನ್ ಸಂಫೂರ್ಣ ಉಚಿತ:-
ಈಗಾಗಲೇ ಜಿಯೋ ಫೋನ್ ಅನ್ನು ಉಚಿತವಾಗಿ ನೀಡುತ್ತಿರುವ ಜಿಯೋ ಇದೇ ಮಾದರಿಯಲ್ಲಿ ಆಂಡ್ರಾಯ್ಡ್ ಫೋನ್ ಅನ್ನು ಬಿಡುಗಡೆ ಮಾಡಲು ಸಿದ್ಧತೆ ನೀಡಿದೆ ಎನ್ನಲಾಗಿದೆ. ಇದರಿಂದ ಮಾರುಕಟ್ಟೆಯಲ್ಲಿ ಜಿಯೋ ಸಹ ಸಾಹಸ ಮಾಡಲಿದೆ.
ಏರ್‌ಟೆಲ್ ಕಥೆ ಮುಗಿತು:-
ಈಗಾಗಲೇ ಏರ್‌ಟೆಲ್ ಸಹ ಕಡಿಮೆ ಬೆಲೆಗೆ ಸ್ಮಾರ್ಟ್‌ಫೋನ್ ಲಾಂಚ್ ಮಾಡಿರುವ ಹಿನ್ನಲೆಯಲ್ಲಿ ಜಿಯೋ ಉಚಿತ ಆಂಡ್ರಾಯ್ಡ್ ಫೋನ್ ಹಂಚಲಿದೆ ಎನ್ನಲಾಗಿದೆ ಇದರಿಂದ ಏರ್‌ಟೆಲ್ ಕಥೆಯನ್ನು ಮುಗಿಸಲಿದೆ.
ಹೊಸ ಸಹಾಯ:-
ಈಗಾಗಲೇ ಜಿಯೋ ಹೊಸ ಸಾಹಸಗಳಿಗೆ ಕೈ ಹಾಕಿರುವುದನ್ನು ನಾವು ಕಾಣಬಹುದಾಗಿದೆ. ಇದೇ ಮಾದರಿಯಲ್ಲಿ ಜಿಯೋ ಆಂಡ್ರಾಯ್ಡ್ ಫೋನ್ ಸಂಪೂರ್ಣ ಉಚಿತವಾಗಿ ನೀಡಿದರೂ ಯಾವುದೇ ರೀತಿಯಲ್ಲಿ ಆಶ್ಚರ್ಯಪಡಬೇಕಾಗಿಲ್ಲ.
ಹೊಸ ವರ್ಷಕ್ಕೆ ಗಿಫ್ಟ್:-
ಮುಖೇಶ್ ಅಂಬಾನಿ ಹೊಸ ವರ್ಷದ ಸಂಭ್ರಮವನ್ನು ಇನಷ್ಟು ಹೆಚ್ಚಿಸುವ ಸಲುವಾಗಿ ಉಚಿತ ಜಿಯೋ ಫೋನ್ ಅನ್ನು ಲಾಂಚ್ ಮಾಡಲಿದ ಎನ್ನಲಾಗಿದೆ. ಇದರಿಂದ ಮತ್ತಷ್ಟು ಗ್ರಾಹಕರನ್ನು ಸೆಳೆಯಲಿದೆ ಎನ್ನಲಾಗಿದೆ.
ಜಿಯೋ ಏಕಸ್ವಾಮ್ಯತೆ:-
ಈಗಾಗಲೇ ಮಾರುಕಟ್ಟೆಯಲ್ಲಿ 140 ಮಿಲಿಯನ್ ಗ್ರಾಹಕರನ್ನು ತನ್ನ ಬುಟ್ಟಿಗೆ ಹಾಕಿಕೊಂಡಿರುವ ಜಿಯೋ ಹೊಸದಾಗಿ ಆಂಡ್ರಾಯ್ಡ್ ಫೋನ್ ಅನ್ನು ಬಿಡುಗಡೆ ಮಾಡಿ ಟೆಲಿಕಾಂ ವಲಯದಲ್ಲಿ ಏಕಸ್ವಾಮ್ಯತೆಯನ್ನು ಸಾಧಿಸಲಿದೆ ಎನ್ನುವ ಮಾತು ಕೇಳಿಬಂದಿದೆ.