ಶಿವ, ನೆನಪಾಗುವೆ ನೀನು ಪ್ರತಿಕ್ಷಣವೂ…ಶಿವ ಮುಂಜಾನೆ – ಶಿವ ಮಧ್ಯಾಹ್ನ – ಶಿವ ಸಂಜೆ – ಶಿವರಾತ್ರಿ..
ರೈತನೊಬ್ಬ ಉರುಳಿಗೆ ತಲೆಕೊಟ್ಟಾಗ…….,ಗೃಹಿಣಿಯೊಬ್ಬಳು ಬೆಂಕಿಗೆ ಆಹುತಿಯಾದಾಗ………,ಹಸುಳೆಯೊಂದು ಅತ್ಯಾಚಾರಕ್ಕೆ ಒಳಗಾದಾಗ………,ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಾಗ……….,ಶಾಲಾ ಮಕ್ಕಳು ಅಪಘಾತಕ್ಕೆ ಒಳಗಾದಾಗ…………,ವೃದ್ಧರನ್ನು ಅನಾಥಾಶ್ರಮದಲ್ಲಿ ಕಂಡಾಗ………………,ವಂಚಕರು ವಿಧಾನಸೌಧ – ಪಾರ್ಲಿಮೆಂಟಿನಲ್ಲಿ ಕುಳಿತಿರುವಾಗ…………,
ಸುಳ್ಳುಗಾರರು ಟಿವಿಯಲ್ಲಿ ಮಾತನಾಡುವಾಗ……..,ಭ್ರಷ್ಟ ರು ಅಧಿಕಾರ ನಡೆಸುವಾಗ……….,ಕಾಮಿಗಳು ಕಾವಿ ತೊಟ್ಟಿರುವಾಗ……….,ಅನ್ನ ತಿನ್ನುವವರು ದೇಶದ್ರೋಹಿಗಳಾದಾಗ…….…,ಮನುಷ್ಯನನ್ನು ಮುಟ್ಟಿಸಿಕೊಳ್ಳಲೇ ಅಸಹ್ಯ ಪಡುವವರಿರುವಾಗ………,ಕುಡಿಯುವ ನೀರಿಗೆ ಹೊಡೆದಾಡುತ್ತಿರುವಾಗ…………,ತಿನ್ನುವ ಆಹಾರಕ್ಕೆ ಕಲಬೆರಕೆ ಮಾಡುತ್ತಿರುವಾಗ……..,ಸೈನಿಕರ ಪತ್ನಿಯರು ವಿಧವೆಯರಾಗುತ್ತಿರುವಾಗ…………,ಮೋಸಗಾರರು ಜ್ಯೋತಿರ್ಲಿಂಗಗಳನ್ನು ಸುತ್ತುತ್ತಿರುವಾಗ……..,ಕಪಟಿಗಳು ನಿನ್ನ ಹೆಸರಲ್ಲಿ ಉಪವಾಸ – ಜಾಗರಣೆ ಮಾಡುತ್ತಿರುವಾಗ…..,
ನೆನಪಾಗುವೆ ನೀನು ಶಿವ…….ಆದರೆ,………….ಶತಶತಮಾನಗಳಿಂದ ಬರುವೆಯೆಂದು ನಂಬಿಸಿ ಎಂದಿಗೂ ಬಾರದ ಮೋಸಗಾರ ನೀನೋ…..ಅಥವಾ,ನೀನು ಬರುವೆಯೆಂದು ಶತಶತಮಾನಗಳಿಂದ ಕಾಯುತ್ತಿರುವ ಮೂರ್ಖ ನಾನೋ……….
ಒಂದಂತು ನಿಜ…ನೀನು ಪ್ರತ್ಯಕ್ಷವಾಗುವವರೆಗೂ, ನಿನ್ನನ್ನು ನಂಬುವುದಿಲ್ಲ. ನೀನು ಎಷ್ಟೇ ದೊಡ್ಡವನಾಗಿರು, ನೀನು ಎಷ್ಟೇ ಎತ್ತರದಲ್ಲಿರು, ನೀನು ಎಷ್ಟೇ ಶಕ್ತಿವಂತನಾಗಿರು,ನೀನು ಎಷ್ಟೇ ಬುದ್ದಿವಂತನಾಗಿರು, ನನ್ನಂತ ಸಾಮಾನ್ಯನ ಕಷ್ಟ ಸುಖ ನೋವು ನಲಿವುಗಳಿಗೆ ಸ್ಪಂದಿಸಿ ಸರಳವಾಗಿ ಸಹಜವಾಗಿ ಮಾರ್ಗದರ್ಶನ ಮಾಡುವವರೆಗೂ ,
ನೀನೊಂದು ಭ್ರಮೆ, ನೀನೊಂದು ಕಲ್ಪನೆ, ನೀನೊಂದು ಶಿಲೆ, ನೀನೊಂದು ಗೊಂಬೆ, ನೀನೊಂದು ಭಾವ,ನೀನೊಂದು ತರ್ಕ, ನೀನೊಂದು ಸಂಕೇತ, ನೀನೆಂದಿಗೂ ವಾಸ್ತವವಾಗಲಾರೆ.ಎಚ್ಚರಿಕೆ…
( ಇದು ಕೇವಲ ಶಿವನಿಗೆ ಮಾತ್ರವಲ್ಲ. ಎಲ್ಲಾ ಧರ್ಮಗಳ ಎಲ್ಲಾ ದೇವರೆಂಬ ಭಾವಗಳಿಗೂ ಅನ್ವಯ.)ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ. ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,ಮನಸ್ಸುಗಳ ಅಂತರಂಗದ ಚಳವಳಿ. ವಿವೇಕಾನಂದ. ಹೆಚ್.ಕೆ.